ಬೊಗಸೆಯೊಳಗಿನ ಬಿಂದು
ಎನ್. ಶೈಲಜಾ ಹಾಸನ
ಬಿಟ್ಟು ಬಿಡು ಗೆಳೆಯ
ನನ್ನಷ್ಟಕ್ಕೆ ನನ್ನ
ರೆಕ್ಕೆ ಹರಿದ ಹಕ್ಕಿ
ಹಾರಿಹೋಗುವುದೆಲ್ಲಿ
ಇಷ್ಟಿಷ್ಟೆ ಕುಪ್ಪಳಿಸಿ
ಅಲ್ಲಲ್ಲೆ ಅಡ್ಡಾಡಿ
ನಿನ್ನ ಕಣ್ಗಾವಲಲ್ಲಿಯೇ
ಸುತ್ತಿ ಸುಳಿದು
ಒಂದಿಷ್ಟೆ ಸ್ವಚ್ಛಗಾಳಿ
ಸೋಕಿದಾ ಕ್ಷಣ
ಧನ್ಯತೆಯ ಪುಳಕ
ತಣ್ಣನೆಯ ನಡುಕ
ಎದೆಯ ತಿದಿಯೊಳಗೆ
ನೀನೇ ಒತ್ತಿದ ಕಾವು
ಭಾವನೆಗಳ ಬೇಯಿಸಿ
ಮನವೀಗ ಚಿತೆಯೊಳಗೆ
ಬೆಂದ ಕುಂಭ
ಬಿಟ್ಟರೂ ಬಿಡಲಾರೆ
ಎನುವ ಮಾಯೆ
ಅಟ್ಟಾಡಿಸುತ್ತಿದೆ
ಗೆಲುವಿನ ಹಾದಿಯ
ನೀನೇ ಹಾರ ಬಿಟ್ಟರೂ
ರೆಕ್ಕೆ ಇಲ್ಲದ ನಾನು
ಮತ್ತೇ ನಿನ್ನ ಉಡಿಗೆ
ಬೊಗಸೆಯೊಳಗಿನ ಬಿಂದು
ಮುಷ್ಠಿಯೊಳಗೆ ಆವಿ
ಎತ್ತತ್ತ ಸರಿದರೂ
ಮತ್ತೆ ಅಲ್ಲಿಗೇ
ಪಯಣದ ಹಾದಿ
ದೂರ ದೂರಕೆ
********
ಸೊಗಸಾದ ಅರ್ಥಭರಿತ ಕವಿತೆ ಮೇಡಂ
ಧನ್ಯವಾದಗಳು ಚಂದ್ರು
Very nice mam
ಧನ್ಯವಾದಗಳು
ಪಯಣ ಮರೆತ ದಾರಿ…ಅರ್ಥಪೂರ್ಣ ಶೈಲಾ.