Category: ಇತರೆ

ಇತರೆ

ಅಕ್ಕ, ಲಲ್ಲಾ, ರಾಬಿಯಾ..!

ಲೇಖನ ಅಕ್ಕ, ಲಲ್ಲಾ, ರಾಬಿಯಾ..! ಕೆ.ಶಿವು.ಲಕ್ಕಣ್ಣವರ ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೇ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ.     ಏಕೋ ಏನೋ ದಿನದ ಯಾವುದೇ ಕುಷಿಯ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ..! # ಅಕ್ಕಮಹಾದೇವಿ …………………… ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಲಭ್ರಮೆ ಜಾತಿಭ್ರಮೆ, ನಾಮ […]

ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ […]

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

ಆ ಕಾಲವೊಂದಿತ್ತು..

ದೇವಯಾನಿ ಬರೆಯುತ್ತಾರೆ—
ಬರೆಯಬೇಕು , ಬರೆದುದನು ಸಂಭ್ರಮಿಸಬೇಕು ನಿಜ .ಆದರೆ ಬರವಣಿಗೆ ಮಾಗುವವರೆಗೂ ತಾಳ್ಮೆಯಿಂದ ಕಾಯಬೇಕು…

ಅಜ್ಜಿಮನೆಯ ಬಾಲ್ಯಸ್ಮೃತಿ

ನೆನಪು ಅಜ್ಜಿಮನೆಯ ಬಾಲ್ಯಸ್ಮೃತಿ ಹೇಮಚಂದ್ರ ದಾಳಗೌಡನಹಳ್ಳಿ ನಾನು ನನ್ನ ಅಜ್ಜಿಯ ಊರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಕಲಿತದ್ದು. ನಾನು ಅಜ್ಜಿಯ ಮನೆಗೆ ಹೋಗಿದ್ದೇ ಅಥವಾ ಅಜ್ಜಿ ನನ್ನನ್ನು ತನ್ನೂರಿಗೆ ಕರಕೊಂಡು ಹೋಗಿದ್ದೇ ಒಂದು ಆಕಸ್ಮಿಕ. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಾನು ಕೊನೆಯವನು. ಒಂದು ದಿನ ನನ್ನಪ್ಪನ ತಾಯಿಗೆ ಯಮನ ಕರೆ ಬಂತೆಂದು ಎಲ್ಲರೂ ತೀರ್ಮಾನಿಸಿ, ಒಳಗೆ ಅವನ ಕೋಣ ನುಗ್ಗಲು ಕಷ್ಟವೆಂದೋ ಏನೋ ಅಜ್ಜಿಯನ್ನು ಹೊರಜಗುಲಿಯ ಮೇಲೆ ಮಲಗಿಸಿ ಬೀಳ್ಕೊಡುಗೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. […]

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಆಸೆಯಿಂದ……..”

ಗುರುರಾಜ್ ಸನಿಲ್ ಅವರ ದಾರಾವಾಹಿಯ ಏಳನೇ ಕಂತು
ಆದ್ದರಿಂದ ತನ್ನ ಹೆತ್ತವರಿಂದ ತಾನು ಅನುಭವಿಸಿದ ಅಭದ್ರತೆ, ಏಕಾಂಗಿತನದ ನೋವು ತನ್ನ ಮಗುವಿಗೂ ದಕ್ಕುವುದುಬೇಡ ಎಂದು ಯೋಚಿಸಿದವಳು ಗಂಡನ ದುರ್ವತನೆಗಳನ್ನೆಲ್ಲ ಸಹಿಸಿಕೊಂಡು ಆದಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತ ಬದುಕತೊಡಗಿದಳು.

ಉಂಗಲಿ ಕೈಕು ಕರತೆ ಯಾರೋ ?

ಹೈದರಾಬಾದಿನಿಂದ ಗೊನವಾರ ಕಿಶನ್ ರಾವ್ ಬರೆಯುತ್ತಾರೆ-

ನಮ್ಮ ಹೈದರಾಬಾದ್ ನಲ್ಲಿ ಒಂದು ಬಹಳ ಪರಿಚಿತ ನುಡಿಗಟ್ಟು ಇದೆ.ಎಲ್ಲರಿಗೂ ಗೊತ್ತಿದ್ದದ್ದು ಅದು. ” ಉಂಗಲಿ ಕೈಕು ಕರತೆ ಯಾರೋ ? “

ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..

‘ಗಜಲ್’ ಎನ್ನುವ ಶಬ್ದವು ಕಿವಿಗೆ ಚುಂಬಿಸುತ್ತಲೆ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ, ಅರಳಿ ನಿಂತ ಪುಷ್ಪ ಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಹಸಿದ ಒಡಲನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಹೊಳಪಿನ ಚಿಂಗಾರಿಯಿದು.

Back To Top