Day: March 25, 2020

ಕನ್ನಡ ಕಾವ್ಯ ಕುರಿತು

ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವ‌ನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ […]

ಯುಗಾದಿಗೊಂದು ಗಝಲ್

ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು […]

ಯುಗಾದಿ ಕಾವ್ಯ

ಶಾವ೯ರಿ ಯುಗಾದಿ ರೇಖಾ ವಿ.ಕಂಪ್ಲಿ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ವಿಕಾರಿ ಸಂವತ್ಸರದ ಕೊನೆಯಲಿ ವಿಷಕಾರಿತು ಕರೋನಾ ಜಗವ ತಲ್ಲಣಗೊಳಿಸಿದೇ ಉಸಿರಿಸಲು ಬೇವರಿಳಿಸುವಂತೆ ಮಾಡಿದೆ ಎಲ್ಲರನ್ನು ಮನೆಯೊಕ್ಕಿಸಿ ಬಿಟ್ಟಿದೆ ಮಹಾಮಾರಿ ರೋಗಕ್ಕೆ ಬೆದರಿದೇ ಜಗದೆದೆಯನು ಜಲ್ಲ ಎನ್ನಿಸಿದೆ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ಮುಡಿಗಟ್ಟಿ ಅದರುಟ್ಟಡಿಗಿಸಲು ಬಾ ಯುಗಾದಿ ಬಾ ಯುಗಾದಿ ಬಾ …………. ಯುಗಾದಿ ಯುಗ ಯುಗಾಂತರ ಕಳೆದರು ಹೊಸತು ತರುವ ನಿನ್ನ ಹಚ್ಚ ತೋರಣದಿ ಆಹ್ವಾನಿಸಲು ಶಾವ೯ರಿಯು ಕಾಯುತಿರುವಳು […]

ಯುಗಾದಿ ಕಾವ್ಯ

ಭರವಸೆಯೊಂದಿರಲಿ ಶಾಲಿನಿ ಆರ್. ಚಿಗುರಿದೆಲಿ ಮ್ಯಾಲೆಲ್ಲ ಚುಂಬನವಿತ್ತಿದೆ ಸಾವಿರ ಸೂರ್ಯಕಿರಣ ಗಾಳ್ಯಾಗ ತೇಲಿಬರುತಿವೆ ಹೂವ ಪರಿಮಳ ದುಂಬಿಗದುವೆ ಪ್ರಾಣ, ಹೊಸ ಆದಿಗೆ ತಳಿರು ತೂಗಿವೆ ತೋರಣ ಹೊಸ ಮನ್ವಂತರಕೆ ರಸದೌತಣವ ಬೀಡಿಗೆ ಪ್ರಕೃತಿ ಹಾಡಿದೆ ತಾನನ, ಕೋಗಿಲೆಯ ಗಾನ ದುಂಬಿಯ ಝೇಂಕಾರ ಕೇಳುತ ಮೈಮರೆತಿವೆ ಮರಗಳೆಲ್ಲ ಕೂತು ಹರಸುತ ನಮ್ಮನ್ನೆಲ್ಲ, ಬೇವಿನಮರಕದು ಹೂವಿನ ಸೀರಿ ಮಾವಿನ ಮರದಲಿ ಕಾಯಿಗಳ ಮೋಡಿ ಸುಂದರ ಸೊಬಗಿದು ಯುಗದ ಆದಿ ಎದಿಮನವ ಬೆಸೆದಿದೆ ಸಿರಿ ಸಂಭ್ರಮ ಚೈತ್ರ, ಬದುಕೆಲ್ಲ ಹಿಂಗಾ ಇರಲಿ […]

ಯುಗಾದಿ ಕಾವ್ಯ

ಬಾರೆ ಶಾರ್ವರಿ ಡಾ.ಗೋವಿಂದ ಹೆಗಡೆ ಬಂದೆಯಾ ಬಾ ಬಾರೆ ಶಾರ್ವರಿ ನಲವಿನೂಟೆ ತಾರೆ | ಕಾಲನ ಕಾಲಲಿ ಕುಸಿದಿದೆ ಜನಪದ ಬದುಕನುಣಿಸು ಬಾರೆ|| ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ ನಲುಗಿದೆಯೇ ಜೀವ | ನೆಲೆಗಾಣದೆ ಗೋಳಿಟ್ಟಿದೆ ಮನುಕುಲ ತಾರೆ ಕರುಣೆ ತೇವ || ನಿನ್ನಯ ಹೆಸರೇ ಇರುಳೆಂದರಿತೆ ಶಕ್ತಿಯೂ ಹೌದು ನೀನು | ಕತ್ತಲ ಮಣ್ಣಲಿ ಬೆಳಕನು ಬೆಳೆವ ವರವನು ನೀ ತಾರೆ || ಬಾಳಲಿ ಶ್ರದ್ಧೆಯ ನೀ ಮರುಕಳಿಸು ಬೆಳೆಯಲಿ ನಿನ್ನೊಲುಮೆ | ದುರಿತವ ದೂರಾಗಿಸಿ […]

Back To Top