ಕಾವ್ಯಯಾನ

ಕೊನೆಯೂ ಅಲ್ಲ!

Low-angle Photography of Red Metal Tower

ರೇಖಾ ವಿ.ಕಂಪ್ಲಿ

ನಾವು ಇಲ್ಲಿ ಮೊದಲು ಅಲ್ಲ
ಕೊನೆಯು ಅಲ್ಲ
ಮೊದಲಾದೊಡೆ ಮೊದಲಿಗರು
ಕೊನೆಯಾದಡೆ ಕೊನೆಗಿರುವ
ಎಮ್ಮ ಜೀವದಾಟದಲ್ಲಿ ನಾವೇ
ಮೊದಲಿಗರು, ಕೊನೆಯವರು
ಎಮ್ಮ ದುಃಖ ಎಮಗೆ ಹಿರಿದು ತಮಗೆ ಕಿರಿದು
ಕಾಲನುರುಳಲಿ ಕವಿಯು ಬರೆಯಲಿ
ಮೊದಲು ಕೊನೆಯ
ನಡುವಿನಲಿ
ಜೀವದೂಟದ ಎಲೆಯಲಿ
ಕಾವ್ಯ ಕಥನವು ಉಳಿಯಲಿ
ಕವಿ ಕಾಣದೇ ಅಳಿಯಲಿ
ನಾವು ಇಲ್ಲಿ ಮೊದಲು ಅಲ್ಲ ಕೊನೆಯು ಅಲ್ಲ…

***********************************

2 thoughts on “ಕಾವ್ಯಯಾನ

Leave a Reply

Back To Top