ಒಂದು ಸಾವಿನ ಸುತ್ತಾ
ವೇಣುಗೋಪಾಲ್
ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.?
ಎಲ್ಲಿದ್ದಿಲಾ.?
ಇವಾಗ ಬಂದೆ ಮನೆಗೆ ಏನು ಹೇಳು.?
ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ ಸಮನೆ ಅಳುತ್ತ ಕುತ್ತಿದ್ದಾಳೆ..!
ಯಾರು..? ಕಿರಣನ ಅರುಣನ..?
ಇನ್ಯಾರು ಆ ತರ್ಲೆ ನನ್ನ ಮಗ ಕಿರಣ ಇರ್ತಾನೆ..!
ಹಾಸನದಿಂದ ಯಾರು ಬಂದಿಲ್ವಾ..?
ನಿಮ್ಮ ಚಿಕ್ಕಪ್ಪ ಹೊರ್ಟಿರ್ಬೇಕು ನೀನು ಹೋಗವತ್ತಿಗೆ ಬಂದಿರ್ತಾನೆ ಹೋಗು ಮೊದ್ಲು.. ಅದೇನು ವಿಚಾರಿಸು..
ಆಯ್ತು ಅಂತ call cut ಮಾಡಿ ಇದ್ದ ತಂಗಳನ್ನೇ ಬಿಸಿ ಮಾಡಿ ತಿನ್ನುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು.. ಅತ್ತೆಯ ವಿಚಾರಿಸಲು call ಮಾಡ್ದೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.! ಹಾಗೆ ಹೋಗುವುದು ಬೇಡವೋ ಎಂಬ ಯೋಚನೆಯಲ್ಲಿ ಇನ್ನು ಹದಿನೈದು ನಿಮಿಷ ಕಳೆದೆ..
ಯಾಕೋ ಮನಸ್ಸು ಇಲ್ಲೇ ಇರಲು ಬಿಡಲಿಲ್ಲ ಲೈಟ್ ಆಫ್ ಮಾಡಿ ಲಾಕ್ ಹಾಕಿ ಮೆಟ್ಟಿಲು ಇಳಿದು ಕಾರನ್ನ ಪಾರ್ಕಿಂಗ್ನಿಂದ ತೆಗೆದು ಹೊರಟೆ. ಸುಂಕದಕಟ್ಟೆ ಬಿಡುವ ಹೊತ್ತಿಗೆ ಹತ್ತುಗಂಟೆ ದಾಟಿತ್ತು.. ಮಾಗಡಿಯಿಂದ ಐದು ಕಿಲೋಮೀಟರ್ ಇರುವ ತೂಬಿನಕೆರೆ ಅದೇ ಊರಿನ ಕೆರೆಯಲ್ಲೇ ಬಿದ್ದಿರ್ಬೇಕು..! ಶವ ಸಿಕ್ಕಿದಿಯೋ ಇಲ್ವೋ ಗೊತ್ತಿಲ್ಲಾ.?
ಅರುಣನಿಗೊಮ್ಮೆ ಫೋನ್ ಹಾಯಿಸಿದೆ ಅವನ ಫೋನ್ ಕೂಡ ಸ್ವಿಚ್ ಆಫ್..!
ನಲವತ್ತು ಕಿಲೋಮೀಟರ್ ಪಯಣ.. ಆ ರಾತ್ರಿಯ ಚಿಕ್ಕ ರಸ್ತೆ..
ಎದುರಿಗೆ ಅತ್ತೆಯ ಜೀವನ ಕಣ್ಣು ಮುಂದೆ ಬಂದು ಹೋಗುತ್ತಿದೆ.
ಗಂಗಾತ್ತೆ ನನ್ನ ಸೋದರತ್ತೆಯೇನು ಅಲ್ಲ..! ನನ್ನಜ್ಜಿಯ ತಂಗಿಯ ಮಗಳು.. ಮಕ್ಕಳು ಚಿಕ್ಕವರಿದ್ದಾಗಲೇ ಗಂಡನನ್ನು ಕಳೆದುಕೊಂಡವಳು ಆ ಕಷ್ಟದಲ್ಲೂ ಒಂದುದಿನವೂ ತವರುಮನೆಗೆ ಹೋಗಿ ಕುಳಿತವಳಲ್ಲ ಅಣ್ಣ ಎಷ್ಟೇ ಕರೆದರು ನೆಂಟರಂತೆ ಹಬ್ಬಕ್ಕೆ ಹೋಗಿಬರುತ್ತುದ್ದವಳು.! ಎರಡು ಅವಳಿ ಮಕ್ಕಳು ಸ್ವಲ್ಪ ವ್ಯತ್ಯಾಸವಿದ್ದರು ಹೊಸಬರಿಗೆ ಇಬ್ಬರು ಒಂದೇರೀತಿಯಾಗಿ ಕಾಣುತ್ತಿದ್ದರು.! ಕಿರಣ ಇತ್ತೀಚೆಗೆ ಮಾಗಡಿಯ ಗ್ಯಾಂಗ್ವಾರ್ನಲ್ಲಿ ಸಿಕ್ಕಿ ಇಪ್ಪತ್ತೆರಡನೆ ವಯಸ್ಸಿಗೆ ಪೊಲೀಸ್ ಸ್ಟೇಷನ್ನು ಜೈಲ್ ಮೆಟ್ಟಿಲು ಹತ್ತಿ ಬಂದಿದ್ದ.! ಅರುಣ ತುಂಬಾ ಸೈಲೆಂಟ್ ಹುಡುಗ ಫೋಟೋ ಗ್ರಾಫರ್ ಕೆಲಸ ಮಾಡುತ್ತಿದ್ದ. ಗಂಡ ಸತ್ತ ನಂತರ ಇವೆರಡು ಮಕ್ಕಳನ್ನ ಸಾಕುವುದಕ್ಕೆ ಅದೆಷ್ಟು ಕಷ್ಟ ಪಟ್ಟಿದ್ದಳೋ ಆ ದೇವರಿಗೆ ಗೊತ್ತು ಅಂಗನವಾಡಿಯ ಕೆಲಸದ ನಂತರ ಅವರಿವರ ಮನೆಯಲ್ಲಿ ಮುಸುರೆ ತಿಕ್ಕಿ ಬಟ್ಟೆ ಹೊಗೆದು ತಾನು ತಿನ್ನುವುದು ಒಂದೊತ್ತು ಕಡಿಮೆಯಾದರೂ ಅವರನ್ನ ಖಾಲಿಯೊಟ್ಟೆಯಲ್ಲಿಟ್ಟವಳಲ್ಲ.! ತೇವಳುತ್ತಿದ್ದ ಮಕ್ಕಳನ್ನ ತನ್ನೆತ್ತರಕ್ಕೆ ಬೆಳೆಸಿದ್ದಳು.. ಆಕೆ ಮೇಲೆ ನನಗೆ ತುಂಬಾ ಅನುಕಂಪ ಯಾಕೆ ಗೊತ್ತೇ..!? ಆಕೆ ಹುಟ್ಟುಕುಂಟಿ ಇಷ್ಟೆಲ್ಲ ತನ್ನ ದೇಹದ ವೈಪಲ್ಯ ಬದುಕಿನ ವೈಫಲ್ಯದಲ್ಲೂ ಆಕೆಯ ಆಗಾದ ಎತ್ತರದ ಮನಸ್ಥಿತಿ ಅದೆಷ್ಟು ಗಟ್ಟಿಯಾಗಿತ್ತು ಅವಳು ಬದುಕನ್ನು ಕಟ್ಟಿಕೊಂಡ ಅವಳ ವಾಸ್ತವ ದೃಢ ನಿರ್ಧಾರಗಳು ಅದೆಷ್ಟು ಗಟ್ಟಿಯಾಗಿರಬೇಡ.! ಇನ್ನೇನು ಸುಖವಾಗಿರ ಬೇಕು ಅನ್ನುವಷ್ಟುರಲ್ಲಿ ಇನ್ನೊಂದು ಆಘಾತ.! ಯಾಕೋ ಗೊತ್ತಿಲ್ಲ ಆ ದೇವರು ಆಕೆಯ ಹಣೆಯಲ್ಲಿ ಸುಖವನ್ನ ಬರೆದಿಲ್ಲವೋ.. ಇಲ್ಲಾ ಅವಳು ಬದುಕನ್ನ ಗೆದ್ದರೀತಿಗೆ ದೇವರು ಸೋತು ಜಿದ್ದಿಗಿಳಿದ್ದಿದ್ದಾನೋ..!? ಅನಿಸುತ್ತಿದೆ..
ಕಾರು ಮಾಗಡಿ ಕೋಟೆಯ ಎದುರಿನ ರಸ್ತೆಗೆ ತಿರುಗಿತು ಬಲಭಾಗಕ್ಕೆ ಸಣ್ಣ ಕೆರೆಬಿಟ್ಟೋಡನೆಯೇ ಮಗ್ಗುಲಿಗೆ ಒಂದು ಸಣ್ಣ ಹಳ್ಳಿ ಅದನ್ನ ದಾಟಿ ಮುಂದೆ ಹೋಗುತ್ತಿದೆ ವಿದ್ಯುತ್ ಬೇಳಕಿಲ್ಲದ ಗುಂಡಿ ತುಂಬಿರುವ ರಸ್ತೆಗಳು ಎಡಭಾಗಕ್ಕೆ ಹೊಲದ ಸಾಲು ಬಲಭಾಗಕ್ಕೆ ಬಂಡೆ ಗುಡ್ಡ ಹಾಗೆ ಅಲ್ಲಲ್ಲಿ ಬೆಳೆದಿದ್ದ ದೊಡ್ಡಮರಗಳು ಗುಚ್ಚಿಗಳ ಸಾಲು..! ಕುಲುಕುತ್ತ ಹೋಗುತ್ತಿದ್ದ ಕಾರಿನ ಎದುರಿಗೆ ಹುಡುಗನೊಬ್ಬ ನೆಡೆದು ಹೋಗುತ್ತಿದ್ದಾನೆ ಸಮಯ ಹನ್ನೊಂದು ಇಪ್ಪತ್ತು. ಇಷ್ಟುಹೊತ್ತಿನಲ್ಲಿ ಯಾರಿರಬಹುದೆಂದು ಅವನ ಪಕ್ಕಕ್ಕೆ ಹೋಗಿ ಗಾಡಿ ನಿಲ್ಲಿಸಿ ನೋಡಿದರೆ ಅರುಣ.! ಅವನನ್ನ ಕೂರಿಸಿಕೊಂಡು ಮಾತನಾಡಲು ಮನಸ್ಸಿಲ್ಲದೆ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಗುಂಡಿಗಳ ನೋಡುತ್ತಾ ಎರಡನೇ ಗೇರಿನಲ್ಲೇ ಡ್ರೈವ್ ಮಾಡುತ್ತಿದ್ದೆ.. ಅವನೇ ಇಷ್ಟೋತ್ತಿನಲ್ಲಿ ನಮ್ಮೂರಕಡೆ ಹೊರಟಿದ್ದಿಯಲ್ಲ ಅಣ್ಣ ಏನು ಸಮಾಚಾರ ಅಂದ..! ತಿರುಗಿ ಅವನನ್ನೇ ನೋಡುತ್ತಾ ನಿನ್ನ ಮೊಬೈಲ್ ಏನು ಆಯ್ತು ಅಂದೆ.?
ಬಸ್ನಲ್ಲಿ ಕದ್ದುಬಿಟ್ರು ಅಣ್ಣ..
ಇಸ್ಟು ಹೊತ್ತಿನವರೆಗೂ ಏನು ಮಾಡ್ತಿದ್ದೆ..?
ಫೋನ್ ಇಲ್ಲದೆ ಪರದಾಡಿ. ಕೆಲಸ ಮುಗಿಸಿಕೊಂಡು ಬರುತ್ತಿದ್ದೀನಿ.!
ಇವನಿಗೆ ಕಿರಣ ಸತ್ತಿರುವ ವಿಚಾರ ಗೊತ್ತಿಲ್ಲ.. ಹೇಳೋದು ಬೇಡ ಅನಿಸಿ ಸುಮ್ಮನಾದೆ ಅವನೇ ಮತ್ತೆ ಮಾತಿಗಿಳಿದ ಅಣ್ಣಾ ಈ ರೋಡ್ನಲ್ಲಿ ಈ ಟೈಂ ನಲ್ಲಿ ಬರೋಕೆ ಹೋಗ್ಬೇಡಿ ಅಣ್ಣ ಜಾಗ ಸರಿ ಇಲ್ಲಾ.. ಅಂದ..!
ನಗುತ್ತ ನೀನು ಬರ್ತಿದ್ದಿಯಲ್ಲೋ ಅಂದೆ.
ನಾನು ಹಳಬ ಓಡಾಡಿ ಅಭ್ಯಾಸವಿದೆ ಇವತ್ತು ನಾನು ಬಂದಿದ್ದಕ್ಕೆ ಸರಿಹೋಯ್ತು.. ಇಲ್ಲಾ ಅಂದ್ರೆ ಕಷ್ಟ ಆಗ್ತಿತ್ತು ಅಂದ..!
ನಗುತ್ತಲೇ ಸುಮ್ಮನಾದೆ ಊರು ಹತ್ತಿರವಾಗುತ್ತಿದೆ ಆ ಊರಿನಲ್ಲೂ ವಿದ್ಯುತ್ ಬೆಳಕಿಲ್ಲ ಮನೆಯೊಳಗೆ ಉರಿಯುತ್ತಿದ್ದದ್ದು ಚರ್ಚ್ ಲೈಟ್ಗಳು ಮಾತ್ರ..
ಮತ್ತೆ ಅವನತ್ತ ತಿರುಗಿದೆ ಅವನ ಕೈನಲ್ಲಿ ಟ್ಯಾಟು #GK ಅಂತ ಡಿಸೈನ್ ಆಗಿ ಟ್ಯಾಟು ಹಾಕಿದ್ದ ಏನು ಇದು ಅಂದೆ ಗಂಗಮ್ಮ ಕಿರಣ ಅಂದ..!
ಆ ಮಾತು ಕೇಳಿ ಗಂಟಲು ಬಿಗಿಯಾಯ್ತು.. ಕಣ್ಣುಗಳು ನೀರು ತುಂಬುತ್ತಿದೇ
ಭಾವನೆಗಳ ತೊಳಲಾಟವಾಗುತ್ತಿದೆ..
ಅಣ್ಣಾ ಇಲ್ಲೇ ನಿಲ್ಲಸಿ ಕಾರು ಒಳಗೆ ಬರೋಕೆ ಆಗಲ್ಲ ಬಂದ್ರೆ ವಾಪಸ್ ತಿರುಗಿಸೋದು ಕಷ್ಟ ಅಂತ ಹೇಳಿ ಎದುರಿಗೆ ಖಾಲಿ ಜಾಗದಲ್ಲಿ ಹಾಕುವುದಕ್ಕೆ ಹೇಳಿ ಹೊರಟುಹೋದ.. ನಾನು ಗಾಡಿಯನ್ನ ಪಾರ್ಕ್ ಮಾಡಿ ಬೇಕಂತಲೇ ಸ್ವಲ್ಪ ಸಮಯ ಬಿಟ್ಟು ಹೋದೆ..
ಇನ್ನು ಶವ ಸಿಕ್ಕಿರಲಿಲ್ಲ ಅರುಣ ಮೂಲೆಯಲ್ಲಿ ಕುಳಿತಿದ್ದ ಅತ್ತೆ ಅತ್ತು ಅತ್ತು ಸುಸ್ತಾಗಿ ಕುಸಿದು ಕುಳಿತ್ತಿದ್ದಳು ಹಾಸನದ ಚಿಕ್ಕಪ್ಪ ಆಗಲೇ ಬಂದಿದ್ದರು ಸ್ವಲ್ಪ ಹೊತ್ತು ಹಾಗೆ ಮೌನ ಅತ್ತೆ ಕತ್ತೆತ್ತಿ ನೋಡಿದಳು ಸಣ್ಣ ಬೆಳಕಲ್ಲೇ ಮುಖ ಗುರುತು ಹಿಡಿದವಳೇ ಅಳಲು ಶುರುವಾದಳು ಸ್ವಲ್ಪ ಹೊತ್ತು ಸಮಾಧಾನದ ಮಾತುಗಳನ್ನಾಡಿ ಹೊರ ಬಂದೆ ಚಿಕ್ಕಪನು ಹೊರ ಬಂದರು..
‘ಬಾಡಿ ಸಿಕ್ಕಿಲ್ಲ ಕಾಣೋ.. ಬೆಳಗ್ಗೆ ಬಂದು ಹುಡುಕ್ಕುತ್ತಾರಂತೆ.! ಬೆಳಗ್ಗೆ ಊರಿನಿಂದ ಸಂಬಂಧಿಕರು ಬರ್ತಾರೆ ನೋಡೋಣ ಏನು ಮಾಡಬೇಕು ಅಂತ ಮುಂದಿನದ್ದು ಯೋಚನೆ ಬೆಳಗ್ಗೆ ಮಾಡೋಣ’.. ಅಂದ್ರು
‘ಯಾಕೆ ಸತ್ತ ಅಂತ ಗೊತ್ತಿಲ್ವ.?’
‘ಇಲ್ಲಾ ಪಾಪ’
ಮುಂದೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅನಿಸಿ ಮತ್ತೆ ಏನನ್ನು ಮಾತನಾಡದೆ ಸುಮ್ಮನೆ ಹೊರಗೆ ಕುಳಿತೆ.. ಒಳಗೆ ಬಾ ಅಂದ್ರು ಇಲ್ಲಾ ಕಾರಲ್ಲಿ ಇರ್ತೀನಿ ಅಂತ ಹೋಗಿ ಸ್ವಲ್ಪ ಹೊತ್ತು ಮಲಗಿದೆ.
ಬೆಳಕ್ಕಾಗಿ ಉರಿನವರೆಲ್ಲ ಕೆರೆಯ ಬಳಿ ಹೋಗುತ್ತಿದ್ದರು ಹಾಗೆ ನಾನು ಹೊರಟೆ ಹಿಂದೆಯೇ ಪೊಲೀಸ್ ಗಾಡಿ ಬಂತು ನೇರ ಕೆರೆಯ ಬಳಿ ಹೋದೆ ವಿಶಾಲವಾದ ದೊಡ್ಡ ಕೆರೆ ಈ ವರ್ಷದ ಮಳೆಗೆ ತುಂಬಿದೇ ಒಂದು ಮಗ್ಗುಲಿಗೆ ಸಣ್ಣ ಸಣ್ಣ ಗುಡ್ಡಗಕಿದ್ದವು.. ಇಷ್ಟು ದೊಡ್ಡ ಕೆರೆಯಲ್ಲಿ ಹುಡುಕುವುದು ಕಷ್ಟ ಇದೆ ಕಣ್ರಿ ಅಂತ ಪೊಲೀಸ್ ನವರು ಮಾತನಾಡಿಕೊಳ್ಳುತ್ತಿದ್ದರು.! ತೆಪ್ಪದಲ್ಲಿ ಸ್ಥಳೀಯ ಈಜುಗಾರರು ಹುಡುಕಲು ಇಳಿದರು.. ಮಧ್ಯಾಹ್ನ ಮೂರರವೊತ್ತಿಗೆ ಶವ ಸಿಕ್ಕಿತು ಜುಟ್ಟು ಹಿಡಿದುಕೊಂಡು ಒಬ್ಬ ಎಳೆದುಕೊಂಡು ಬಂದ..! ದಡಕ್ಕೆ ತಂದು ಮಲಗಿಸುವ ಹೊತ್ತಿಗೆ ಅಲ್ಲೇ ಕುಳಿತ್ತಿದ್ದ ಅತ್ತೆ ಅವರ ಜೊತೆಯಲ್ಲಿದ್ದ ಅರುಣ ಕಿರುಚ್ಚುತ್ತ ಅಳುತ್ತಿದ್ದಾರೆ.. ಸಂಬಂಧಿಕರು ಕೂಡ ಅವನ ಗೆಳೆಯರು ಎಲ್ಲರೂ ಸುತ್ತ ನಿಂತು ಬಿಟ್ಟರೂ.. ಸ್ವಲ್ಪ ಹೊತ್ತಿನ ನಂತರ ಪೊಲೀಸ್ನೊಬ್ಬ ಎಲ್ಲರನ್ನು ದೂರ ಹೋಗುವಂತೆ ಹೇಳಿ ಪೋಸ್ಟ್ ಬರ್ಟಮ್ ಗೆ ಮಾಗಡಿದೆ ತೆಗೆದುಕೊಂಡು ಹೋಗಬೇಕೆಂದು ಹೇಳಿದ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ಸಹಿ ತೆಗೆದುಕೊಳ್ಳುತ್ತಿದ್ದ. ಇದನ್ನೆಲ್ಲ ದೂರದಿಂದಲೇ ನೋಡುತ್ತಾ ನಿಂತಿದ್ದೆ ಚಿಕ್ಕಪ್ಪ ಸುತ್ತ ತಿರುಗಿ ನೋಡಿ ನನ್ನನ್ನು ಕರೆದರು ನಾನು ಹೊರಟೆ ಗಾಡಿತೆಗಿ ಮಾಗಡಿಗೆ ಹೋಗಿ ಬರೋಣ ಅಂತ ಹೇಳಿ ಗಾಡಿ ಬಳಿ ಹೊರಟರು.! ಆಂಬ್ಯುಲೆನ್ಸ್ ಶವವವನ್ನು ಹೊತ್ತು ವೇಗವಾಗಿ ಹೊರಟು ಹೋಯ್ತು ಹಿಂದೆ ನಮ್ಮ ಕಾರು ಜೊತೆಗೆ ಅಲ್ಲಿನ ಮುಖಂಡರು ಮಾಗಡಿ ಸರಕಾರಿ ಆಸ್ಪತ್ರೆಯ ಬಂದು ನಿಂತೆವು ಒಳ ಹೋದವರೆ ಡಾಕ್ಟರ್ ಗೆ ಸ್ವಲ್ಪ ದುಡ್ಡುಕೊಟ್ಟು ಬೇಗ ಪೋಸ್ಟ್ ಬರ್ಟಮ್ ಮಾಡಿಸವ ಆತುರದಲ್ಲಿದ್ದರು. ನಾನು ಶವದ ಬಳಿ ನಿಂತೆ ಕೈ ಕಾಲುಗಳು ಸೆಳೆತುಕೊಂಡಿದ್ದವೇನೋ ಮುರಿದು ನೇರ ಮಾಡಿದ್ದರು.. ಆ ಕೈಗಳನ್ನೊಮ್ಮೆ ನೋಡಿದೆ..! ರಾತ್ರಿ ಅರುಣನ ಕೈಯಲ್ಲಿದ್ದ #GK ಟ್ಯಾಟು ನನಗೆ ಕಾನ್ಫ್ಯೂಸ್ ಆಗೋಕೆ ಶುರುವಾಯ್ತು..! ಶವ ಸಿಕ್ಕ ಮೇಲೆ ಅತ್ತೆ ಕೂಡ #ಅರುಣ ಅಂತ ಕಿರುಚುತ್ತಿದ್ದಳು.. ಈಗ ಸತ್ತವನು ಅರುಣ ಎಂದ ಮೇಲೆ ರಾತ್ರಿ ಸಿಕ್ಕವನು ಅರುಣ..! ಮನಸ್ಸು ಗೊಂದಲದಲ್ಲಿ ಸಿಕ್ಕಿಬಿತ್ತು.!
ಡಾಕ್ಟರ್ ಬಂದು ಶವಗಾರದೊಳಗೆ ಹೋದರು ಜೊತೆಗೆ ಇಬ್ಬರೂ ಹೆಣ ಕುಯ್ಯುವವರು ಖಾಕಿ ಬಟ್ಟೆ ಹಾಕಿದ್ದವರ ಬಾಯಲ್ಲಿ ಆಗಲೇ ಎಣ್ಣೆಯ ಕಮಟು ರಾಚುತ್ತಿತ್ತು.. ಸ್ವಲ್ಪ ಸಮಯದ ನಂತರ ಮುಖ ಕಾಣುವಂತೆ ಮಾತ್ರ ಬಿಟ್ಟು ಪೂರ್ತಿ ಪ್ಯಾಕ್ ಮಾಡಿದ ದೇಹ ಹೊರಗೆ ಬಂತು.. ಅವರಿಬ್ಬರು ಸಹಾಯಕರಿಗೂ ಚಿಕ್ಕಪ್ಪ ಕೊಟ್ಟಿದ್ದ ಎರಡು ಸಾವಿರದ ಒಂದು ನೋಟುಕೊಟ್ಟೆ..!
“ಪ್ರೀತಿ ಪ್ರೇಮ ಯಾಕೆ ಬೇಕು ಈ ಹುಡುಗರಿಗೆ ಅವ್ವ ಅಪ್ಪನ್ನ ಚನ್ನಾಗಿ ನೋಡ್ಕೊಂಡು ಅವರ ಯಣಕ್ಕೆ ಬೆಂಕಿ ಇಕ್ರೋ ಅಂದ್ರೆ ಇವೇ ಸಾಯ್ಬರದ ವಯಸ್ಸಲ್ಲಿ ಸಾಯ್ತಾವೇ.. ಅಂತ ಕಣ್ಣೀರು ತುಂಬುಕೊಂಡು ಹೋರಾಟ ಹೋದ”
ಮಾಜರ್ ಮಾಡ್ತಿದ್ದ ಪೊಲೀಸ್ ನವರು ಸಾಕ್ಷಿಗೆ ಸಹಿ ಹಾಕಲು ಕರೆದರು ಸತ್ತವನು ಅರುಣ ಅಂತ ಸ್ಪಷ್ಟವಾಗಿ ಬರೆದಿತ್ತು ಸಹಿ ಹಾಕಿದೆ ಸತ್ತವನ ಯಾರು ಎಂಬ ಗೊಂದಲ ಸ್ಪಷ್ಟವಾಗಿತ್ತು.. ಪ್ಯಾಕ್ ಆದ ಶವ ಮತ್ತೆ ತುಬಿನಕೆರೆಯತ್ತ ಆಂಬ್ಯುಲೆಸ್ನಲ್ಲಿ ಹೊರಟಿತು.. ನಾವು ಹೊರಟೆವು ಊರು ಮುಟ್ಟುವ ಹೊತ್ತಿಗೆ ಚಿತೆಯೊಂದು ಅಣಿಯಾಗಿತ್ತು.! ಅತ್ತು ಸುಸ್ತಾಗಿದ್ದವರೆಲ್ಲ ಹೂವು ಹಾಕಿ ಹೋಗುತ್ತಿದ್ದರು.. ಕೆಲವರು ಊರಿಗೆ ಹೋಗುವ ಗಡಿಬಿಡಿಯಲ್ಲಿದ್ದರು ಅನಿಸುತ್ತದೆ.. ಬೇಗನೆ ಚಿತೆಯ ಮೇಲೆ ಮಲಗಿಸಿ ಕಿರಣನ ಕೈಯಲ್ಲಿ ಕೊಳ್ಳಿಕೊಟ್ಟುರು ಅವನು ಕಿರುಚುತ್ತಲೇ ಇದ್ದ ಅವನು ಕೈಯಲ್ಲಿ ಕೊಳ್ಳಿ ಹಿಡಿದಾಗ ಅವನ ಕೈಯನ್ನೊಮ್ಮೆ ಗಮನಿಸಿದೆ ಬೋಡು ಕೈಗಳು ಯಾವುದೇ ಟ್ಯಾಟು ಇರಲಿಲ್ಲ..!
ಎಲ್ಲರನ್ನು ಮಾಗಡಿಗೆ ಬಿಟ್ಟು ಬಂದೇ ಅತ್ತೆ ಸುದಾರಿಸಿಕೊಂಡಿದ್ದಳು ಬಲವಂತ ಮಾಡಿ ಊಟ ಮಾಡಿಸುತ್ತಿದ್ದರು.. ಕಿರಣ ಕೂಡ ಊಟ ಮಾಡುತ್ತಿದ್ದ.
ನೆನ್ನೆ ನಿನ್ನ ಮೊಬೈಲ್ ಏನಾಗಿತ್ತು ಎಂದೇ..?
ಬಸ್ನಲ್ಲಿ ಯಾರೋ ಕದ್ದು ಬಿಟ್ಟರು..
ಎಷ್ಟು ಗಂಟೆಗೆ ಬಂದೆ ..?
ಏಳು ಗಂಟೆಯಾಗಿತ್ತು ಮಾಗಡಿಗೆ ಬಂದೆ ಫ್ರೆಂಡ್ ಸಿಕ್ಕಿ ಹೇಳಿ ಕರೆದುಕೊಂಡು ಬಂದ..! ಮತ್ತೆ ಮಾತನಾಡಲು ಏನು ಇರಲಿಲ್ಲ..
ನೀನಾದ್ರು ಅತ್ತೆನ ಚನ್ನಾಗಿ ನೋಡ್ಕೋ.. ಎಂದು ಹೇಳಿ ಹೊರ ಬಂದೆ
ಚಿಕ್ಕಪ್ಪ ಮಾತಿಗೆ ಕುಳಿತರೂ ಹುಡ್ಗಿಗೋಸ್ಕರ ಸತ್ತವನೆ ದರಿದ್ರ ನನ್ನ ಮಗ ಕರೆದುಕೊಂಡು ಬಂದಿದ್ರೆ ಮದ್ವೆ ಮಾಡೋಲ್ಲ ಅಂದಿರೋಳ ಅವರಮ್ಮ.. ಪ್ರಾಣ ಕಳೆದುಕೊಳ್ಳೋದು ಏನಿತ್ತು.. ಇವಕ್ಕೆಲ್ಲ ಅವರಮ್ಮ ಕಷ್ಟಬಿದ್ದು ಸಾಕಿದ್ದು ನೆನಪಿಗೆ ಬರೋಲ್ವ… ನಾನು ಸುಮ್ಮನೆ ಕುಳಿತ್ತಿದ್ದೆ..!
ರಾತ್ರಿ ಹತ್ತುಗಂಟೆಯ ಹೊತ್ತಿಗೆ ಹೊರಟೆ ಅದೇ ಗುಂಡಿಗಳಿರುವ ದಾರಿ ಬೆಂಗಳೂರು ನಲವತ್ತು ಕಿಲೋಮೀಟರ್.. ಮಾಗಡಿ ಐದು ಕಿಲೋಮೀಟರ್ ಅದೇ ಎರಡನೇ ಗೇರ್ನಲ್ಲಿ ಗಾಡಿ ನಿಧಾನವಾಗಿ ಚಲಿಸುತ್ತಿದೆ ಸುತ್ತ ಪೂರ್ತಿ ಕತ್ತಲು ಮೇಲೆ ಚಂದ್ರನಿಲ್ಲ ಬರಿ ಚುಕ್ಕಿಗಳು ರಾತ್ರಿಯ ಕತ್ತಲೆಯನ್ನು ಸೀಳಿ ಮುನ್ನುಗ್ಗುತ್ತಿರುವ ಹೆಡ್ಲೈಟಿನ ಬೆಳಕು ಬೆಳಗ್ಗೆಯಲ್ಲ ಚಂದವಾಗಿ ಕಾಣುವ ಮರಗಳು ಬಂಡೆಗಳು ಗುಚ್ಚಿಗಳು ರಾತ್ರಿಹೊತ್ತಿಗೆ ವಿಕಾರರೂಪ ತಳೆದ ದೆವ್ವಗಳಂತೆ ಭಾಸವಾಗುತ್ತಿವೆ..! ಗಾಡಿ ಕುಲುಕ್ಕುತ್ತಲೇ ಸಾಗುತ್ತಿದೆ.. ನೆನ್ನೆ ಅರುಣ ಸಿಕ್ಕ ಸ್ಥಳದ ಹಿಂದೆಯೇ ಒಂದು ಹೆಂಗಸು ದಾರಿ ಮದ್ಯೆ ನೆಡೆದು ಹೋಗುತ್ತಿದ್ದಾಳೆ ಹಾರನ್ ಮಾಡಿದರು ಕೆಳಿಸದವಳಂತೆ ನೆಡೆಯುತ್ತಿದ್ದಾಳೆ.. ನನಗೂ ಹಾರನ್ ಮಾಡಿ ತಾಳ್ಮೆ ಕಳೆದುಕೊಂಡು ಕಾರಿನಿಂದ ಇಳಿದು ಮುಂದೆ ಬಂದು.
“ಮೋ… ಕಿವಿ ಕೇಳೋದಿಲ್ವಾ ನಿಂಗೆ ಸೈಡಿಗೆ ಬಾ ಇಲ್ಲಾ ಅದೆಲ್ಲಿ ಹೋಗ್ಬೇಕು ಅಂತ ಹೇಳು ಹೋಗ್ತಾ ದಾರಿಲಿ ಬಿಟ್ಟು ಹೋಗ್ತೀನಿ.. ಅಂದೆ ಅಷ್ಟೇ..!
ಕಾರಿನ ಇಂಡಿಕೇಟರ್ಗಳು ತನ್ನ ಪಾಡಿಗೆ ತಾವು ಮೀನುಗುತ್ತಿವೆ ಜೊತೆಗೆ ಹಾರನ್ ಡುಯ್ಯೋ..ಡುಯ್ಯೋ.. ಡುಯ್ಯೋ….. ಅನ್ನೋ ಶಬ್ದ ಆ ರಾತ್ರಿಯ ಮೌನವನ್ನು ಮುಳುಗಿಸಿ ಮೆರೆಯುತ್ತಿದೆ.. ಈಗಾ ನಾನು ಮಾತನಾಡುತ್ತಿರುವುದು ಆಕೆಗೆ ಕೇಳುತ್ತಿಲ್ಲ ಹಾಗೆ ಒಂದೆಜ್ಜೆ ಹಿಂದೆ ಇಟ್ಟಳು ಕಾರು ಮತ್ತೆ ನಿಶಬ್ದ.. ಇನ್ನೊಂದು ಹೆಜ್ಜೆ ಹಿಂದಿಟ್ಟಳು ಕಾರಿನ ಡೋರು ದಡಕ್ಕೆಂದು ಹಾಕಿಕೊಂಡಿತು.. ಪೂರ್ತಿ ಕತ್ತಲು ಎದುರಿಗೆ ಅವಳು ಸುತ್ತಲೂ ನೋಡಿದೆ ಎತ್ತ ಓಡುವುದೇ ತಿಳಿಯುತ್ತಿಲ್ಲ.. ಕಣ್ಣೆದುರಿಗೆ ಇಷ್ಟೆಲ್ಲ ನೆಡೆಯುತ್ತಿದೇ ಆ ಕೊರೆಯುವ ಚಳಿಯಲ್ಲೂ ಬೆವರು ಹರಿದು ಹೋಗುತ್ತಿದೆ.. ಎದುರಿನ ಬಂಡೆಯ ಮೇಲೆ ಯಾರೋ ವ್ಯಕ್ತಿ ಕುಳಿತು ನಗುತ್ತಿದ್ದಾನೆ ಅಲ್ಲೂ ಕೂಡ ಕತ್ತಲು ಅವನನ್ನೇ ನೋಡುತ್ತಿದ್ದೀನಿ ಎದ್ದು ನಿಂತ.. ಹೌದು ಈಗಾ ಆಕಾರ ಸ್ಪಷ್ಟವಾಗಿ ಹೊಳೆಯುತ್ತಿದೆ ನೆನ್ನೆ ಸಿಕ್ಕ ಅರಣ..!
“ನಾನು ನೆನ್ನೆನೆ ನಿನಗೆ ಹೇಳ್ದೆ ಈಗ ಅನುಭವಿಸು” ಅಂತ ಮತ್ತೆ ಕುಳಿತುಕೊಂಡ..!
ಇತ್ತ ಇನ್ನೊಂದು ಹೆಜ್ಜೆ ಇಡುತ್ತಲೇ ಮತ್ತೆ ಕಾರುಗಳ ಎಲ್ಲ ಲೈಟ್ಗಳು ಆನ್ ಆಫ್ ಆಗುತ್ತಿದೆ ಇನ್ನೊಂದು ಹೆಜ್ಜೆ ಹಾರನ್ ಬಿಟ್ಟು ಬಿಟ್ಟು ಬಡಿದುಕೊಳ್ಳುತ್ತಿದೆ ಅವಳ ಹೆಜ್ಜೆಯ ವೇಗ ಹೆಚ್ಚಿದಂತೆಲ್ಲ ಕಾರಿನ ಆ ಕ್ರಿಯೆಯು ವೇಗ ಹೆಚ್ಚಿಸಿಕೊಳ್ಳುತ್ತಿದೆ..
ನನ್ನ ಕಾಲುಗಳು ಅಲುಗದೆ ಸೋತವಂತೆ ನಿಂತು ಬಿಟ್ಟಿದೆ ಎದುರಿಗೆ ಆ ಆಕಾರ ಕೈಗಳತ್ತ ನೋಡಿದೆ ಕೈಗಳಿಂದ ಹರಿಯುತ್ತಿದ್ದ ರಕ್ತ ಉದ್ದ ಉಗುರಿನಿಂದ ತೊಟ್ಟಿಕ್ಕುತ್ತಿದೆ ಅದೇ ಕೈಗಳನ್ನೆತ್ತಿ ನನ್ನ ಹೆಗಲಮೇಲಿಟ್ಟಳು ಈಗಾ ಜೀವ ಆರಿಹೋಗುತ್ತಿದೆ ಅನಿಸ ತೊಡಗಿತು ಎದೆ ಜೋರು ಬಡಿದುಕೊಳ್ಳುತ್ತಿದೆ.. ಕಿರುಚಿದವಳಂತೆ ಇನ್ನೊಂದು ಕೈ ಎತ್ತುವಹೊತ್ತಿಗೆ ಕಾರು ಸೈಲೆಂಟ್ ಪೂರ್ತಿ ಕತ್ತಲೆ.. ಕಣ್ಣುಗಳಿಗೂ ಕೂಡ ಪೂರ್ತಿಯಾಗಿ ಮಂಕು ಬಡಿದಿದೆ.. ಪೂರ್ತಿಯಾಗಿ ಎದುರಿಗಿದ್ದವಳು ಕೂಡ ಕಾಣದಂತಾ ಕತ್ತಲು… ಮತ್ತೊಂದು ಕೈ ಇಟ್ಟಳು…!
ಜೋರಾಗಿ ಭುಜವಿಡಿದು ಬಗೆದಂತೆ ಅನಿಸುತ್ತಿದೆ ನೋವಿನ ಜೊತೆಗೆ ಕಣ್ಣಿಗೆ ನಿಧಾನವಾಗಿ ಬೆಳಕು ಕಾಣಲು ಶುರುವಾಯ್ತು ಎದುರಿಗೆ ನನ್ನ ಹೆಂಡ್ತಿ ಟೀ ಹಿಡಿದುಕೊಂಡು.. ಯೇ.. ಎದ್ದೇಳು ಟೈಂ ಆಯ್ತು ಎಸ್ಟೋತ್ತಿನತನಕ ಮಲಗುತ್ತಿಯ ಎದ್ದು ಟೀ ಕುಡಿ ಅಂತ ಎಬ್ಬಿಸಿ ಹೋದಳು..
***********
.
.
.
.
.
.
.
.
.