Month: March 2020

ಕಾವ್ಯಯಾನ

ಗೆಳತಿ ನಕ್ಕುಬಿಡು ಮೂಗಪ್ಪ ಗಾಳೇರ ನಾನು ನೋಡಿದ ಹುಡುಗಿಯರೆಲ್ಲಾ….. ಪ್ರೇಯಸಿಯರಾಗಿದ್ದರೆ ನಾನು ಗೀಚಿದ ಸಾಲುಗಳೆಲ್ಲಾ ಕವಿತೆಗಳಾಗಬೇಕಿತ್ತಲ್ಲ! ದಡ್ಡಿ….. ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ ಗೊತ್ತಿದ್ದಂತೆ ಕಾಣುತ್ತಿಲ್ಲ! ಕತ್ತಲನ್ನು ನುಂಗಿ ಬೆಳಕಾಯಿತೋ…! ಬೆಳಕನ್ನು ನುಂಗಿ ಕತ್ತಲಾಯಿತೋ…! ನೀನು ನನ್ನ ಜೊತೆ ಇಟ್ಟ ಒಂದೊಂದು ಹೆಜ್ಜೆಯೂ ಹಳೆ ಸಿನಿಮಾದ ಹಾಡುಗಳಂತೆ ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ ಒಮ್ಮೊಮ್ಮೆ ಎದೆಭಾರ ಆದಾಗ ಕವಿತೆಯ ಸಾಲು ಬೇರೆಯಾಗಬಹುದು ಕವಿತೆ ಮಾತ್ರ ಎಂದೆಂದೂ ನೀನೆ ಒಂದೊಮ್ಮೆ ನನ್ನ ಕವಿತೆಯ ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ ಅದು […]

ಪುಸ್ತಕ ಸಂಭ್ರಮ

ಕತ್ತಲೆಯೊಳಗಿನ ಮಹಾಬೆಳಗು ಲೇಖಕರು : ಡಾ. ಡಿ.ಎ.ಬಾಗಲಕೋಟ ಪ್ರಕಾಶಕರು : ಅಜಬ್ ಪ್ರಕಾಶನ, ನಿಪ್ಪಾಣಿ

ಕಾವ್ಯಯಾನ

ದೇವರ ದೇವ ಅಂಜನಾ ಹೆಗಡೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂದವ ಕಾಲಕ್ಕೆ ಕಿವುಡಾಗಿ ಕಣ್ಣುಮುಚ್ಚಿ ಉಟ್ಟಬಟ್ಟೆಯಲ್ಲೇ ಧ್ಯಾನಕ್ಕೆ ಕುಳಿತಿದ್ದಾನೆ ತಂಬೂರಿ ಹಿಡಿದು ತಂತಿಗಳ ಮೇಲೆ ಬೆರಳಾಡಿಸುತ್ತ ಶ್ರುತಿ ಹಿಡಿಯುತ್ತಾನೆ ಬೆರಳಲ್ಲಿ ಹುಟ್ಟಿದ ಬೆಳಕಿನ ಕಿರಣವೊಂದು ನರಗಳಗುಂಟ ಹರಿದು ಬೆಂಕಿಯಾಗಿ ಮೈಗೇರಿದೆ ಉಸಿರೆಳೆದುಕೊಳ್ಳುತ್ತಾನೆ ದೇವರ ಗೆಟಪ್ಪಿನಲ್ಲಿ ಕಾಲಮೇಲೆ ಕೈಯೂರಿದ್ದಾನೆ ಕಪ್ಪು ಫ್ರೆಮಿನ ದಪ್ಪಗಾಜಿನ ಕನ್ನಡಕ ರೂಪಕವಾಗಿ ಮುಚ್ಚಿದ ಕಿವಿಯ ಮೇಲೆ ಬೆಚ್ಚಗೆ ಕೂತಿದೆ ಕೈಗೆ ಸಿಗದ ಕಣ್ಣಿಗೆ ಕಾಣಿಸದ ಶಬ್ದ ಹಿಡಿಯಲು ಕುಳಿತವನ ಮೈಯೆಲ್ಲ ಕಣ್ಣು…. ಮುಚ್ಚಿದ ಕಣ್ಣೊಳಗೊಂದು […]

ಕಾವ್ಯಯಾನ

ಷರಾ ಬರೆಯದ ಕವಿತೆ ಡಾ.ಗೋವಿಂದ ಹೆಗಡೆ ಇಂದು ಅವ ತೀರಿದನಂತೆ ತುಂಬ ದಿನಗಳಿಂದ ಅವ ಬದುಕಿದ್ದೇ ಗೊತ್ತಿರಲಿಲ್ಲ ಒಂದು ಕಾಲದಲ್ಲಿ ನೆಲ ನಡುಗಿಸುವ ಹೆಜ್ಜೆಯ ಭಾರಿ ಮೀಸೆಯ ಹುಲಿ ಕಣ್ಣುಗಳ ಅವ ನಡೆಯುತ್ತಿದ್ದರೆ ನನಗೆ ಮಂಚದ ಕೆಳಗೆ ಅವಿತು ಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಆಗ ಕವಿತೆ ಕನಸಲ್ಲೂ ಸುಳಿಯುತ್ತಿರಲಿಲ್ಲ ಮತ್ತೆ ಯಾವಾಗಲೋ “ಅವನಾ? ತುಂಬಾ ಕುಡೀತಾನೆ ರೈಲಿನ ಎಂಜಿನ್ ಹಾಗೆ ಸದಾ ಹೊಗೆ ಬಿಡ್ತಾನೆ” ಹೊಟ್ಟೆ ಊದಿ ಕಣ್ಣು ಹಳದಿಗೆ ತಿರುಗಿ ಲಿವರ್ ಫೇಲ್ಯೂರ್ ನ […]

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಬ ಬಸವರಾಜ ಕಹಳೆ ನೀಲವ್ವ ಓದಿದಷ್ಟು ವಿಸ್ತಾರ ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು. ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು. ಆಗಸದ […]

ಅನುವಾದ ಸಂಗಾತಿ

ಎರಡನೆಯ ಅವತಾರ ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್) ಕನ್ನಡಕ್ಕೆ: ಕಮಲಾಕರ ಕಡವೆ ಎರಡನೆಯ ಅವತಾರ ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತಡೇಗೆಗಾರನ ಕರೆಯ ಕೇಳಲಾರದು ಡೇಗೆಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆಬರಿಯೆ ಅರಾಜಕತೆ ಆವರಿಸಿದೆ ಜಗದಗಲಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋಉತ್ಕಟ ಉದ್ರೇಕವೇ ತುಂಬಿಕೊಂಡಿದೆ ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆಎರಡನೆಯ ಅವತಾರ ಖಂಡಿತ ಬಳಿಸಾರಿದೆಎರಡನೆಯ ಅವತಾರವೆಂದೊಡನೆಯೇವಿಶ್ವಚೇತನವೊಂದರ ವಿಶಾಲ ಆಕಾರಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟಹೊತ್ತ ನರಸಿಂಹ ರೂಪವೊಂದುಹಗುರ ಹೆಜ್ಜೆ […]

ಕಾವ್ಯಯಾನ

ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************

ಕಾವ್ಯಯಾನ

ಗಝಲ್ ಶಶಿಕಾಂತೆ ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ.. ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ.. ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು. ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ.. ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ. ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ. ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ.. ಅವನ ಆಟ ನೋಡುತಾ,ಅವನಿಗೇ […]

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ […]

ನಮ್ಮ ಕವಿ

ವಿಜಯಕಾಂತ ಪಾಟೀಲ ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..! ಅವರು ಪಡೆದ ಹಲವಾರು ಗೌರವಗಳೂ.!! ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು… ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು… ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು… ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ […]

Back To Top