ಅನುವಾದ ಸಂಗಾತಿ

ಜುಲೈನ ಗಸಗಸೆಯ ಹೂಗಳು

Landscape Photography of Flower Garden

ಮೂಲ: ಸಿಲ್ವಯಾ ಪ್ಲಾತ್(ಅಮೇರಿಕಾ ಕವಿ)

Image may contain: 2 people, people smiling, people sitting and child

ಕನ್ನಡಕ್ಕೆ ಕಮಲಾಕರ ಕಡವೆ

ಜುಲೈನ ಗಸಗಸೆಯ ಹೂಗಳು

ಪುಟ್ಟ ಗಸಗಸೆಯ ಹೂವೇ, ಪುಟ್ಟ ನರಕದ ಜ್ವಾಲೆಯೇ
ನೀನು ಏನೂ ಹಾನಿ ಮಾಡೆಯೇನು?

ನೀ ಕಂಪಿಸುವಿ, ನಿನ್ನ ಮುಟ್ಟಲಾರೆ ನಾನು
ಜ್ವಾಲೆಗಳ ನಡುವೆ ಕೈ ಇಡುವೆ ನಾನು. ಏನೂ ಸುಡುತ್ತಿಲ್ಲ

ನಿನ್ನ ನೋಡುವುದರಲ್ಲೇ ನಿತ್ರಾಣನಾದೆ ನಾನು
ಹಾಗೆ ಕಂಪಿಸುತ್ತ, ಸುಕ್ಕುಗಟ್ಟಿ, ಕಡು ಕೆಂಪಾಗಿ, ಬಾಯೊಳಗಿನ ಚರ್ಮದಂತೆ

ಬಾಯಿಯೊ ಅಷ್ಟೇ ರಕ್ತರಂಜಿತ
ರಕ್ತಮಯ ಲಂಗದಂತೆ!

ಮುಟ್ಟಲಾರೆ ಆ ಹೊಗೆಯ ನಾನು
ಎಲ್ಲಿ ನಿನ್ನ ಮಾದಕತೆ, ನಿನ್ನ ವಾಕರಿಕೆ ತರಿಸುವ ಮಾತ್ರೆಗಳು?

ನನಗೆ ರಕ್ತಸ್ರಾವವಾದರೂ ಆದರೆ, ಅಥವಾ ನಿದ್ರೆ
ನನ್ನ ಬಾಯಿ ಅಂತಹ ಗಾಯದೊಂದಿಗೆ ಒಂದಾಗುವಂತಿದ್ದರೆ!

ಆ ನಿನ್ನ ಮದ್ಯ ನನ್ನೊಳಗೆ ಒಸರುವಂತಿದ್ದರೆ, ಈ ಗಾಜಿನ ಗುಳಿಗೆಯಲ್ಲಿ
ಮಂಕಾಗಿಸುತ್ತ, ಸ್ತಬ್ಧವಾಗಿಸುತ್ತ

ಆದರೆ, ಬಣ್ಣವಿರದೇ, ಬಣ್ಣವಿರದೇ

*****

Poppies In July


Little poppies, little hell flames,
Do you do no harm?

You flicker. I cannot touch you.
I put my hands among the flames. Nothing burns

And it exhausts me to watch you
Flickering like that, wrinkly and clear red, like the skin of a mouth.

A mouth just bloodied.
Little bloody skirts!

There are fumes I cannot touch.
Where are your opiates, your nauseous capsules?

If I could bleed, or sleep! –
If my mouth could marry a hurt like that!

Or your liquors seep to me, in this glass capsule,
Dulling and stilling.

But colorless. Colorless.

*********

Leave a Reply

Back To Top