ಹೀಗೊಂದುಕವಿತೆ
ವಿಜಯಶ್ರೀ ಹಾಲಾಡಿ
ನರಳುತ್ತಿರುವ ಬೀದಿನಾಯಿಯ
ಮುಗ್ಧ ಆತ್ಮಕ್ಕೂ
ಅದ ಕಂಡೂ ಕಾಣದಂತಿರುವ
ನನ್ನ ದರಿದ್ರ ಆತ್ಮಕ್ಕೂ
ಅಗಾಧ ವ್ಯತ್ಯಾಸವಿದೆ !
ಮಗುವಿಗೆ ಉಣಿಸು ಕೊಡುವ
ನನ್ನ ಕೈಗಳೇ
ಬೀದಿ ನಾಯಿಮರಿ
ನಿಮ್ಮ ಮಗುವಲ್ಲವೇ? ?
ತಿನಿಸು ಉಡುಪು ದುಡ್ಡು
ಖುಷಿ ನಗು ಗಿಗು
ಎಲ್ಲ ನಿನಗೇ ಎಂದು
ಭಾವಿಸುವ ಮೂರ್ಖ ವಿಜೀ
ಅನ್ನವಿಲ್ಲದ ನೆಲೆಯಿಲ್ಲದ
ಆ ಮೂಕಪ್ರಾಣಿಗಳಿಗೇನು
ಉತ್ತರಿಸುವೆ?
ಯಾರೋ ಹೊಡೆದರು
ಮರಿನಾಯಿ ಅತ್ತಿತು
ತಾಯಿ ಜೀವ
ಅದೆಷ್ಟನೆ ಸಲವೋ
ಸತ್ತಿತು! !
*****************************************