ನಿಮ್ಮೊಂದಿಗೆ
ಸಂಪಾದಕೀಯ ಇವತ್ತಿಗೆ ಸಂಗಾತಿಗೆ ವರ್ಷ ತುಂಬಿತು. ಈ ಪಯಣದಲ್ಲಿ ಜೊತೆ ನೀಡಿದ ನನ್ನೆಲ್ಲ ಓದುಗಮತ್ತು ಬರಹಗಾರ ಮಿತ್ರರುಗಳಿಗೆ ದನ್ಯವಾದಗಳು. ಸಂಗಾತಿಯ ಸಾಧನೆಯೇನು? ಕೇಳಿದವರಿಗೆ ನನ್ನ ಉತ್ತರ: ಒಂದು ವಿನಮ್ರ ಮುಗುಳ್ನಗುವಷ್ಟೆ! ಹೆಚ್ಚೇನು ಹೇಳಲಿ? ಸಾಕ್ಷಿಗೆ ಸಂಗಾತಿಯಬರಹಗಳೇ ಇವೆ. ** ಆದರೂ ಕೆಲವನ್ನು ನಿಮಗಾದರೂ ಹೇಳಲೇಬೇಕು: ಮುನ್ನೂರ ಅರವತ್ತೈದು ದಿನಗಳು, ಮುನ್ನೂರ ಐವತ್ತಕ್ಕೂ ಅಧಿಕ ಲೇಖಕರು, ಮೂರು ಸಾವಿರಕ್ಕೂ ಹೆಚ್ಚಿನ ಬರಹಗಳು ಹದಿನೈದಕ್ಕೂ ಹೆಚ್ಚು ಅಂಕಣಗಳು ಅಮೇರಿಕಾದ ಅಶ್ವಥ್ ರಿಂದ ಹಿಡಿದು ಚಾಮರಾಜನಗರದ ಮಾಲತಿ ಯವರವರೆಗು ಹರಡಿದ ವಿಶಾಲ […]
ಕಲಿಕೆ ಕಸಿದ ಕರೋನ
ಕವಿತೆ ಕಲಿಕೆ ಕಸಿದ ಕರೋನ ಜಿ.ಎಸ್.ಹೆಗಡೆ ಶಾಲೆಯ ಅಂಗಳದಿ ಬೆಳೆದಿವೆ ಈಗಮುಳ್ಳಿನ ಜೊತೆಗೆ ಕಳ್ಳಿಗಳುಕಲಿಕಾಕೋಣೆಯ ಚಪ್ಪರ ತುಂಬಿದೆಜೇಡರ ಬಲೆಯೊಳು ಕೀಟಗಳುಹಾಜರಿ ವಹಿಗೆ ಮೆತ್ತುತ್ತಿದೆ ಈಗಮಣಗಟ್ಟಲೆ ಧೂಳುಅಡುಗೆ ಮನೆಯಲಿ ಓಡಾಡುತಿವೆಇಲಿ ಜಿರಲೆಗಳು ಜೋರು ಪರಿಮಳವಾದ ಪೆನ್ಸಿಲ್ ರಬ್ಬರ್ಬ್ಯಾಗೊಳು ಹಾಗೆ ಇವೆಹೊಸ ಹೊದಿಕೆಯನು ಧರಿಸಿಹ ಪುಸ್ತಕತೆರೆಯಲು ಕಾಯುತಿವೆಅಪ್ಪನು ಕೊಡಿಸಿಹ ಬಣ್ಣದ ಛತ್ರಿಮಳೆಯೊಳು ಆಡು ಎನ್ನುತಿದೆಮಾವನು ಕೊಡಿಸಿಹ ಹೊಸ ಬಟ್ಟೆಯುಹುಟ್ಟುಹಬ್ಬವನು ನೆನಪಿಸಿವೆ ಶಾಲೆಗೆ ಹೋದರೆ ಗುರುಗಳು ಎಂದರು‘ಬರಬೇಡವೋ ನೀನು ಶಾಲೆ ಕಡೆ,ನೀನಿದ್ದಲ್ಲಿಗೆ ನಾನೇ ಬರುವೆನುನೀಡಿರಿ ಗಮನವ ವಿದ್ಯೆಯೆಡೆ’ಊರಿನ ಗುಡಿಗೋಪುರ ಅಂಗಣದಲ್ಲಿಮಕ್ಕಳ ಮೊಗಕೆ […]
ಸಂಪಾದಕೀಯ-ಗಾಂಧಿ ವಿಶೇಷ
ಸಂಪಾದಕೀಯ-ಗಾಂಧಿ ವಿಶೇಷ ಗಾಂಧಿ ವಿಶೇಷ ನಿಮ್ಮ ಮುಂದಿದೆಬಹಳಷ್ಟು ಬರಹಗಳುಬಂದ ಸಂತೋಷ ಒಂದೆಡೆಯಾದರೆ, ಗಾಂದಿಯನ್ನು ಹಾಡಿಹೊಗಳುವುದಕ್ಕಷ್ಟೇ ಬಹುತೇಕ ಬರಹಗಳು ಸೀಮಿತವಾದವೆಂಬ ವಿಷಾದವೂ ನನಗಿದೆ.ಗಾಂಧಿ ಪ್ರತಿಪಾದಿಸಿದ ಸಿದ್ದಾಂತಗಳ ಬಗ್ಗೆ ಮತ್ತಷ್ಟ ಗಂಭೀರ ಅದ್ಯಯನ ಚರ್ಚೆ ನಡೆಯಬೇಕಿದೆ. ಗಾಂಧಿಯ ಬಗ್ಗೆತೂಕವಾಗಿ ಬರೆಯುವಷ್ಟು ಓದಿ ಕೊಂಡವರು ಬರೆಯಲಿಲ್ಲವೆಂಬ ಬೇಸರವಿದೆ.ಸಾರ್ವಜನಿಕವಾಗಿ ಗಾಂಧಿಯ ಬಗ್ಗೆಒಳ್ಳೆಯ ಮಾತುಗಳನ್ನಾಡುತ್ತಲೇ ಾಂತರೀಕವಾಗಿ ಅಸಹನೆ ಬೆಳೆಸಿಕೊಂಡ ಬಹುತೇಕರಿಗೆ ಗಾಂದಿ ಅರ್ಥವೇ ಆಗಿಲ್ಲವೆನ್ನಬಹುದು. ಗಾಂಧಿಯನ್ನು ದ್ವೇಷಿಸುವ ಮನಸುಗಳ ಜೊತೆಯೇ ಬದುಕಬೇಕಾದ ಅನಿವಾರ್ಯತೆಯ ಈ ದಿನಗಳಲ್ಲಿ ಸಂಗಾತಿಗೆ ಬರೆಯುವ ಮೂಲಕ ಗಾಂಧಿಯನ್ನು ಸ್ಮರಿಸಿಕೊಂಡನಿಮಗೆ ದನ್ಯವಾದಗಳುಏನೇ […]
ಅಭಿನಂದನೆಗಳು
ಸಂಗಾತಿ ಪತ್ರಿಕೆಗೆ ಬರೆಯುತ್ತಿರುವನಾಲ್ವರು ಲೇಖಕಿಯರಿಗೆ ಇಂದು ವಿವಿಧ ಪ್ರಶಸ್ತಿಗಳು ದೊರಕಿದ್ದು ಪತ್ರಿಕೆ ಆ ನಾಲ್ವರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದೆ ಅಕ್ಷತಾ ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಮಯೂರ ವರ್ಮ ಪ್ರಶಸ್ತಿ ಪಡೆದಿದ್ದಾರೆ ಶ್ರೀದೇವಿ ಕೆರೆಮನೆ ಕನ್ನಡ ಸಾಹಿತ್ಯ ಪರಿಷತ್ ನೀಡುವಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ವಿಭಾ ಪುರೋಹಿತ್ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ರೂಪಶ್ರೀ ಎನ್.ಆರ್ ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ ************************************************************************
ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ […]
ಪ್ರಸ್ತುತ
ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ 2018ರಲ್ಲಿ ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ ಇರುವ ಎರಡು ಲೇಖನಗಳಲ್ಲಿ ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ […]
ನಿಮ್ಮೊಂದಿಗೆ….
ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ
ಪ್ರೇಮವೇ ಒಂದು ಧರ್ಮ.
ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು–
ಕಾವ್ಯಯಾನ
ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು […]
ನಿಮ್ಮೊಂದಿಗೆ
ಪ್ರಿಯ ಬರಹಗಾರರೆ- ಪ್ರಿಯ ಬರಹಗಾರರೆ,ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ. ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು. ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ. ಮೊದಲನೆಯದಾಗಿ ನಮ್ಮ ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಮೂರನೆಯದಾಗಿ ಬ್ಲಾಗಿನ […]