ಕಾವ್ಯಯಾನ
ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ ಸಮುದ್ರದಾಳದ ಮುತ್ತಾಗ ಬಯಕೆಯೇ […]
ಅನುವಾದ ಸಂಗಾತಿ
ಹೆಣ್ಣಿನ ದುಡಿಮೆ ಮೂಲ:ಮಾಯಾ ಏಂಜೆಲೋ ಕನ್ನಡಕ್ಕೆ ಡಾ.ಗೋವಿಂದ ಹೆಗಡೆ ನನಗೆ ಮಕ್ಕಳ ಕಾಳಜಿ ಮಾಡಲಿದೆ ಅರಿವೆಗಳನ್ನು ಒಗೆಯಲಿದೆ ನೆಲ ಸಾರಿಸುವುದು ಆಹಾರ ಖರೀದಿಸುವುದು ಕೋಳಿಯನ್ನು ಹುರಿಯುವುದು ಮಗುವನ್ನು ಚೊಕ್ಕ ಮಾಡುವುದು ಬಂದವರಿಗೆ ಊಟ ನೀಡಬೇಕಿದೆ ತೋಟದ ಕಳೆ ತೆಗೆಯಬೇಕಿದೆ ಅಂಗಿಗಳಿಗೆ ಇಸ್ತ್ರಿ ಮಾಡಲಿದೆ ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ ಕಬ್ಬು ಕತ್ತರಿಸಲಿಕ್ಕಿದೆ ಈ ಗುಡಿಸಲನ್ನು ಶುಚಿಗೊಳಿಸಲಿದೆ ರೋಗಿಗಳ ಉಪಚರಿಸಲಿದೆ ಹತ್ತಿಯನ್ನು ಬಿಡಿಸುವುದಿದೆ ಬೆಳಗು ನನ್ನಮೇಲೆ, ಬಿಸಿಲೇ ಸುರಿ ನನ್ನ ಮೇಲೆ, ಮಳೆಯೇ ಮೃದುವಾಗಿ ಇಳಿ, ಇಬ್ಬನಿಯೇ ನನ್ನ ಹಣೆಯನ್ನು […]