ಮೂಲ: ಕ್ಯಾಥಲೀನ್ ಓ ಮಿಯರಾ
ಕನ್ನಡಕ್ಕೆ: ನಂದಿನಿ ವಿಶ್ವನಾಥ್ ಹೆದ್ದುರ್ಗ
ನಂದಿನಿ ವಿಶ್ವನಾಥ್ ಹೆದ್ದುರ್ಗ
ಆಗ…
ಮನೆಯಲ್ಲೇ ಉಳಿದರು ಜನರು
ಓದಿದರು
ಕೇಳಿದರು
ಪದ ಕಟ್ಟಿ ಹಾಡಿ
ಒಟ್ಟಾಗಿ ಉಂಡು
ವಿರಮಿಸಿ,ಹೊಸದೆಂಬಂತೆ ರಮಿಸಿ
ದುಡಿದು ಬೆವರಿ
ಗೋಡೆಗೊಂದು ಕಲಾಕೃತಿ ಮಾಡಿ ಕಣ್ತುಂಬಿಕೊಂಡು.. ಮರೆತ ಹಳೆಯ ಆಟಗಳ ಆಡಿ
ಮನೆಯಲ್ಲೇ ಉಳಿದು
ಹೊಸತುಗಳ ಅನ್ವೇಷಣೆ ಹೂಡಿ
ಹೊರಗಡಿಯಿಡುವುದರ ತಮ್ಮಷ್ಟಕ್ಕೇ ತಡೆದು
ತಮ್ಮೊಳಗಿನ ಧ್ವನಿಯ ತದೇಕ ಕೇಳಿ..
ಕೆಲವರು ಧ್ಯಾನಿಸಿ
ಕೆಲವರು ಪ್ರಾರ್ಥಿಸಿ
ಕೆಲವರು ನರ್ತಿಸಿ
ತಮ್ಮ ನೆರಳನ್ನೇ ಮುಖಾಮುಖಿಯಾಗಿಸಿ ಮಾತಾಡಿ..
ಬೇರೆಯದೇ ಬಗೆಯಲ್ಲಿ ಬದುಕ ಅರ್ಥೈಸಿ
ಆರಾಮಾದರು ಅವರ ಪಾಡಿಗೆ ಅವರು..
ನಿರ್ಲಕ್ಷದಲಿ ಬದುಕಿದವರ ಗೈರಿನಲ್ಲಿ.,
ಹೃದಯವಿಲ್ಲದವರ,
ಅರ್ಥವಿಲ್ಲದವರ
ಅಪಾಯಕಾರಿಗಳ
ಹಾಜಾರಾತಿಯ ಕುಂದಿನಲ್ಲಿ
ಧರಣಿಯೂ ಕ್ರಮೇಣ ಕಳೆಕಳೆಯಾಗಿ
ಜಗವನ್ನಾವರಿಸಿದ್ದ ಬೇಗೆ ಅಂತೂ ಮುಗಿಯಲೂ.,
ಜಗದ ಅದದೇ ಜನರು ಹೊಸದಾಗಿ ಪರಿಚಯಿಸಿಕೊಂಡರು ಒಬ್ಬರಿಗೊಬ್ಬರು..
ತೀರಿಕೊಂಡವರಿಗಾಗಿ ಕಣ್ಣೀರು ಮಿಡಿದರು..
ಕೈಗೊಂಡರು ಬದುಕಿಗೆ ಹೊಸದಾದ ಆಯ್ಕೆ
ಹೊಸ ದೃಷ್ಟಿಕೋನ
ಹೊಸದಾದ ಬದುಕುವ ವಿಧಾನ..
ನೋಡನೋಡುತ್ತಲೇ
ಹೊಸ ಜನ್ಮ ಪಡೆದು ಸಂಭ್ರಮಿಸಿದರು ಮಂದಿ…!
ಹೊಸ ಹುಟ್ಟು ಪಡೆದಳು ನೆಲದಾಯಿ…!!
*************************
ಸರಳ ಸತ್ಯ…ಸರಳ ಬದುಕು…ಸುಲಲಿತ ಕವಿತೆ
ಹೊಸ ಹುಟ್ಟು ಪಡೆಯುವ ಪ್ರಕೃತಿ
Very Inspiring in this Pandemic hour..