ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆಳತಿ ನಕ್ಕುಬಿಡು

Photo of Woman Throwing Her Straw Hat Upwards

ಮೂಗಪ್ಪ ಗಾಳೇರ

ನಾನು ನೋಡಿದ ಹುಡುಗಿಯರೆಲ್ಲಾ…..
ಪ್ರೇಯಸಿಯರಾಗಿದ್ದರೆ
ನಾನು ಗೀಚಿದ ಸಾಲುಗಳೆಲ್ಲಾ
ಕವಿತೆಗಳಾಗಬೇಕಿತ್ತಲ್ಲ!
ದಡ್ಡಿ…..
ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ
ಗೊತ್ತಿದ್ದಂತೆ ಕಾಣುತ್ತಿಲ್ಲ!
ಕತ್ತಲನ್ನು ನುಂಗಿ ಬೆಳಕಾಯಿತೋ…!
ಬೆಳಕನ್ನು ನುಂಗಿ ಕತ್ತಲಾಯಿತೋ…!

ನೀನು ನನ್ನ ಜೊತೆ ಇಟ್ಟ
ಒಂದೊಂದು ಹೆಜ್ಜೆಯೂ
ಹಳೆ ಸಿನಿಮಾದ ಹಾಡುಗಳಂತೆ
ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ

ಒಮ್ಮೊಮ್ಮೆ ಎದೆಭಾರ ಆದಾಗ
ಕವಿತೆಯ ಸಾಲು ಬೇರೆಯಾಗಬಹುದು
ಕವಿತೆ ಮಾತ್ರ ಎಂದೆಂದೂ ನೀನೆ

ಒಂದೊಮ್ಮೆ ನನ್ನ ಕವಿತೆಯ
ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ
ಅದು ನಮ್ಮಿಬ್ಬರ ನಡುವಿನ
ಪ್ರೀತಿಯ ಪಲ್ಲವಟವೆಂದೆ ಕರೆಯಬಹುದು
ಹಾಗೆ ಪಲ್ಲಟ ವಾದ ಈ ಪ್ರೀತಿಗೆ
ಯಾವ ಪ್ರೇಮಿಗಳು ಸಾಟಿ ಹೇಳು

ಗೆಳತಿ ಒಮ್ಮೆ ನಕ್ಕು ಬಿಡು
ಮಲ್ಲಿಗೆಯ ದಳದಲ್ಲಿಯೂ
ನಿನ್ನ ಮನಸ್ಸಿನ ಯವ್ವನವ ಗೀಚಿರುವೆ
ಕಡಲ ಮುತ್ತಿನಲ್ಲಿಯೂ
ಪ್ರೀತಿಯ ಒಡಲ ಕಟ್ಟಿರುವೆ|

************************************

About The Author

Leave a Reply

You cannot copy content of this page

Scroll to Top