Category: ಇತರೆ

ಇತರೆ

ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ

ನಮ್ಮ ಆಚರಣೆಗಳಲ್ಲಿಯೇ ನಮ್ಮ ಚರಿತ್ರೆಗಳನ್ನು ಕಂಡುಕೊಳ್ಳಬೇಕಿದೆ. ಮಹಿಷಾ ಮಂಡಲದಲ್ಲಿ ಬೌದ್ಧರ ನಾಶದ ಹಿಂದೆ ಒಂದು ಚಾರಿತ್ರಿಕ ವಂಚನೆಯನ್ನು ಗ್ರಹಿಸಬೇಕಿದೆ.

ತಾಯಿಯೇ ಮಕ್ಕಳನ್ನು ಅಳಿಸಬಹುದೇ?

ಆದರೆ ಅವರನ್ನು ಈಗಲೇ ತಯಾರು ಮಾಡೋದ್ರಲ್ಲಿ ತಪ್ಪೇನಿದೆ? ಇವತ್ತು ತಿದ್ದಿಕೊಳ್ಳದಿದ್ದರೆ ಈಗ ನೋಡಿ ನಾನು ಅಳ್ತಿದ್ದೀನಲ್ಲ, ಹಾಗೆ ಮುಂದೆ ಅವರೂ ಹಾಗೇ ಅಳ್ತಾರೆ ಅಷ್ಟೇ. ತಾಯಿಯೇ ಮಕ್ಕಳನ್ನು ಅಳಿಸುವುದೇ?

ವಾರ್ಷಿಕ ವಿಶೇಷಾಂಕ

‘ಸಂಗಾತಿ’ ಕನ್ನಡ ಸಾಹಿತ್ಯದ ವೆಬ್ ಪತ್ರಿಕೆ ಇದೇ ಅ.೨೦ ಕ್ಕೆ ಎರಡು ವರ್ಷ ಮುಗಿಸಿ,ಮೂರನೇ ವಸಂತಕ್ಕೆ ಅಡಿಯಿಡುತ್ತಿದೆ
ಈ ಎರಡು ವರ್ಷಗಳಲ್ಲಿ ಸಂಗಾತಿ ಪತ್ರಿಕೆ ಕವಿತೆ, ಕತೆ, ಜೀವನ ಚರಿತ್ರೆ, ಅಂಕಣ ಬರಹಗಳ ಮೂಲಕ ಕನ್ನಡ ಸಾಹಿತ್ಯದ ವರ್ತಮಾನದ ದನಿಯನ್ನು ಕಟ್ಟಿಕೊಟ್ಟಿದೆ. ನಾಡಿನ ಹಿರಿಯರು, ಕಿರಿಯರು ಸಂಗಾತಿಗೆ ಬರೆದಿದ್ದಾರೆ.
ಎರಡು ವರ್ಷದ ಪಯಣದ ಈ ಸಂದರ್ಭದಲ್ಲಿ ಪತ್ರಿಕೆ ವಿಶೇಷ ಸಂಚಿಕೆ ತರಲು ತಿರ್ಮಾನಿಸಿದೆ

ಪ್ರಿಯ ಬಾಪುವಿಗೊಂದು ಪತ್ರ

ಹೋರಾಟ, ಜೈಲು, ಉಪವಾಸ, ಬರಹ, ತ್ಯಾಗ- ಅಬ್ಬಬ್ಬಾ! ಬರೆಯುತ್ತಾ ಹೋದರೆ ಎಂದೂ ಮುಗಿಯದಿರುವ ಅಗಣಿತ ಅದ್ಭುತ ನೀವು. ನಿಮ್ಮ ಬದುಕಿನ ರೀತಿ, ನೀತಿ, ಸಿದ್ಧಾಂತಗಳು ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಂಡಾಗ ನನ್ನ ಮನಸ್ಸು ಹೇಳುತ್ತದೆ- ‘ಬಾಪು, ನೀವು ಎಂದೆಂದಿಗೂ ಅಮರ.’

ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.

ಪತ್ರಕರ್ತ ಗಾಂಧೀಜಿ

ಪತ್ರಿಕೋದ್ಯಮ ನನಗೆ ಶಿಕ್ಷಣ ಇದ್ದಂತೆ. ನನ್ನೊಳಗೆ ಇಣುಕಿ ನೋಡಿ ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಚುರುಕಾದ ಪದಪ್ರಯೋಗ, ಕಠಿಣ ವಿಶೇಷಣ ಬಳಸಬೇಕೆಂದು ನನ್ನ ಕೋಪ ಹಾಗೂ ಪ್ರತಿಷ್ಠೆ ಆಜ್ಞಾಪಿಸುತ್ತದೆ. ಕಳೆಯನ್ನೆಲ್ಲಾ ಕಿತ್ತುಹಾಕಲು ಬರವಣಿಗೆ ಒಂದು ಸಾಧನ ಎನ್ನುತ್ತಿದ್ದ ಗಾಂಧೀಜಿ ಒಬ್ಬ ಮಹಾಗದ್ಯ ಶಿಲ್ಪಿ

ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…

ಸಾದಾರಣ ರೂಪು, ಸಾದಾರಣ ಉಡುಪಿನ, ಕುಳ್ಳಗಿನ ಆಕಾರದ ದೇಶದ ಪ್ರಧಾನಿಯೆನಿಸಿದ ವ್ಯಕ್ತಿಯೊಬ್ಬರೂ ತುಸು ದುಗುಡದಿಂದ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರ ಮನದಲ್ಲಿ ನೂರಾರು ಚಿಂತೆಗಳಿವೆ. ‘ ಹತ್ಯಾರೋಂ ಕಾ ಜವಾಬ್, ಹತ್ಯಾರೋಂಸೆ ದೇಂಗೆ..

ಗಾಂಧಿ ಜಯಂತಿ ವಿಶೇಷ ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿಇಟ್ಟಿದ್ರಪ್ಪ ಹಾಗೆಹೂಗಳ ಮಾಲೆ ಎಲ್ಲ ತಂದುತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿಘಮ ಘಮ ಕಡ್ಡಿಯ ಕಂಪುಪುಟ್ಟ ಹಾಗೇ ನೋಡ್ತಾ ಇದ್ದಹತ್ತಿತು ಅವನಿಗೆ ಜೊಂಪು ಹಣ್ಣು ಹೂವು ಯಾವುದು ಮುಟ್ಟದೆಗಾಂಧಿ ತಾತ ಬಂದಪುಟ್ಟನ ಹತ್ತಿರ ಏನೋ ಹೇಳುತಬಾರೋ ಜೊತೆಯಲಿ ಎಂದ ತಾತನ ನಡಿಗೆ ಎಷ್ಟು ಜೋರುಪುಟ್ಟುಗೆ ಓಡುವ ಆಟಅನಾತ ಅಜ್ಜಿಯ ಜೋಪಡಿ ಹೊಕ್ಕುಕುಡಿದನು ನೀರಿನ ಲೋಟ ಅಲ್ಲಿಂದಿಲ್ಲಿಗು ಕೇಳುತ ಬಂದಗಿಡಗಳ ಬೆಳೆಸಿಲ್ಲೇನುಹೀಗೇ ಗಿಡಗಳ ಕಡಿಯುತ ಉಳಿದರೆನರಕವ ಕಟ್ಟುವ […]

ಭಾಷಾ ಕಲಿಕೆ

ಲೇಖನ ಭಾಷಾ ಕಲಿಕೆ ಗಣಪತಿ ಹೆಗಡೆ ಗುಡಿಯಾ ಖಾನಾ ಖಾಯಾ?’, ಸಾಯಂಕಾಲ ನಾಲ್ಕೂವರೆಗೆ ಮೊಮ್ಮಗಳನ್ನು ಟ್ರೋಲಿಯಲ್ಲಿ ಕೂಡ್ರಿಸಿ ಕೊಂಡು ಅಪಾರ್ಟ್ ಮೆಂಟಿನ ಸುತ್ತಲೂ ತಿರುಗಾಡಲು ತೆಗೆದುಕೊಂಡು ಹೋದಾಗ ಗೇಟಿನ ಬಾಗಿಲಿನಲ್ಲಿ ಕಾಯುತ್ತಿರುವ ಕಾವಲುಗಾರ ಮೊದಲು ನನ್ನ ಮೊಮ್ಮಗಳಲ್ಲಿ ಕೇಳುವುದು ಈ ವಾಕ್ಯ.  ಪಾಪ ಅವಳೇನು ಹೇಳಿಯಾಳು. ಹತ್ತು ತಿಂಗಳ ಎಳಗೂಸು ಅವಳು. ‘ತಿಂದಾತಾ’? ಅವನು ಕೇಳಿದ ಪ್ರಶ್ನೆ ಅವಳಿಗೆ ಅರ್ಥವಾಗಲಿ ಅಂತ ನಾನು ಅದನ್ನೇ ಕನ್ನಡದಲ್ಲಿ ಕೇಳುತ್ತಿದ್ದೆ. ಆಗ ‘ಹೂಂ’ ಎನ್ನುತ್ತಿದ್ದಳು. ಕಾವಲುಗಾರನಿಗೂ ತಾನು ಕೇಳಿದ ಪ್ರಶ್ನೆಗೆ […]

Back To Top