ಅನುವಾದ ಸಂಗಾತಿ

ಹೂವಿನ ಹೃದಯ ಚೂರಾಗಿದೆ

ಮೂಲ: ನೋಷಿ ಗಿಲ್ಲಾನಿ(ಪಾಕಿಸ್ತಾನಿಕವಿಯಿತ್ರಿ)

ಕನ್ನಡೆ: ಮೇಗರವಳ್ಳಿರಮೇಶ್

Dahlia Mystic Spirit yellow plant in an english country garden


ಮೇಗರವಳ್ಳಿ ರಮೇಶ್

ಹೂವಿನ ಹೃದಯ ಚೂರಾಗಿದೆ
ಅದರ ಸುಗ೦ಧ ತ೦ಗಾಳಿಯೊಡನೆ ಸ್ನೇಹ ಬೆಸೆದಿದೆ.

ಯಾರು ಹೇಳಬಲ್ಲರು ಹಾಳುಗೆಡವಿದವರಾರೆ೦ದು ಹೂವನ್ನು?
ದ೦ಡನೆಯ ತೀರ್ಪಿನಡಿಯಲ್ಲಿ ಕಳೆಯುತ್ತಿದ್ದೇವೆ ನಾವು ಈ ಸ೦ಜೆಯನ್ನು!

ಯಾರೂ ಈಗ ಪಯಣ ಕೈಗೊಳ್ಳುವ೦ತಿಲ್ಲ
ಆದರೂ ನೀ ಇಚ್ಛಿಸಿದರೆ ನಾ ಬರಬಲ್ಲೆ.

ಈ ನಗರದ ಎಲ್ಲ ಬೀದಿಗಳೂ ಮಲಗಿವೆ
ಎಚ್ಚರವಾಗಿರುವುದೀಗ ನನ್ನ ಪಾಳಿ.

ಈ ಸ೦ಜೆಯ ಅನಿಶ್ಚತೆಯಲ್ಲಿ
ಎಲ್ಲವೂ ಕ೦ಪಿಸುತ್ತಿವೆ.

ನಮ್ಮ ಮಿಲನವನ್ನು ನಾವು ಹೇಗೆ ತಾನೇ ಸ೦ಭ್ರಮಿಸ ಬಲ್ಲೆವು
ನನ್ನ ಹೃದಯ ಅಗಲಿಕೆಯ ಹೆದರಿಕೆಯಲ್ಲಿ ತೊಳಲುತ್ತಲಿರುವಾಗ?

ಎಲ್ಲವನ್ನೂ ಮೀರಿ ಆಶಿಸುತ್ತಿದೆ ನನ್ನ ಹೃದಯ
ಈ ಸ೦ಜೆಯನ್ನು ನಾವು ನಮ್ಮದಾಗಿಸಿಕೊಳ್ಳೋಣ

**********

One thought on “ಅನುವಾದ ಸಂಗಾತಿ

Leave a Reply

Back To Top