ಕಾವ್ಯಯಾನ

ಪಯಣ

ಶಂಭುಗೌಡ.ಆರ್.ಗಂಟೆಪ್ಪಗೌಡ್ರ)

ಬೆವರ ಬಸಿಯಬಹುದೇ
ಹೇಳು ನೀನು
ಶ್ರಮದ ಕವಾಟ ತಟ್ಟದೇ
“ಬೆಳಕು”
ಕತ್ತಲ ಸಮಾದಿಯ
ಮೇಲೊಬ್ಬ ಗೊತ್ತಿಲ್ಲದೇ
ಇಟ್ಟು ಹೋದ ಮೊಗ್ಗಲ್ಲದ ಹೂ
“ಪ್ರೀತಿ”
ಮುಚ್ಚಿದ ಕಣ್ಣೊಡಲೊಳಗಿನ
ದಿವ್ಯ ಚೇತನ
ಬೆಳಕು ಮತ್ತೆ ಪ್ರೀತಿ
ಸಂಗತಿ ಎರಡಾದರೂ
ಬೆಳಗುವ ತತ್ವವೊಂದೇ,

ಬದುಕೊಂದು ಎರಡು ಬಾಗಿಲು
ತೆರೆದರೊಂದು
ಮುಚ್ಚುವುದು ಮತ್ತೊಂದು
ತೆಗೆದು ಮುಚ್ಚುವ ಮಧ್ಯೆ
ತನ್ನ ತನವ ಬಚ್ಚಿಟ್ಟು
ಪರರ ಮೆಚ್ಚಿಸುವ
ಬಣ್ಣದಾಟವೇನು ಬದುಕು
ಹೇಳು ನೀನು ;

ಕಾಣದವನ ಸೂತ್ರಗಳ
ಬೀಜಾಕ್ಷರಗಳು ನಾವು
ಒಬ್ಬರನ್ನೊಬ್ಬರು
ಕೂಡಲೂ ಬಹುದು
ಇಲ್ಲವೇ
ಒಬ್ಬರೊಳಗೊಬ್ಬರು
ಕಳೆದು ಹೋಗಲೂ ಬಹುದು
“ಬದುಕು”
ಯಾರೋ ಕಟ್ಟಿಟ್ಟ
ಮತ್ಯಾರೋ ಜೀಕುವ ಜೋಕಾಲಿ


One thought on “ಕಾವ್ಯಯಾನ

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Leave a Reply

Back To Top