ಕಾವ್ಯಯಾನ
ಮಾಂತ್ರಿಕಳೆಂದು.. ವಿಜಯಶ್ರೀ ಹಾಲಾಡಿ ಮೊದಮೊದಲ ಮಳೆಹನಿಗೆಅವಳು ಕರಗಲಿಲ್ಲಹನಿಯೇ ಕರಗಿತುಮಳೆಧಾರೆಯೇನು …ಕಡಲನ್ನೇ ನುಂಗಿನೊಣೆಯುವ ತಾಕತ್ತಿನವಳು ! ಬೇಡವೆಂದು ದೂಡಿದ್ದಾಳೆಅರಸಿ ಬಂದದ್ದೆಲ್ಲವನ್ನುಕೊನೆಗೆ ಜಗವೆಂಬ ಜಗವನ್ನೂ ..ಕಾವ್ಯವನ್ನು ಮಾತ್ರಹುಡುಕಿ ಹೋಗಿದ್ದಾಳೆಹುಡುಕುತ್ತಲೇ ತಿರುಗಿದ್ದಾಳೆ ಅಲೆಮಾರಿಗೇನು ..ನಿರಾಳ ಬೀದಿಗಳೇಆಲಯಗಳೇತೊರೆಯೇ ಹಳ್ಳಗಳೇ …ಕಡಿದು ಪರ್ವತದಿಣ್ಣೆ ಕೊರಕಲುಗಳನಡುವೆ ಯಾತ್ರೆ ಹೊರಟುಬೇಡವೆಂದು ಕೈಬಿಟ್ಟುಸಂತೆಮಾಳದಲ್ಲಿಸಂಜೆ ಮಾಡಿಕೊಂಡುಇರುಳು ಚಂದ್ರನ ಕೆಳಗೆಕವಿತೆ ಬರೆಯುತ್ತಿದ್ದಳಂತೆಬೆಳಗಿನವರೆಗೂಲಾಂದ್ರ ಹಚ್ಚಿಟ್ಟುಗುಡಾರದಲ್ಲಿ ಗುಡಿ-ಗುಡಿಯ ಸೇದುತ್ತಕೂದಲು ಬಿರಿಹೊಯ್ದುಕನಸು ಚೆಲ್ಲಿತೆಂದುಆಯ್ದು ಕೂತಿದ್ದಳಂತೆ ಊರ ಜನ ಮಾಂತ್ರಿಕ-ಳೆಂದು ಅಡ್ಡಬೀಳಲುಅಂಗಲಾಚಲು ಶುರು-ವಿಟ್ಟುಕೊಂಡಾಗಓ ಅದೇ ಬೆಟ್ಟದಕೆಳಗೆ ನದಿಯ ಗುಂಟನಡೆದುಹೋದಳಂತೆಮತ್ತಿನ್ಯಾರೂಕಾಣಲಿಲ್ಲವಂತೆ ! ****** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ
ಅನುವಾದ ಸಂಗಾತಿ
ಮೂಲ:ವೇನ್ ಕೌಮೌಲಿ ವೆಸ್ಟ್ ಲೇಕ್(ಹವಾಯಿ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ ಸಿರಿವಂತ ಮಹಿಳೆ ಬಸ್ಸಿನ ಮೇಲೆಮಾತು ಮಾತು ಮಾತುಕೊನೆಯೇ ಇಲ್ಲ ನಾನೊಂದು ಕಮ್ಯುನಿಸ್ಟ ಸಿಗರೆಟ್ಟು ಹಚ್ಚಿಭಯಾನಕ ಹೊಗೆ ಉಗುಳಿದೆಹಾ ! ನೀರು ಕುಡಿಯಿತು ಒಂದು ಆಕಳುಹಾಲಾಗಿ ಮರುನೀಡಿನೀರು ಕುಡಿಯಿತು ಒಂದು ಹಾವುಹಾಲಾಹಲವ ಮರುನೀಡಿ ಬಿಳಿ ಚಿಟ್ಟೆ ಅಟ್ಟಿ ಓಡುವಬೆಕ್ಕಿಗೆ ಲೆಕ್ಕಕ್ಕಿಲ್ಲಕಾಲಡಿಗಾದ ಹೂಗಳು ಮುಂಜಾನೆ ಮೌನ ಹಿತ ಕೊಡುತ್ತಿತ್ತುಅಷ್ಟರಲ್ಲಿ ಹೊರಗಡೆ ಯಾರೋಕಿರುಚತೊಡಗಿದರುದೇವರೇ ! ದೇವರೇ ! ದೇವರೇ ! ಎಷ್ಟು ವಿಭಿನ್ನ ವಿಚಾರಗಳುನನಗೆ ಮತ್ತು ಬೆಕ್ಕಿಗೆಹಕ್ಕಿಮರಿಯೊಂದ ನೋಡುತ್ತ ಅರಳಿದ್ದ […]
ಸ್ವಾತ್ಮಗತ
ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ಕೆ.ಶಿವುಲಕ್ಕಣ್ಣವರ ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ನಾನು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಪುಸ್ತಕವಾದ ‘ನೂರು ಜಾನಪದ ಹಾಡುಗಳು’ ಬಗೆಗೆ ವಿಮರ್ಶಾತ್ಮಕ ಲೇಖನವನ್ನು ಬರೆದೆನು. ಆಗ ಸಾಕಷ್ಟು ಪ್ರಶಂಸೆಗಳು ಬಂದವು. ಅಲ್ಲದೇ ಸಾಕಷ್ಟು ಜನರು ಅವರ ಆ ಪುಸ್ತಕವನ್ನು ಕೇಳಿದರು. ನಾನು ಅವರ ಅಂದರೆ ಬೈಲೂರ ಬಸವಲಿಂಗಯ್ಯ ಹಿರೇಮಠರ ಫೋನ್ ನಂಬರ್ ಕೊಟ್ಟು ಸುಮ್ಮನಾದೆನು. ಅದರೆ ಬಹಳಷ್ಟು ಜನರು ಬೈಲೂರ ಬಸವಲಿಂಗಯ್ಯ ಹಿರೇಮಠರ ವೈಯಕ್ತಿಕ ಮಾಹಿತಿಯನ್ನು ಕೇಳಿದರು. ನಾನು […]
ಕಾವ್ಯಯಾನ
ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ ಮೂಗಪ್ಪ ಗಾಳೇರ ನೀನು ಬಿಟ್ಟು ಹೋದ ಮೇಲೆ ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ…….. ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ; ಯಾಕೆ ಗೊತ್ತಾ ……? ನೀನು ಬಿಟ್ಟು ಹೋದ ನೆನಪುಗಳು ನನ್ನ ಹೃದಯದ ಅಂಗಳದಲ್ಲಿ ಅರಳಿದ ಹೂಗಳಾಗಿಯೇ ಉಳಿದಿವೆ ಹಾಗಾಗಿ ನಾನು ಅತ್ತರೆ…… ಆ ಕಣ್ಣೀರಿನ ಬಿಸಿ ತಾಕಿದಡೆ ಹೂವುಗಳು ಬಾಡಬಹುದೆಂಬ ಭಯ ವಷ್ಟೇ ನನ್ನ ನಸುನಗೆ ಕಾರಣ…….! ನೀನು ಹೋದ ಮೇಲೆ ಒಂಟಿ ಜೀವನ ಗತಿಯೆಂದು ಖಾಲಿಯಾದ ಬಾಟಲಿ ಹಿಡಿದು ಯಾರು ಇಲ್ಲದ ಬೀದಿಯಲ್ಲಿ […]
ಪ್ರಸ್ತುತ
ಸಂಗೀತ ಭಾರತಿ ಉತ್ಸವ ದಿನಾಂಕ;7/03/2020ಮತ್ತು 08/03/2020 ಸಮಯ: ಸಂಜೆ ಆರುಗಂಟೆ ಸ್ಥಳ: ರವೀಂದ್ರ ಕಲಾಭವನ. ಮಂಗಳೂರು ಯೂನಿವರ್ಸಿಟಿ ಕಾಲೇಜು
ಪ್ರಸ್ತುತ
ಪಿ.ಲಂಕೇಶ್ ಹೊಸ ತಲೆಮಾರಿಗೆ ಲಂಕೇಶ್ ಹೊಸ ತಲೆಮಾರಿಗೆ ದಿನಾಂಕ: 08/03/2020, ಬೆಳಿಗ್ಗೆ: ಹತ್ತು ಗಂಟೆಗೆ ಸ್ಥಳ: ಸಿಂಗಾರಸಭಾಂಗಣ, ಡಿ.ವಿ.ಎಸ್.ಕಾಲೇಜು, ಶಿವಮೊಗ್ಗ