ಉಂಗಲಿ ಕೈಕು ಕರತೆ ಯಾರೋ ?

ಹರಟೆ

ಉಂಗಲಿ ಕೈಕು ಕರತೆ ಯಾರೋ ?

ಗೋನವಾರ ಕಿಶನ್ ರಾವ್

A Compilation of R.K. Laxman's 'The Common Man' | Cafe Dissensus Everyday

ನಮ್ಮ ಹೈದರಾಬಾದ್ ನಲ್ಲಿ ಒಂದು ಬಹಳ ಪರಿಚಿತ ನುಡಿಗಟ್ಟು ಇದೆ.ಎಲ್ಲರಿಗೂ ಗೊತ್ತಿದ್ದದ್ದು ಅದು. ” ಉಂಗಲಿ ಕೈಕು ಕರತೆ ಯಾರೋ ? “

ಅಂದರೆಕಡ್ಡಿ‌ಮಾಡೋದು . ನಮ್ಮ ಸ್ನೇಹಿತರಲ್ಲಿ ಒಂದಷ್ಟು ಜನ ಇರುತ್ತಾರೆ. ಅವರ ಹವ್ಯಾಸ ಅದು. .ಕೆಲವರು ಇದರಲ್ಲಿ, ಭಾಳ ಎಕ್ಸಪರ್ಟ್.ಅವರಿಗೆ ನಾವು ಬೊಟ್ಟು ಮಾಸ್ತರ್ ಎಂದು ಕರೆಯತ್ತೇವೆ(ಬೊಟ್ಟು=ಬೆರಳು) .ಇನ್ನೂ ಕೆಲವರಂತೂ ಹೆಚ್ಚಿನ ಕ್ವಾಲಿಫಿಕೇಶನ್ ಪಡೆದಿರತ್ತಾರೆ. ಅವರುಗಳು,  ಡಾ. ಪುಲ್ಲಾರೆಡ್ಡಿಗಳು(ಪುಲ್ಲ=ಕಡ್ಡಿ) !!  ಇವರದೆಲ್ಲ  ಇದೇ ಕೆಲಸ ಯಾರೇ ಎದುರಿಗೆ ಬಂದರೂ ಅವರನ್ನ ‘ಬಕರಾ’ ಮಾಡೊದು. ಇದೊಂದು’ ನಾ ಇಲಾಜ್ ‘ ಜಡ್ಡು.ಹಾಗೆ  ನೋಡಿದರೆ  ಅವರು ಬಹಳ ಒಳ್ಳೆಯವರು ಅವರಿಂದ  ದೊಡ್ಡ ತ್ರಾಸ್ ಏನೂ ಇಲ್ಲ.ಅವರ ಸ್ವಭಾವ ಅದು ‘ಹುಟ್ಟು ಗುಣ ಸುಟ್ಟರ ಹೋಗಂಗಿಲ್ಲಂತ’. 

 ಇರಲಿ.ಮುಖ್ಯ ವಿಷಯ ಏನೆಂದರೆ ಈ ಹರಟೆ   ನಗಿಸುತ್ತ ನಗಿಸುತ್ತ ಅನೇಕ ಆಧ್ಯಾತ್ಮಿಕ ಸಂಗತಿಗಳನ್ನು  ಮಂಡಿಸುತ್ತದೆ ಎಂದು ನಾನು ಕೈಕೊಡ  ಠರಾವು . ಜ್ಞಾನಭಂಡಾರ ಬೆಳೆಯುತ್ತದೆ.

ಕೆಲವರಿಗಂತು ಈ ಹರಟೆ ಎನ್ನುವ ಹಾಸ್ಯ ಅನ್ನ ಸಂಪಾದನಾ ಮಾರ್ಗ.ಅದಕ್ಕೊಂದಿಷ್ಟು ,ವಾಕ್-ಚಾತುರ್ಯ, ಜೀವನದ ಅನುಭವ, ಗಳಿದ್ದರೆ ಸಾಕು.ಜೊತೆಗೆ ನಿರಂತರ ಅಧ್ಯಯನದ ಅಗತ್ಯವಿದೆ  ಅದರಿಂದ ಶಬ್ದ ಭಂಡಾರ ಬೆಳೆಯುತ್ತದೆ. ಮಾತುಗಾರಿಕೆ ಧಬಧಬೆಯಂತೆ ಧುಮ್ಮಿಕ್ಕುತ್ತದೆ.

 ಅನ್ನ ಎಂದಾಗ ಬೇಂದ್ರೆ ಯವರ ಅನ್ನಾವತಾರ ಕವಿತೆ ನೆನಪಾಯಿತು. ಅನ್ನ  ದೇವರ ಸಮಾನ ಅದಕ್ಕೆ ಸಮಾನವಾದುದು ಏನೂ ಇಲ್ಲ. ಆದರೆ  ಮೂರು ಪಾಲು ನೀರು ಒಂದು ಪಾಲು ಭೂಮಿ ಇರುವ ವಿಶ್ವದಲ್ಲಿ ಅನ್ನಕ್ಕಾಗಿ ಇರು ಹಾಹಾಕಾರ!!  ಇದು ಕವಿಯ ಮನಸ್ಸಿಗೆನೋವುಂಟುಮಾಡಿದೆ.

 ಅದರ ಈ ನಾಲ್ಕುಸಾಲುಗಳನ್ನು ನೋಡಿ :

RaghaveshwaraBharati on Twitter: "Da.Ra.Bendre is among our favorite poets  of last century! His philosophical views and language make his poems more  dear to the soul! #bendre… https://t.co/dFvUHsSnK5"

ರತ್ನಾಕರ :

ಕಲ್ಕಿ ದೇವರು ಬಂದ

ಉಳ್ಕಿ ದೇವರ ತಂದ

ಸಲ್ಕಿಗುದ್ದಲಿಯಿಂದ ತೋಡಿದನಲ್ಲಾ

                              ತೋಡಿದನಲ್ಲಾ

ವಸುಂಧರಾ:

ಎಲ್ಲಾ ದೇವರು ಬಂದು

ತಲ್ಲಣಗೊಂಡರು

ಇಲ್ಲಿಯವರ ಕಾಟ ಇಲ್ಯುಳಿಯಿತಲ್ಲಾ

                 ಇಲ್ಯುಳಿಯಿತಲ್ಲಾ

ಪ್ರಾಣದೇವ(ನಿತ್ರಾಣದ ಧ್ವನಿ):

ಅನ್ನ ದೇವರು ಮಾತ್ರ ಇನ್ನೂ ಬರಲಿಲ್ಲೋ

                                ಇನ್ನೂ ಬರಲಿಲ್ಲಾ ‘

[ಭೂಮಿಯ ಹೆಸರು ವಸುಂಧರಾ ಸಮುದ್ರದ ಹೆಸರು ರತ್ನಾಕರ ! ಹೀಗಿದ್ದೂ ಅನ್ನದ ಪ್ರಶ್ನೆ ಮುಗಿದಿಲ್ಲ ಎನ್ನವುದು ಬೇಂದ್ರೆ ವ್ಯಥೆಗೆ ಕಾರಣ]

ಇದು ಅನ್ನದ ಕಥೆ ಮತ್ತು ವ್ಯಥೆ.

ಅನ್ನದೇವರೇ  ಇಲ್ಲವೆಂದಾದಾಗ  ಉಳಿದ ದೇವರುಗಳುಬೇಡ.ಎನ್ನುವ.  ಸಾಲುಗಳು,   ನಮಗೆ ಸರ್ವಜ್ಞನ ತ್ರಿಪದಿಯನ್ನು ನೆನಪಿಗೆ ತರುತ್ತವೆ.

ಅನ್ನವನು ಇಕ್ಕುವುದು ನನ್ನಿಯನು

ನುಡಿಯುವುದು ತನ್ನಂತೆ ಪರರಬಗೆದೊಡೆ

ಕೈಲಾಸ ಬಿನ್ನಾಣವಕ್ಕು –  ಸರ್ವಜ್ಞ.

Sarvajna Jayanti on Feb 20 – Mysuru Today

ಅನ್ನದಾನ ಮಾಡುವುದರಿಂದ ಕೈಲಾಸ ಪ್ರಾಪ್ತಿ ಖಾತರಿ!ಅದಕ್ಕೆಂದೇ, ‘ಅನ್ನಮಯ ಪ್ರಾಣ ಮಯ’  ಎನ್ನುವುದು ವೇದವಾಕ್ಯ. ಹೀಗಿರುವಾಗ ವೇದಾಂತವನ್ನೇ ಕಲಿಸುವ ಹರಟೆ ಬರೀ ಹರಟೆ ಅಥವಾ ಹಾಳು ಹರಟೆ ಆಗಲಾರದು.  ಹರಟೆಯಲ್ಲಿ  ಹೂರಣ ಇದೆ; ಅದೇ ನಿಜವಾದ ತತ್ವಸಿದ್ಧಾಂತ. ಇಲ್ಲಾಂದ್ರ ಗೊಡ್ಡು ಹರಟೆ.

 ಹರಟೆ ಗಳಲ್ಲಿಯ , ಹೇಳಿಕೆ          ಚರ್ಚೆ,ಸಂವಾದಗಳುಗಂಭೀರಚಿಂತನೆಗಳಾಗಿರಬೇಕು.ಇಲ್ಲದಿದ್ದರೆ ಅದು ತನ್ನ ಸ್ವಾರಸ್ಯ ವನ್ನು ಕಳೆದುಕೊಳ್ಳುತ್ತದೆ. ಹಗುರವಾಗಿ ವ್ಯಾಖ್ಯಾನಿಸುವದಾದರೆ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ‘ತೌಡು ಕುಟ್ಟುವುದು’ .ಇರಲಿ ಹರಟೆ ಗಳಲ್ಲಿ ವೈವಿಧ್ಯ ಇದೆ:

•ಮಾತು

•ಭಾಷಣ ಸಾಮರ್ಥ್ಯ

•ಪಟ್ಟಾಂಗ

•ಲಘು ಸಂಭಾಷಣೆ.

ಇವು ಲಘುಸ್ವರೂಪದವುಗಳಾದರೆ

•ಗೊಡ್ಡು ಹರಟೆ

•ಹರಟೆ ಕೊಚ್ಚು

•ಹಾಳು ಹರಟೆ

•ಹರಟೆ ಮಲ್ಲಿ/ಮಲ್ಲ ಗಳು  ಹೆಚ್ಚಾಗಿ ಹೊತ್ತುಗಮನಕ್ಕೆ ಮಹತ್ತ್ವನೀಡುವಂತಹವುಗಳು.ಮನೋರಂಜನೆ,ಗಾಳಿ ಮಾತು,ಮುಂತಾದವುಗಳು ಈ ಹರಟೆಗಳವಿಷಯಗಳಾಗಿರುತ್ತಿದ್ದವು. ಪ್ರತೀ ಊರಿನಲ್ಲಿ ಒಂದೊಂದು ನಿಗದಿತ ಸ್ಥಳಗಳು ಇದಕ್ಕಾಗಿ ಇರುತ್ತಿದ್ದವು.ಇವುಗಳಿಗೆ ‘ಹರಟೆ ಕಟ್ಟೆ’ ಗಳೆಂದೇ ಹೆಸರು.

ನಮ್ಮ ಊರಿನಲ್ಲಿ ಘನಮಟಪ್ಪನ ಗುಡಿ ಮುಂದಿನ ಪ್ರಾಕಾರ,ಹಿಂಡ -ನಾಗಪ್ಪನ ಕಟ್ಟಿ, ಹನುಮಪ್ಪನ ಗುಡಿ ಪೌಳಿ    ಎನ್ನುವ ಹೆಸರುಗಳು ಇದ್ದವು. ಮಹಿಳೆಯರಿಗೆ,ನೀರು ತರುವ ಬಟ್ಟೆ ತೊಳೆಯುವ ಹಳ್ಳದ ಚಿಲುಮೆಗಳ ಪಕ್ಕ. ಅದೇ  ಇವರ ಹರಟೆಗಳಿಗೆ ಮೀಸಲಾದ ಸ್ಥಾನ. ಇಂದಿನ  ಆಧುನಿಕ ಜಗತ್ತಿನಂತೆ ಮನೆಗಳ ಕಂಪೌಂಡ ಗೋಡೆಗಳು ಇರಲಿಲ್ಲ

ಸಂತೋಷಕರ ಬೆಳವಣಿಗೆ ಎಂದರೆ,ಇತ್ತೀಚಿನ ದಿನಗಳಲ್ಲಿ, ಪೊಳ್ಳು ಹರಟೆಗಳಿಗೆ ಮೀಸಲಾದ ಹರಟೆಕಟ್ಟೆಗಳು ಕ್ರಮೇಣ ಕಡಿಮೆಯಾಗುತ್ತ ಹೋಗಿ ಅವುಗಳ ಸ್ಥಾನವನ್ನು,ವೈಚಾರಿಕ,ಸಾಹಿತ್ಯಿಕ ಸಂಗತಿಗಳಿಗೆ ಮಾರ್ಪಾಡಾಗುತ್ತಿವೆ.ಬೆಂಗಳೂರಿನಲ್ಲಿ

ಅನೇಕ ಸಾಹಿತ್ಯಾಸಕ್ತರುಗಳ ಪ್ರಯತ್ನದಿಂದ,ಸಂಕಥನ,ಮಾತುಕತೆ,ಈ ಹೊತ್ತಿಗೆ, ಮತ್ತೆ ಒಂದಾಗೋಣ,ಆಕೃತಿ, ಪದ್ಯ ಮುಂತಾದ ವೇದಿಕೆಗಳು ಮುಂದೆ ಬಂದಿವೆ.ಕೆಲವುಗಳು ಬರೀ ಪದ್ಯ,ಬರೀ ಗದ್ಯ, ಗಳಿಗೇ ಮೀಸಲಾದರೆ,ಕೆಲವು ಯಾವುದೇ ವಿಷಯವಿಲ್ಲದ,ಸಾಹಿತ್ಯ ಸಲ್ಲಾಪ.  ಇವು ವಾರಕ್ಕೊಮ್ಮೆ,ಪಾಕ್ಷಿಕವಾಗಿ,ತಿಂಗಳಿಗೊಮ್ಮೆ, ಸೇರುವುದು ಚಂದದ ಬೆಳವಣಿಗೆಎನಿಸಿತು.ನಮ್ಮವರೇ ಅದ ಮೌನೇಶ ಕನಸುಗಾರ ಪ್ರಾಂಭಿಸಿದ’ ಬೆಂಗ್ಳೂರಾಗ ಬೇಂದ್ರೆ’,ಬೇಂದ್ರೆ ಕಾವ್ಯದ ಕುರಿತಂತೆ ಅನೇಕ ಕಾರ್ಯಕ್ರಮ ಗಳನ್ನು ಕಬ್ಬನಪಾರ್ಕನ ಹುಲ್ಲು ಹಾಸಿಗೆಯ ಮೇಲೆ  ಹಮ್ಮಿಕೊಂಡಿದ್ದು, ಅದು    ಯಶಶ್ವಿಯಾಗಿ ನಿರ್ವಹಿಸಲ್ಲಡುತ್ತಿದ್ದ ವಿಷಯ ಇಲ್ಲಿ ಉಲ್ಲೇಖನೀಯ ಸಂಗತಿ.

ಹೈದರಾಬಾದ ನಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ದಲ್ಲಿ ಪ್ರತಿತಿಂಗಳು ಸಾಹಿತ್ಯ ಸಂಜೆ ,IFLU ನಲ್ಲಿ ಮತ್ತು ತಮ್ಮ ಸ್ವಂತ ಮನೆಯ  ಮುಂದಿನ ಉದ್ಯಾನವನದ  ಆವರಣದಲ್ಲಿ  ಡಾ. ನಿಖಿಲಾ ಎಚ.ಎಸ್.ಆಯೋಜಿಸುತ್ತಿರುವ ಅನೇಕ ಸಾಹಿತ್ಯಿಕ ಸಂವಾದಗಳು ನಾಟಕ ಪ್ರದರ್ಶನಗಳು,.ಅಭಿನಂದನೀಯವಾದವುಗಳು

ಕೋವಿಡ್ ನಿಂದಾಗಿ, ಅಂತರ್ ಜಾಲವನ್ನೇ ವೇದಿಕೆಯಾಗಿಸಿಕೊಂಡ,ಗೂಗಲ್ ಮೀಟ, ಝೂಮ್ ಕೊಂಡಿಗಳ ಮೂಲಕ ನಡೆಯುವ ‘ನೋಡಿಯೋಸಾಹಿತ್ಯ ದಾಸೋಹ’, ನಸುಕು.ಕಾಮ್ ನವರ ಟೌನ್ ಹಾಲ್ ,ವ್ಯಾಕರಣಕ್ಕೇ ಸಂಬಂಧಿಸಿದ,ಶಾಸ್ತ್ರೀಯ, ಮುಂತಾದ ಕಾರ್ಯಕ್ರಮಗಳಲ್ಲಿ  ಸ್ವತಃ ಭಾಗವಹಿಸಿದ್ದು ಇದೆ.

ವಾಟ್ಸಾಪ್ ನಲ್ಲಿಯ  ಕಸ್ತೂರಿ ಕಾವ್ಯಧಾರೆ,ಕ.ಕ. ಸಾಹಿತ್ಯ ಧಾರೆ,ಮುಂತಾದುವು ಸಾಹಿತ್ಯದ ಸಂಭ್ರಮ ರಗಳೆ ಆಗಿವೆ.

ಶಿವರಾಮ ಕಾರಂತರೊಂದಿಗೆ,ಅನಂತಮೂರ್ತಿ ಯವರೊಂದಿಗೆ,ಗಿರೀಶ ಕಾರ್ನಾಡರೊಂದಿಗೆ, ಮತ್ತು  ಕ.ವಿ ತಿರುಮಲೇಶರೊಂದಿಗಿನ ನಮ್ಮ ಹರಟೆಗಳು ಉನ್ನತ ಮಟ್ಟದ್ದವಾಗಿದ್ದವು.ಬೆಂಗಳೂರಿನ ಪ್ರೆಸ್ ಕ್ಲಬ್ ಸಹ ಹಿರಿಯ ಸಾಹಿತಿಗಳ ಹರಟೆಯ ತಾಣವಾಗಿತ್ತು.ರಾಮಚಂದ್ರ ಶರ್ಮ,ಸುಮತೀಂದ್ರ ನಾಡಿಗ ಜಿ.ಎನ್ ಸದಾಶಿವ,ಮುಂತಾದವರೊಂದಿಗೆ ನಿಕಟ ಸಂಪರ್ಕ ಏರ್ಪಟ್ಟಿದ್ದು ಈ ಪ್ರೆಸ್ ಕ್ಲಬ್ ಆವರಣದಲ್ಲಿಯೇ !!

ಅವೆಲ್ಲವುಗಳನ್ನು ಒಂದು ಸರಣಿಯಾಗಿ ಬರೆಯಬೇಕಿದೆ.

ಅತೀ ಹೆಚ್ಚು ನೆನಪಿನಲ್ಲಿ ಉಳಿದಿದ್ದ ಇನ್ನೊಂದು ತಾಣ ಘಟಕೇಸರ ಹತ್ತರ ಇದ್ದ ಕೋಳಿ ಫಾರ್ಮ.ಜೋಷಿ ಸಾಬ್,ಪವನ್ ಮಾನ್ವಿ ಸರ್, ಹಾಗೂ ಆಗಾಗ ಬರುವ ನಮ್ಮ ಸಾಹಿತಿ ಮಿತ್ರ ರೊಂದಿಗಿನ ಸಾಹಿತ್ಯವೂ ಸೇರಿ, ವಿಸ್ತಾರವಾದ, ವಿಷಯಗಳ ಹರಟೆಗಳು ಸಂಪದ್ಭರಿತವಾಗಿರುತ್ತಿದ್ದವು.

ಹರಟೆ ಅಂದರೆ ಯಾರಿಗೆ ಬೇಡ.   ಹರಟೆ ಎಂದರೆ ಹಾಸ್ಯ ಹಾಸ್ಯದಿಂದ ಶುದ್ಧ ಮನರಂಜನೆ. ಆದರೆ, ಈ ಹರಟೆ ಸಭ್ಯತೆಯ ಎಲ್ಲೆ ದಾಟಿದರೆ ಅದು ಅಸಹ್ಯವಾಗುತ್ತದೆ.ಹೀಗಾಗಿ ಬೀಚಿ ಹೇಳುವಂತೆ ‘ಹಾಸ್ಯವಾಗಲೀ ಹರಟೆಯಾಗಲೀ ಟೊಂಕದ ಕೆಳಗೆ ಇಳಿಯಬಾರದು.’ ಬೀಚಿ ಎಂದಾಗ ನೆನಪಾಗುವವನು ತಿಂಮ.ಅವರ ಬಹು ಆಪ್ತ‌ಪಾತ್ರ.ತಿಂಮನ ಮೂಲಕ ನಮಗೆ ಹಾಸ್ಯ ರಸಾಯನ ಉಣಬಡಿಸಿದವರು ಅವರು.ಅವರ ತಿಂಮನ ತಲೆ,ತಿಂಮ ರಸಾಯನ ಬೆಳ್ಳಿ ತಿಂಮ ನೂರೆಂಟು ಹೇಳಿದ ಮತ್ತು ಬುಲೆಟ್ಸು, ಬಾಂಬ್ಸು,ಭಗವದ್ಗೀತೆ     ಹೀಗೆ ಹಲವು ಮುಖಗಳನ್ನು ಹೊತ್ತ ತಿಂಮ ಸಮಾಜದ ಅನೇಕ ಓರೆ ಕೋರೆಗಳನ್ನು ಹಾಸ್ಯದ ದೃಷ್ಡಿಯಲ್ಲಿ ನೋಡುತ್ತಾನೆ, ಬಯಲಿಗೆಳೆಯುತ್ತಾನೆ.

ಒಂದು ಬೀಚಿ ಉವಾಚ :

 *ಪ್ರಶ್ನೆ: ಹಿಂದಿನ ಸಾಹಿತಿಗಳಿಗೂ ಇಂದಿನ ಸಾಹಿತಿಗಳಿಗೂ ವ್ಯತ್ಯಾಸ ಏನು ?

ಉತ್ತರ: ಏನಿದೆ ? ಇಂದಿನ ಸಾಹಿತಿಗಳೂ ಮುಂದೊಂದು ದಿನ ಹಿಂದಿನ ಸಾಹಿತಿಗಳಾಗುತ್ತಾರೆ.ಮುಂದಿನ ಸಾಹಿತಿಗಳು ಇಂದಿನ ಸಾಹಿತಿಗಳಾಗುತ್ತಾರೆ. ಅಷ್ಟೇ !!*


ಕೃತಜ್ಞತೆ :

ವಿನಯ: ದ.ರಾ.ಬೇಂದ್ರೆ.

ಬುಲೆಟ್ಸು, ಬಾಂಬ್ಸು,ಭಗವದ್ಗೀತೆ : ಬೀchi

ಸರ್ವಜ್ಞನ ವಚನಗಳು

ಅಂತರಜಾಲ.

******************************************************************

One thought on “ಉಂಗಲಿ ಕೈಕು ಕರತೆ ಯಾರೋ ?

Leave a Reply

Back To Top