ಕಥಾಯಾನ
ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ ಮರೆಯಲಾಗದ ಮೃದುಲ ಮುಖವದು. ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ ಸುಮಧುರ ಸಮಾರಾಧನೆ. ಅವಳನ್ನು ಅದೆಷ್ಟು ಬಾರಿ ಭೆಟ್ಟಿ ಮಾಡಿ, ಅವಳೊಂದಿಗೆ ಮಾತಾಡಿ, ಜೀವಹಗುರ ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು ಮುಗಿಯುವ ಮುಜೇತಿ… ಅವಳ ನನ್ನ ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ ಕುತೂಹಲ ನನಗೆ. ಆದರೆ ಅವಳು ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. […]
ಕಥಾಯಾನ
ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ […]
ಕಥಾಯಾನ
ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ
ಮಹಿಳಾದಿನದ ವಿಶೇಷ
ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ. ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು […]
ಕಥಾಯಾನ
ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು. ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ ಬೇಲ್ ಪೂರಿ, ಚುರುಮುರಿ ಮಸಾಲೆ […]
ಕಥಾಯಾನ
ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ […]
ಕಥಾಯಾನ
ಕನಸು ತಾರಾ ಸತ್ಯನಾರಾಯಣ್ ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ....ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ […]
ಕಥಾಯಾನ
ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ […]
ವ್ಯಾಲಂಟೈನ್ಸ್ ಡೇ ವಿಶೇಷ
ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ […]
ಮಕ್ಕಳ ಕಥೆ
ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ […]