ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಪಾಪ ಮೂಲ:ಫಾರೂಫ್ ಫರಾಕ್ಜಾದ್ (ಇರಾನಿ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರಕಡವೆ ಸುಖಭರಿತ ಪಾಪವೊಂದೆಸಗಿದೆ ನಾನುಉರಿವ ಬೆಚ್ಚಗಿನ ಆಲಿಂಗನದಲ್ಲಿಪಾಪವೆಸಗಿದೆ ನಾನು ಬಿಸಿ ಕಬ್ಬಿಣದಂತಬಾಹುಗಳಿಂದ ಸುತ್ತುವರಿದಿದ್ದಾಗ. ಆ ಕತ್ತಲ, ಶಾಂತ ಏಕಾಂತದಲ್ಲಿನಾನವನ ಗುಟ್ಟಬಚ್ಚಿಟ್ಟ ಕಣ್ಣುಗಳೊಳಗೆ ಇಣುಕಿದೆ.ಅವನ ಅಗತ್ಯ-ಭರಿತ ಕಂಗಳ ಬೇಡಿಕೆಗೆ ಪ್ರತಿಯಾಗಿನನ್ನ ಚಂಚಲ ಹೃದಯ ಕಂಪಿಸಿತು. ಆ ಕತ್ತಲ, ಶಾಂತ ಏಕಾಂತದಲ್ಲಿಕುಳಿತಿದ್ದೆ ನಾನು ಅವನ ಪಕ್ಕ ಕೆದರಿದ ಕೂದಲಲ್ಲಿಅವನ ತುಟಿಗಳು ಸುರಿದವು ಕಾಮನೆಗಳ ನನ್ನ ತುಟಿಗಳ ಮೇಲೆನನ್ನ ಹೃದಯದ ಹುಚ್ಚು ಸಂಕಟದಿಂದ ಬಿಡುಗಡೆ ಪಡೆದೆ ನಾನು. ಅವನ ಕಿವಿಯೊಳಗುಸುರಿದೆ ಪ್ರೇಮ ಕತೆಯಬಯಸುವೆ ನಿನ್ನ, ಓ ನನ್ನ ಬಾಳ ಸಂಗಾತಿಯೇಬಯಸುತ್ತೇನೆ ನಿನ್ನ ಜೀವ ತುಂಬುವ ಆಲಿಂಗನವಓ ನನ್ನ ಹುಚ್ಚು ಪ್ರೇಮಿಯೇ. ಬಯಕೆ ಅವನ ಕಣ್ಣಲ್ಲಿ ಕಿಡಿಯೊಂದ ಹೊತ್ತಿಸಿತು;ಬಟ್ಟಲಲಿ ಮಧ್ಯ ನರ್ತಿಸಲು ತೊಡಗಿತು.ಕೋಮಲ ಹಾಸಿಗೆಯಲ್ಲಿ ನನ್ನ ದೇಹಅವನೆದೆಯ ಮೇಲೆ ಉನ್ಮಾದದಲ್ಲಿ ಕಂಪಿಸಿತು. ಸುಖಭರಿತ ಪಾಪವೊಂದೆಸಗಿದೆ ನಾನುನಡುಗುವ, ಸ್ತಬ್ಧ ಆಕಾರದ ಪಕ್ಕದಲ್ಲಿಓ ದೇವರೇ, ಯಾರಿಗೆ ಗೊತ್ತು ನಾನೇನು ಮಾಡಿದೆಆ ಕತ್ತಲ ಶಾಂತ ಏಕಾಂತದಲ್ಲಿ. ****** “The Sin” I sinned a sin full of pleasure,In an embrace which was warm and fiery.I sinned surrounded by armsthat were hot and avenging and iron. In that dark and silent seclusionI looked into his secret-full eyes.my heart impatiently shook in my breastIn response to the request of his needful eyes. In that dark and silent seclusion,I sat dishevelled at his side.his lips poured passion on my lips,I escaped from the sorrow of my crazed heart. I whispered in his ear the tale of love:I want you, o life of mine,I want you, O life-giving embrace,O crazed lover of mine, you. desire sparked a flame in his eyes;the red wine danced in the cup.In the soft bed, my bodydrunkenly quivered on his chest. I sinned a sin full of pleasure,next to a shaking, stupefied form.o God, who knows what I didIn that dark and quiet seclusion. *******

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವೈರಸ್ ಅಶ್ವಥ್ ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು ಭೂತಾಯ್‌ ಮುಂದ್‌ ಗತ್ತು ಗಮ್ಮತ್ತು ವೈರಸ್‌ ಬಂತು ಮಂಡಿಯೂರು ಅಂತು ನವರಂಗೀ ಮಾಧ್ಯಮ್‌ಗಳಾಗೆ ಪಟತೆಕ್ಕಂಡ್‌ ವಾಲಾಡುವಾಗೇ ಕಣ್ಣಿಗ್‌ ಕಾಣ್ದಿರ್ ಅಣುವೊಂದ್‌ ಬಂತು ಕೈಕಾಲ್‌ ಕಟ್ಕಂಡ್‌ ಮನೆಲ್ಕೂರ್‌ ಅಂತು ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ ಕಣ್ಣಾಗ್‌ ಕಣ್ಣಿಟ್‌ ನೋಡೋದಾಗ್ದೇನೆ ಕಿಂಚಿತ್‌ ಅನ್ನೋ ವೈರಸ್ಸೇ ಬರ್‌ಬೇಕಾತು ನಮ್‌ ಸಂಬಂಧ್‌ಗೋಳ್‌ ಏನಂತ ತಿಳ್‌ಸ್ತು ನಮ್‌ ಕೈತೊಳ್ಕೊಂಡ್ರಷ್ಟ್‌ ಸಾಕಾಗಲ್ಲ ಮನ್ಸ್‌ ಉಜ್ಜುಜ್ಜಿ ತೊಳ್ಕೊಬೇಕೆಲ್ಲ ವದ್ದ್‌ ವೋಡ್ಸೋಕ್‌ ಮುಂಚೆ ವೈರಸ್ಸನ್ನ ಎತ್ತ್‌ ಹಿಡೀಬೇಕಾಗೈತೆ ಮನ್ಸತ್ವಾನಾ ********************

ಕಾವ್ಯಯಾನ Read Post »

ಇತರೆ

ವಿಶ್ವ ಗುಬ್ಬಚ್ಚಿಗಳ ದಿನ

ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಕೆ.ಶಿವು ಲಕ್ಕಣ್ಣವರ ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಅದಕ್ಕಾಗಿ ಆ ನೆಪದಲ್ಲಿ ಈ ಗುಬ್ಬಚ್ಚಿಗಳ ಕುರಿತಾದ ಈ ಲೇಖನ… ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ… ಈಗಲೂ ಬೇರೆ ಊರು ಇರಲಿ, ನಮ್ಮ ಊರಿನಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳು ಗೋಡು ಕಟ್ಟುತ್ತಿವೆ. ವಾಸಿಸುತ್ತಿವೆ. ಅಷ್ಟಿಷ್ಟು ಇರುವ ಈ ಗುಬ್ಬಚ್ಚಿಗಳು ಹಾಗೋ-ಹೀಗೋ ಹೇಗೋ ವಾಸಿಸುತ್ತವೆ… ಒಂದಿಷ್ಟು ದಿನಗಳ ವರೆಗೆ ಕಣ್ಮರೆಯಾಗಿದ್ದ ಈ ಗುಬ್ಬಚ್ಚಿಗಳು ಈಗ ಒಂದಿಷ್ಟು ನೋಡಲು ಸಿಗುತ್ತಿವೆ. ಅದೇ ಪುಣ್ಯ. ಈ ಗುಬ್ಬಚ್ಚಿಗಳು ಮಣ್ಣಿನ ಮನೆಗಳ ಜಂತಿಯ ಬಿರುಕುಗಳಲ್ಲಿ ಅಥವಾ ಅಲ್ಲಲ್ಲಿ ಮನೆಗಳ ಸಂದಿ-ಗೊಂದಿಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಗುಬ್ಬಚ್ಚಿಗಳು ವಾಸಿಸುವ ಜಂತಿಯ ಬಿರುಕುಗಳು ಅಥವಾ ಸಂದಿ-ಗೊಂದಿಗಳಲ್ಲೇ ತಮ್ಮ ವಂಶೋದ್ಧಾರದ ಪಡಿಪಾಟಲನ್ನು ತೀರಿಸಿಕೊಳ್ಳುತ್ತಿವೆ. ವಂಶೋದ್ಧಾರವೆಂದರೆ ಅದೇ ಗೂಡುಗಳಲ್ಲಿ ತತ್ತಿ(ಮೊಟ್ಟೆ) ಇಡುವುದು, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದು, ಆ ಮರಿ ತುಸು ರಕ್ಕೆ:ಪುಕ್ಕ ಮೂಡಿದೊಡನೆ ಹಾರುವುದು. ಹೀಗೆ ವಂಶೋದ್ಧಾರದ ಸಂಸ್ಕಾರದಲ್ಲಿ ಗುಬ್ಬಚ್ಚಿಗಳು ಅಷ್ಟಿಷ್ಟಾಗಿ ಒಂದಿಷ್ಟು ಜೀವನ ಕಾಣುತ್ತಿವೆ … ಸಾಂದರ್ಭಿಕವಾಗಿ ಹೇಳುತ್ತೇನೆ, ಗುಬ್ಬಚ್ಚಿಗಳಂತೆ ನಮ್ಮ ಹಳ್ಳಿಯಲ್ಲಿ ಕಾಗೆ, ಗೂಬೆಗಳು, ಅಲ್ಲಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ರತ್ನ ಪಕ್ಷಿ (ಹಳ್ಳಗಳಲ್ಲಿ ಈ ರತ್ನ ಪಕ್ಷಿಗೆ ಸಾಂಬಾರಗಾಗಿ ಅಂತಲೂ ಕರೆಯುತ್ತಾರೆ)ಗಳು, ಗೊರವಂಕಗಳು ಇತ್ಯಾದಿ ಪಕ್ಷಿಗಳು ಅಪರೂಪದ ಅತಿಥಿಯಂತೆ ಕಾಣಸಿಗುತ್ತವೆ… ಹೊಲ-ಗದ್ದೆ, ತೋಟಗಳಲ್ಲೂ ಗಣನೀಯವಾದ ಅಪರೂಪದ ಅತಿಥಿಯಾದರೂ ಇವೆ ಇವು. ಆದರೆ ಇವುಗಳ ಸಂಖ್ಯೆ ತೀರಾ ಗಣನೀಯವಾಗಿ ಇಳಿಮುವಾಗಿದೆ. ಅಂದರೆ ಈ ಪಕ್ಷಿಗಳೆಲ್ಲ ಮುಂದೊಂದು ದಿನ ಕನಸಿನಂತೆ ಆಗಬಹುದು. ಇವುಗಳೆಲ್ಲವೂ ಸರ್ವನಾಶವಾಗಲೂಬಹುದು… ಇದೆಲ್ಲ ಈಗ ಯಾಕೆ ಮಾತು ಬಂತಂದರೆ ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನವಾದ್ದರಿಂದ ಇದೆಲ್ಲ ನೆನಪಾಯಿತು… ಒಂದು ಮುಖ್ಯ ವಿಷಯವೆಂದರೆ ಈ ಗುಬ್ಬಚ್ಚಿಗಳು, ಕಾಗೆ, ಗೂಬೆಗಳೆಲ್ಲ ಕಾಂಕ್ರೀಟ್ ಕಾಡುಗಳಾದ ಪಟ್ಟಣ, ನಗರ, ಮಹಾನಗರಗಳಲ್ಲಿ ಕಾಣಸಿಗುವುದೇ ಇಲ್ಲ. ಅಂದರೆ ನಾಶವಾಗಿವೆ. ಮನುಷ್ಯ ತನ್ನ ಮಿತಿಮೀರಿದ ತೀವ್ರ ಸ್ವಾರ್ಥದಲ್ಲಿ ಈ ಉಳಿದ ಪ್ರಕೃತಿ ಸಹಜ ಪ್ರಾಣಿ-ಪಕ್ಷಿಗಳಿಗೆ ಜಾಗವೇ ಇಲ್ಲದಂತೆ ಮಾಡಿದ್ದಾನೆ..! ಇರಲಿ, ಮುಖ್ಯ ವಿಷಯಕ್ಕೆ ಬರುತ್ತೇನೆ ಈಗ. ಅದೇ ಗುಬ್ಬಚ್ಚಿಗಳ ವಿಷಯ… ಈ ಗುಬ್ಬಚ್ಚಿಗಳು ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊಟ್ಟ ಮೊದಲ ಕೆಲಸ..! ಹೆಣ್ಣು ಗುಬ್ಬಿಯ ಗರ್ಭದಲ್ಲಿ ಪುಟ್ಟದೊಂದು ಗುಬ್ಬಚ್ಚಿ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಗುಬ್ಬಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಕಟ್ಟಿ ಜೋಪಾನ ಮಾಡುವುದೇನು. ಕಾಳು ಕಡಿ ಸಂಗ್ರಹಿಸುವುದೇನು. ಆ ಸಂಭ್ರಮ ಅವಕ್ಕೇ ಗೊತ್ತು..! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ! ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ. ಆಹಾ ಅದನ್ನು ನೋಡಿಯೇ ಆನಂದಿಸಬೇಕು… ಆದರೆ. ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ…? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ‘ಈ ಮನುಷ್ಯರ ಸಹವಾಸವೇ ಸಾಕು’ ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದೇವೆಯೇ..? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ..? ಅಳಿವಿನಂಚಿಗೆ ಸರಿಯುತ್ತಿರುವ ‘ಮನೆಗುಬ್ಬಿ’ಗಳನ್ನು ರಕ್ಷಸಿ ಎಂದು ಕೂಗಿ ಹೇಳುವುದಕ್ಕಾಗಿ ಇಂದು ‘ವಿಶ್ವ ಮನೆ ಗುಬ್ಬಿಗಳ ದಿನ’ವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಾ.20 ರಂದು ಆಚರಣೆಗೊಳ್ಳುವ ಈ ದಿನದಂದು ಗುಬ್ಬಿಗಳ ಸಂತತಿಯನ್ನು ರಕ್ಷಿಸುವುದಕ್ಕೆ ಪಣತೊಡಲಾಗುತ್ತದೆ… ಮನುಷ್ಯನ ಸ್ನೇಹಿತರಾದ ಈ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತ ಮನೆತುಂಬ ಓಡಾಡುತ್ತಿದ್ದರೇನೇ ಶೋಭೆ. ಆದರೆ ಕಾರಣಾಂತರಗಳಿಂದ ಅವುಗಳ ಸಂತತಿ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ… ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?– ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತ್ತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದಿದ್ದೇ ಮನೆಯ ಮಾಡಿನ ಸಂದಿ-ಗೊಂದಿಗಳಲ್ಲಿ. ಸದಾ ಮನೆಯಲ್ಲೇ ಕೂತು, ಹೊರಗೆಲ್ಲೂ ಸುತ್ತದವರಿಗೆ ‘ಮನೆಗುಬ್ಬಿ’ ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ… ವಿಶ್ವವನ್ನು ಸುಂದರವಾಗಿಸಿದ ಗುಬ್ಬಚ್ಚಿಗಳು ವಿಶ್ವ ಗುಬ್ಬಿಗಳ ದಿನದಂದು ಈ ಪುಟ್ಟ ಪ್ರಭೇದವನ್ನು ರಕ್ಷಿಸಲು ಕೈಜೋಡಿಸೋಣ. ಅವುಗಳ ಚಿಲಿಪಿಲಿ ಸದ್ದು ಈ ವಿಶ್ವವನ್ನು ಮತ್ತಷ್ಟು ಸುಂದರವಾಗಿಸಿದೆ. ಅವುಗಳಿಗೆ ನೀರು, ಆಹಾರ, ನೆರಳು ನೀಡಿ ಸಲಹೋಣ… ಈ ಸುಂದರ ಗುಬ್ಬಿಗಳನ್ನು ರಕ್ಷಿಸೋಣ. ಇಲ್ಲವೆಂದರೆ ನಮ್ಮ ಮುಂದಿನ ತಲೆಮಾರಿಗೆ ಇವುಗಳ ಚಿತ್ರವನ್ನಷ್ಟೇ ತೋರಿಸಬೇಕಾದೀತು… ರಕ್ಷಣೆಯ ಕುರಿತು ಅರಿವು ಮೂಡಿಸೋಣ– ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಈ ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸೋಣ… ಗುಬ್ಬಿಗಳ ಚಿಲಿಪಿಲಿ ಸದ್ದಿನಿಂದಲೇ ಈ ಜಗತ್ತು ಸುಂದರವಾಗಿದೆ. ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅವುಗಳಿಗೆ ನಮ್ಮ ಮನೆಯ ಒಂದು ಮಾಡಿನಲ್ಲಿ ಕೊಂಚ ಜಾಗ ಮಾಡಿಕೊಡೋಣ. ಅವುಗಳಿಗೆ ನೀರು, ಆಹಾರ ಒದಗಿಸೋಣ. ಈ ಬೇಸಿಗೆಯಲ್ಲಿ ಅವುಗಳ ರಕ್ಷಣೆ ನಮ್ಮ ಹೊಣೆ..! ಈ ಸಮತೋಲನದ ಗುಬ್ಬಚ್ಚಿಗಳು ಈಗ ಬೇಕಾಗಿದೆ..! ಇಂತಿಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ..!

ವಿಶ್ವ ಗುಬ್ಬಚ್ಚಿಗಳ ದಿನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ನನ್ನೊಳಗೊಂದು ನಾನು ಅಂಜನಾ ಹೆಗಡೆ ನಾ ಹುಟ್ಟುವಾಗಲೇ ನನ್ನೊಂದಿಗೆ ಹುಟ್ಟಿದ ಕವಿತೆಯೊಂದು ಇದ್ದಕ್ಕಿದ್ದಂತೆ ಎದುರಿಗೆ ಬಂದು ನಿಂತಿತು ಥೇಟು ನನ್ನಂತೆಯೇ ಕಾಣುವ ಅದಕ್ಕೊಂದು ಉದ್ದನೆಯ ಬಾಲ…. ನಾ ಹೋದಲ್ಲೆಲ್ಲ ನನ್ನದೇ ವೇಗದಲ್ಲಿ ಹಿಂದೆಮುಂದೆ ಸುತ್ತುತ್ತಿತ್ತು ಬಾಲದ ಸಮೇತ ಉದ್ದಜಡೆಯ ಹೆಣ್ಣೊಂದು ಹೆಗಲೇರಿದ ಭಾರ ಅಯ್ಯೋ!! ಹೆಣ್ಣುಕವಿತೆಯೇ ಹೌದು…. ಸುಲಿದ ಬೆಳ್ಳುಳ್ಳಿಗಳನ್ನೆಲ್ಲ ಪ್ಲಾಸ್ಟಿಕ್ಕಿನ ಮೇಲಿಟ್ಟು ಜೋರಾಗಿ ಜಜ್ಜಿದೆ ಬಾಲವೂ ಅಲ್ಲಾಡಿತು ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!! ಬಾಲ ನಕ್ಕಂತೆ ಭಾಸವಾಗಿ ಸಣ್ಣದೊಂದು ಅವಮಾನ ಈರುಳ್ಳಿಗೆ ಕರಗಿದ ಕಣ್ಣೀರು ಬಾಲದ ತುದಿಗೆ ಅಂಟಿಕೊಂಡಿತು ಅಲ್ಲಾಡುತ್ತಿಲ್ಲ…. ಕೊಂಚ ಕರಗಿದೆ ಯಾವ ತಾಪ ಯಾರ ಎದೆಯ ಮೇಲೋ ಒಗ್ಗರಣೆಯ ಬಿಸಿ ಕುಕ್ಕರಿನ ಕೂಗು ಯಾವುದಕ್ಕೂ ಜಗ್ಗದ ಗಟ್ಟಿ ಬಾಲವಿದು…. ಈಗ ಸಣ್ಣದೊಂದು ಬಾಂಧವ್ಯ ಬಾಲದೊಂದಿಗೆ…. ತುಳಿಯದಂತೆ ನಿಭಾಯಿಸಬೇಕು!! ನನ್ನದಲ್ಲದ ಚಲನೆಯೊಂದು ಬೆನ್ನಿಗಂಟಿ ಜೀವಂತ ಸದಾ ಅಂಟಿಕೊಂಡಿರಲಿ ಹೆಣ್ಣಾಗಿ ಕವಿತೆ ಚಲನೆಯಾಗಿ…. ನಾನಾಗಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ ಹಾಗಲ್ಲದೆ ಕವಿತೆ ಕವಿತೆ ಹೇಗೆ ನಾನು ಜೀವಂತ ಹೇಗೆ **********

ಕಾವ್ಯಯಾನ Read Post »

You cannot copy content of this page

Scroll to Top