ಕಾವ್ಯಯಾನ

ತೆನೆ

ರಾಮಾಂಜಿನಯ್ಯ ವಿ.

ತೆನೆ

ಅಪ್ಪ ಸಣ್ಣರೈತ.
ಗಿಳಿ,ಅಳಿಲು,ಕಾಗೆಗಳ ಹಾವಳಿ
ಸದಾ ಇದ್ದೇ ಇರುತ್ತಿತ್ತು;
ಇದ್ದ ಒಂದೂವರೆ ಎಕರೆಯಲ್ಲಿ
ಬೆಳೆಯುತ್ತಿದ್ದ ಜೋಳಕ್ಕೆ!

‘ಬೇಳೆಕಾಳುಗಳ ರಾಣಿ’ ಇವಳು!
ಉದ್ದ ಜಡೆಯ ನಾರಿ,
ಹಾಲುಕ್ಕಿಸುವ ಶೋಡಷಿ,
‘ಟಸೆಲ್ ಕೂದಲುಳ್ಳ ಗಂಡು’ ಇವಳು!
ಅರೆ, ಇವಳೇನು
ಜೀನ್ಸ್ ಗಳ ವ್ಯತ್ಯಾಸದಂತ ಮಂಗಳಮುಖಿಯಲ್ಲ.
ಗಿಳಿ ಪ್ರಿಯೆ!

ನಮ್ಮೂರಿನ ಮಲ್ಲಮ್ಮಾ, ಮುನೆಮ್ಮಾ
ಹುಲ್ಲಿಗಂತ ಬಂದು
ತೆನೆ ಮುರಿದು ರವಿಕೆಯೊಳಗೆ ಅಡಗಿಸಿದಾಗ,
ಎದೆ ಮುಂದೆ ಉಬ್ಬುತ್ತಿತ್ತು
ಆಗ ಅಲ್ಲಿ ‘ಟಸೆಲ್’ ಉದುರುತ್ತಿತ್ತು!
ಕೆಲವೊಮ್ಮೆ ತೆನೆ ಬೆತ್ತಲಾಗಿ
ಅದರ ಬಟ್ಟೆ ಹುಲ್ಲಾಗುತ್ತಿತ್ತು.

ಚಾಟರಿ ಬಿಲ್ಲಿನ ಕಲ್ಲು
ಗಿಳಿಯ ಓಡಿಸುವಾಗ
ಓಯ್ಃ ಶಬ್ದ ಮೊಳಗಿ
ಹಕ್ಕಿಗಳು ಹಾರುತ್ತಿದ್ದವು
ಉಳಿದ ತೆನೆಗಳು ನಗುತ್ತಿದ್ದವು.

******

Leave a Reply

Back To Top