Day: March 11, 2020

ಅನುವಾದ ಸಂಗಾತಿ

ಎರಡನೆಯ ಅವತಾರ ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್) ಕನ್ನಡಕ್ಕೆ: ಕಮಲಾಕರ ಕಡವೆ ಎರಡನೆಯ ಅವತಾರ ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತಡೇಗೆಗಾರನ ಕರೆಯ ಕೇಳಲಾರದು ಡೇಗೆಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆಬರಿಯೆ ಅರಾಜಕತೆ ಆವರಿಸಿದೆ ಜಗದಗಲಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋಉತ್ಕಟ ಉದ್ರೇಕವೇ ತುಂಬಿಕೊಂಡಿದೆ ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆಎರಡನೆಯ ಅವತಾರ ಖಂಡಿತ ಬಳಿಸಾರಿದೆಎರಡನೆಯ ಅವತಾರವೆಂದೊಡನೆಯೇವಿಶ್ವಚೇತನವೊಂದರ ವಿಶಾಲ ಆಕಾರಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟಹೊತ್ತ ನರಸಿಂಹ ರೂಪವೊಂದುಹಗುರ ಹೆಜ್ಜೆ […]

ಕಾವ್ಯಯಾನ

ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************

ಕಾವ್ಯಯಾನ

ಗಝಲ್ ಶಶಿಕಾಂತೆ ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ.. ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ.. ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು. ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ.. ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ. ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ. ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ.. ಅವನ ಆಟ ನೋಡುತಾ,ಅವನಿಗೇ […]

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ […]

Back To Top