ಜೈಲು ಶಿಕ್ಷೆ
ಅನುವಾದಿತ ಕವಿತೆ ವಿಯೆಟ್ನಾ೦ ಮೂಲ: ಹೋ ಚಿ ಮಿನ್ ಇ೦ಗ್ಲಿಶ್ ನಿ೦ದ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (೧೯೪೫ ರಿ೦ದ ೧೯೬೯ ರ ವರೆಗೆ ವಿಯೆಟ್ನಾ೦ ನ ಜನಪ್ರಿಯ ಅಧ್ಯಕ್ಷರಾಗಿದ್ದ ಹೊ ಚಿ ಮಿನ್ ವಿಯೆಟ್ನಾ೦ ನ ಸ್ವಾಯತ್ತತೆಗಾಗಿ ಹೋರಾಡಿದ ಧುರೀಣ. ಚೀನಾ ದೊ೦ದಿಗೆ ವಿಯೆಟ್ನಾ೦ ಬಗ್ಗೆ ಮಾತು ಕತೆ ಗಾಗಿ ಬ೦ದ ಹೊ ಚಿ ಮಿನ್ ರನ್ನು ಚೀನಾ ಸರ್ಕಾರ ೨೯ – ೦೮ – ೧೯೪೨ ರ೦ದು ಗೂಢ ಚರ್ಯೆಯ ಆರೋಪದ ಮೆಲೆ ಬ೦ಧಿಸಿ ೧೦-೦೯- […]
ಮನೆಯಲ್ಲೇ ಉಳಿದರು ಜನರು
ಮೂಲ: ಕ್ಯಾಥಲೀನ್ ಓ ಮಿಯರಾ ಕನ್ನಡಕ್ಕೆ: ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ವಿಶ್ವನಾಥ್ ಹೆದ್ದುರ್ಗ ಆಗ…ಮನೆಯಲ್ಲೇ ಉಳಿದರು ಜನರುಓದಿದರುಕೇಳಿದರುಪದ ಕಟ್ಟಿ ಹಾಡಿಒಟ್ಟಾಗಿ ಉಂಡುವಿರಮಿಸಿ,ಹೊಸದೆಂಬಂತೆ ರಮಿಸಿದುಡಿದು ಬೆವರಿಗೋಡೆಗೊಂದು ಕಲಾಕೃತಿ ಮಾಡಿ ಕಣ್ತುಂಬಿಕೊಂಡು.. ಮರೆತ ಹಳೆಯ ಆಟಗಳ ಆಡಿಮನೆಯಲ್ಲೇ ಉಳಿದುಹೊಸತುಗಳ ಅನ್ವೇಷಣೆ ಹೂಡಿಹೊರಗಡಿಯಿಡುವುದರ ತಮ್ಮಷ್ಟಕ್ಕೇ ತಡೆದುತಮ್ಮೊಳಗಿನ ಧ್ವನಿಯ ತದೇಕ ಕೇಳಿ..ಕೆಲವರು ಧ್ಯಾನಿಸಿಕೆಲವರು ಪ್ರಾರ್ಥಿಸಿಕೆಲವರು ನರ್ತಿಸಿತಮ್ಮ ನೆರಳನ್ನೇ ಮುಖಾಮುಖಿಯಾಗಿಸಿ ಮಾತಾಡಿ..ಬೇರೆಯದೇ ಬಗೆಯಲ್ಲಿ ಬದುಕ ಅರ್ಥೈಸಿಆರಾಮಾದರು ಅವರ ಪಾಡಿಗೆ ಅವರು.. ನಿರ್ಲಕ್ಷದಲಿ ಬದುಕಿದವರ ಗೈರಿನಲ್ಲಿ.,ಹೃದಯವಿಲ್ಲದವರ,ಅರ್ಥವಿಲ್ಲದವರಅಪಾಯಕಾರಿಗಳಹಾಜಾರಾತಿಯ ಕುಂದಿನಲ್ಲಿಧರಣಿಯೂ ಕ್ರಮೇಣ ಕಳೆಕಳೆಯಾಗಿಜಗವನ್ನಾವರಿಸಿದ್ದ ಬೇಗೆ ಅಂತೂ ಮುಗಿಯಲೂ., […]
ಅನುವಾದ ಸಂಗಾತಿ
ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದು ಮೂಲ: ನೋಷಿ ಗಿಲ್ಲಾನಿ(ಉರ್ದು) ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಎಷ್ಟು ಕಷ್ಟ ಬದುಕನ್ನು ಸ೦ಭಾಳಿಸುವುದುನಿನ್ನೊಡನೆ ಸ್ನೇಹ ಕುದುರಿಸುವಷ್ಟೇ! ಸ೦ಪೂರ್ಣ ಹೊಸ ಕಥೆಯೆ ಇರಬಹುದುದಯವಿಟ್ಟು ವಿಷಯಕ್ಕೆ ಬಾ. ಈ ನೆರಳುಗಳಲ್ಲಿ ನಾ ಮುಳುಗಬಹುದುದಯವಿಟ್ಟು ಬೆಳಗು ನಿನ್ನ ಕಣ್ಣ ದೀವಿಗೆಯ! ನಿನ್ನ ದುಃಖವನ್ನರಿಯದೇ ಇದ್ದರೂನೀ ದುಃಖಿಯಾದರೆ ಹೇಗನಿಸಬಹುದೆ೦ಬ ಕುತೂಹಲ ನನಗೆ. ಹೃದಯ ಹಿ೦ಡಿ ಕೊಡ ಬೇಕು ರಕ್ತ!ನೋಡು, ಬರೆಯ ಬೇಡ ಪದ್ಯ! ಈ ಎಲ್ಲ ಅರ್ಥಗಳನ್ನುನಿರಾಕರಿಸುವುದುಎಷ್ಟು ಕಷ್ಟ ಗೊತ್ತ, ಈ ಆತ್ಮಕ್ಕೆ! *********** ಮೇಗರವಳ್ಳಿ ರಮೇಶ್
ಅನುವಾದ ಸಂಗಾತಿ
.ಕಠೋರ ಕಣ್ಣುಗಳು ಮೂಲ:ವಿಲಿಯಂ ಬ್ಲೇಕ್ ವಿ.ಗಣೇಶ್ ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ ಬೆದರುತ್ತ ನಾ ತೆವಳಿದೆ ಅಡಗು ತಾಣಕೆ ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ. ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು? ನಿನ್ನ ವಿವಿಧಾಂಗಗಳ ಸೃಷ್ಟಿಸಿದವರಾರು? ತಾರೆಗಳ ನಾಚಿಸುವ ತಾರಾಮಂಡಳದ ಕಳೆಯ ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ? ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು ಆ ಧೈರ್ಯವೆಂತಹದು? ಅ […]
ಅನುವಾದ ಸಂಗಾತಿ
ಸೇಡಿನ ಫಲ ಮೂಲ: ವಿಲಿಯಂ ಬ್ಲೇಕ್(ಇಂಗ್ಲೀಷ್) ಕನ್ನಡಕ್ಕೆ: ವಿ.ಗಣೇಶ್ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದು ಮಾಯವಾಗಿಯೆ ಹೋಯ್ತು ಕೋಪವಂದು. ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ ಹಗೆತನದ ಬೀಜವದು ಮೊಳಕೆಯೊಡೆಯುತ್ತ ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ ನೀಡುತ್ತ […]
ಅನುವಾದ ಸಂಗಾತಿ
ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ? ಮೂಲ: ನೋಷಿ ಗಿಲ್ಲಾನಿ(ಉರ್ದು) ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ? ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ? ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ! ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ ನಗರದ ಹಲವು ಮುಖಗಳಲ್ಲಿ […]
ಅನುವಾದ ಸಂಗಾತಿ
ಹೂವಿನ ಹೃದಯ ಚೂರಾಗಿದೆ ಮೂಲ: ನೋಷಿ ಗಿಲ್ಲಾನಿ(ಪಾಕಿಸ್ತಾನಿಕವಿಯಿತ್ರಿ) ಕನ್ನಡೆ: ಮೇಗರವಳ್ಳಿರಮೇಶ್ ಮೇಗರವಳ್ಳಿ ರಮೇಶ್ ಹೂವಿನ ಹೃದಯ ಚೂರಾಗಿದೆಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ. ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು ಹೂವನ್ನು?ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ನಾವು ಈ ಸ೦ಜೆಯನ್ನು! ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲಆದರೂ ನೀ ಇಚ್ಛಿಸಿದರೆ ನಾ ಬರಬಲ್ಲೆ. ಈ ನಗರದ ಎಲ್ಲ ಬೀದಿಗಳೂ ಮಲಗಿವೆಎಚ್ಚರವಾಗಿರುವುದೀಗ ನನ್ನ ಪಾಳಿ. ಈ ಸ೦ಜೆಯ ಅನಿಶ್ಚತೆಯಲ್ಲಿಎಲ್ಲವೂ ಕ೦ಪಿಸುತ್ತಿವೆ. ನಮ್ಮ ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವುನನ್ನ ಹೃದಯ ಅಗಲಿಕೆಯ ಹೆದರಿಕೆಯಲ್ಲಿ […]
ಅನುವಾದ ಸಂಗಾತಿ
ಸ್ವಾಮಿ ಭಕ್ತಿ ಮೂಲ:ವಿಲಿಯಂ ವರ್ಡ್ ವರ್ತ್ ಕನ್ನಡಕ್ಕೆ: ವಿ.ಗಣೇಶ್ ಬೊಗಳುವ ಸಪ್ಪಳವು ಕುರುಬನಿಗೆ ಕೇಳಿಸಿತು ನರಿಯದೋ ನಾಯಿಯದೋ ಕೂಗಿರಬೇಕೆಂದು ಅರೆ ಕ್ಷಣ ನಿಂತು ಹುಡುಕಾಡಿದನು ದಶದಿಕ್ಕುಗಳಲಿ. ಹರಿದು ಹಾಸಿದ್ದ ಕಲ್ಲುಬಂಡೆಗಳ sಸುತ್ತಲೂ ಹುಡುಕಾಡಿದಾಗ ತುದಿಯ ಗಿಡಗಂಟೆಗಳ ಮಡಿಲಲ್ಲಿ ಅಲುಗಾಡುತ್ತಿರುವ ಹಸಿರು ಪೆÇದೆಯೊಂದು ಕಾಣಿಸಿತು. ಅದರ ಅಡಿಯಲಿ ಕಣ್ಣೀರಿಡುತಿರುವ ಶುನಕವೊಂದು ಪೊದೆಯ ಕಡೆಗೇ ವೀಕ್ಷಿಸುತ ಅಳುವುದ ಕಾಣಿಸಿತು. ಅತಿ ಸೂಕ್ಷ್ಮಮತಿಯಾದ ಆ ಶುನಕವ ನೋಡಿದರೆ ಕಾಡಿನಲಿ ಹುಟ್ಟಿ ಬೆಳೆದ ಶುನಕವಲ್ಲವೆನಿಸಿತು. ಅದರ ಅಳುವಿನಲೇನೋ ಘೋರ ದುಃಖವಿಹುದೆಂದು ಭಾವಿಸಿದ […]
ಅನುವಾದ ಸಂಗಾತಿ
ಗ್ರಂಥಾಲಯದಲ್ಲಿ ಮೂಲ ಮಲಯಾಲಂ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ಗ್ರಂಥಾಲಯದಲ್ಲಿ ಎಲ್ಲವೂಬಂಧನಕ್ಕೊಳಗಾಗಿವೆ.ಕಪಾಟಿನ ತುಂಬಪುಸ್ತಕಗಳು ಎಷ್ಟೊಂದು ಬದುಕುಗಳುಎಷ್ಟೊಂದು ಕಾಲ,ಎಷ್ಟೊಂದು ಜ್ಞಾನಗಳುಪೆಟ್ಟಿಗೆಯೊಳಗೆ ಅದರಲ್ಲಿ ಕೆಲವುಮಮ್ಮಿಗಳ ಹಾಗೆನಿತ್ಯ ವಿಶ್ರಾಂತಿ ಪಡೆಯುತ್ತಿವೆಗಾಜಿನ ಮನೆಯೊಳಗೆ ಒಂದಿಷ್ಟು ಉಸಿರುಮತ್ತೊಂದಿಷ್ಟು ಬೆಳಕುಹಂಬಲಿಸಿತುಅವುಗಳನ್ನು ತಲುಪಲು ಒಂದು ಪ್ರಪಂಚವೇ ಅಲ್ಲವೇಎಲ್ಲ ಕೃತಿಗಳೂನಾನಂದುಕೊಂಡೆಮನದೊಳಗೆ ತೆರೆದಿಡಬೇಕು ನಿತ್ಯವೂಗ್ರಂಥಾಲಯಗಳ ಬಾಗಿಲುಗಳನ್ನುಜೊತೆಗೆ ಕಪಾಟುಗಳಬಾಗಿಲುಗಳನ್ನೂ ಹಾಳೆಗಳನ್ನೊಮ್ಮೆ ತಿರುವಿ ಹಾಕಿಗಂಧವನ್ನು ಆಘ್ರಾಣಿಸಬೇಕುಪುನಃ ಸ್ಥಾನ ಬದಲಿಸಿಇಡಬೇಕಿದೆ ಅವುಗಳನ್ನೂ ತಲುಪಿ ಬಿಡಲಿವರ್ತಮಾನದ ವಿಚಾರಗಳುಹೊಸ ಬೆಳಕು,ಹೊಸ ಗಾಳಿ ***********
ದ್ವೇಷ
ಇಂಗ್ಲೀಷ್ ಮೂಲ: ಸ್ಟೀಪನ್ಸ್ ಕನ್ನಡಕ್ಕೆ: ವಿ.ಗಣೇಶ್ ವಿ.ಗಣೇಶ್ ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ […]