ಗಝಲ್
ಶಶಿಕಾಂತೆ
ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ..
ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ..
ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು.
ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ..
ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ.
ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ.
ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ..
ಅವನ ಆಟ ನೋಡುತಾ,ಅವನಿಗೇ ಕಿರೀಟ ತೊಡಿಸುತಾ ಇದ್ದಾರೆ ಜನ, ದೇವರಿದ್ದಾನೇನು ಸಾಕಿ..
ಆ ಶಶಿಯೊಬ್ಬನೇ ಅವಳ ಗೆಳೆಯ ಅವಳ ನಗಿಸಲು ಸದಾ ನಗುಮೊಗ ತೋರುತಿರುವ.
ಅಲ್ಲಾನೋ,ಏಸುವೋ,ರಾಮನೋ ದೇವರಿಗೆ ಅವಳ ಕೊರಗು,ಕಣ್ಣೀರು ಕಾಣದಾಯ್ತೇನು ಸಾಕಿ..
******