ಕನಸು
ತಾರಾ ಸತ್ಯನಾರಾಯಣ್
ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ....ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ ಹೀಗೂ ಕಾಫಿ ಬೆರಸಿ,ಎಲ್ಲರಿಗು ಕೊಟ್ಟು, ತಾವು ಕೈಯಲ್ಲಿ ಕಾಫಿ ಹಿಡಿದು ಕೂತರು. ಆದರೆ ಮನಸು ಮತ್ತೆ ಕನಸಿನತ್ತ ವಾಲಿತ್ತು.
ಯಾಕೆ ಹಾಗೆ ಕನಸು ಬಿತ್ತು?ಈಗ್ಗೆ ಸುಮಾರು ತಿಂಗಳ ಹಿಂದೆ ಕನಸಿನಲಿ ಹೊಗೆ ನೋಡಿದ್ದೆ.ಬೆಳಗ್ಗೆ ಎದ್ದ ಕೂಡ್ಲೆ ನನ್ನ ಚಿಕ್ಕಮ್ಮ ಹೋದರೆಂಬ ಸುದ್ದಿ ಬಂತು.ಸಾಮಾನ್ಯವಾಗಿ ನನಗೆ ಬೆಳಗಿನ ಜಾವ ಸ್ಪಷ್ಟವಾಗಿ ಕಂಡ ಕನಸು ಕೆಲವೂಮ್ಮೆನಿಜವಾಗುತ್ತೆ. ಇವತ್ತು ನಮ್ಮ ಮನೆಯಲ್ಲಿ ಏನೋ ಅನಾಹುತವಾಗುತ್ತೆ.ಸುಶೀಲಮ್ಮನಿಗೆ ಇನ್ನು ತಡೆಯದಾಯಿತು.ಕೈಯಲ್ಲಿದ್ದ ಕಾಫಿ ತಣ್ಣಗಾಗಿತ್ತು;ಅದನ್ನು ತಂದು ಹಾಗೇ ಇಟ್ಟ ಸುಶೀಲಮ್ಮ, ಸೀದಾ ಮಗನ ರೂಂಗೆ ಹೋದರು.ಮಗ ಸ್ನಾನಮಾಡಿ ಆಫೀಸಿಗೆ ಹೋಗಲು ರೆಡಿಯಾಗುತ್ತಿದ್ದ ಮಗನನ್ನು ನೋಡಿ ಸುಶೀಲಮ್ಮ,”ಮಧುಕರ, ಇವತ್ತು ನೀನು ಅಕ್ಷರ ಇಬ್ರು ಆಫೀಸಿಗೆ ಹೋಗ್ಬೇಡಿ”ಅಂತ ಹೇಳುತ್ತಿರಬೇಕಾದರೆ,ಕೆಳಗಡೆಯಿಂದ ಶ್ರೀಪಾದರಾಯರು “ಸುಶೀ, ನನ್ನ ವಾಕಿಂಗ್ ಸ್ಟಿಕ್ ಎಲ್ಲಿ? ಕಾಣುಸ್ತಿಲ್ಲ!”ಅಂದಾಗ, ಸುಶೀಲಮ್ಮ,”ಮಧುಕರ ನೀನು, ಅಕ್ಷರ ಕೆಳಗೆ ಬನ್ನಿ”ಅಂದು ತರಾತುರಿಯಲ್ಲಿ ಇಳಿದು ಹೋದ್ರು.ಬಾತ್ ರೂಂನಲ್ಲಿದ್ದ ಅಕ್ಷರ ಆಚೆಬಂದು, “ಏನಂತೆ !ನಿಮ್ಮ ಅಮ್ಮಂದು?””ಏನೂಂತ ಗೊತ್ತಿಲ್ಲ. ಏನೋ ಇಬ್ರು ಆಫೀಸಿಗೆ ಹೋಗ್ಬೇಡಿ ಅಂತ ಹೇಳ್ತಿದ್ರು. ಅಷ್ಟೊತ್ತಿಗೆ ಅಪ್ಪಾ ಕರದ್ರು.ಅಮ್ಮ ಹೋದ್ರು.”ನೋಡಿ ನಿಂಮ್ಮಮ್ಮ ಏನ್ ಬೇಕಾದ್ರೂ ಹೇಳ್ಲಿ, ಇವತ್ತು ನಾನು ಆಫೀಸಿಗೆ ಹೋಗ್ಲೆ ಬೇಕು.ಇವತ್ತು ನನ್ನ ಪ್ರಾಜೆಕ್ಟ್ಂದು ‘ಡೆಮೋ’ಇದೆ. ಫಾರಿನ್ನಿನ್ನೀಂದ ನಮ್ಮ ಆಫೀಸಿನವರು ಬರುತ್ತಿದ್ದಾರೆ. “ಸರಿಯಮ್ಮ,ನಡಿ ಈಗ ಕೆಳಗೆ ಹೋಗೋಣ” “ಒಂದ್ನಿಮಿಷ, ತಲೆಬಾಚಿಕೊಂಡು ಬರುತೀನಿ ಆಫೀಸಿಗೆ ಹೊರಡಕ್ಕೆ ಸರಿಹೋಗುತ್ತೆ.”ಕೆಳಗಡೆ ಬಂದ ಸುಶೀಲಮ್ಮ ರಾಯರಿಗೆ,” ನೋಡಿ ಇವತ್ತು ವಾಕಿಂಗೇ ಅಲ್ಲಾ….ನೀವು ಮನೆ ಬಿಟ್ಟು ಆಚೆ ಎಲ್ಲು ಹೋಗಬಾರದು.!”” ಏನು !ನಂಗೆ ಆರ್ಡರ್ ಮಾಡ್ತಾ ಇದಿಯಾ? ಏನಿವತ್ತು ವಿಶೇಷ? ಕೋಣಂದು ಮುಂಜಿನಾ?”ಅಣಕಿಸಿಕೊಂಡು ಮಾತಾಡಿದರು ರಾಯರು . “ನೋಡಿ, ನೀವುನಂಗೆ ಏನು ಬೇಕಾದರು ಅನ್ನಿ .ಆದ್ರೆ ನಂಗೆ, ಎಲ್ರು ನನ್ನ ಕಣ್ಣಮುಂದೆ ಚನ್ನಾಗಿರಬೇಕೂಂತ ಹೇಳ್ತಿರೋದು.ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ” ಅಂತ ಹೇಳಿ ಇಷ್ಟುಹೊತ್ತು ಅಳುವನ್ನು ನುಂಗಿಕೊಂಡಿದ್ದ ಸುಶೀಲಮ್ಮನಿಗೆ; ಇನ್ನುತಡೆಯಕ್ಕೆ ಆಗದೆ ಬಿಕ್ಕೀ ಬಿಕ್ಕೀ ಅತ್ತರು.ಅದನ್ನು ನೋಡಿ ಶ್ರೀಪಾದರಾಯರು,ತಣ್ಣಗಾಗಿ ತಕ್ಷಣ ಹೆಂಡತಿ ಹತ್ತಿರ ಧಾವಿಸಿ ಬಂದರು.ಅಷ್ಟೊತ್ತಿಗೆ ಮಧುಕರ ಅವನಹೆಂಡತಿ ಅಕ್ಷರ ಬಂದ್ರು. ಅಮ್ಮ ಅಳುತ್ತಿದ್ದನ್ನ ನೋಡಿ,”ಅಮ್ಮ,ಯಾಕಮ್ಮ ಅಳ್ತಿದಿಯಾ? ಏನಾಯ್ತು?”ರಾಯರಿಗೂ ಏನೂ ತೋಚದೆ ಗಾಬರಿಯಾಗಿದ್ದರು. ಪಕ್ಕದ ರೂಂನಲ್ಲಿದ್ದ ಶ್ರೀಕರ, ಇವರುಗಳ ಮಾತು ಕೇಳಿ, ಅವನ ಹೆಂಡತಿ ವಾಣಿ, ತನ್ನ ಮಗುವನ್ನು ಎತ್ತಿಕೊಂಡು ಅಲ್ಲಿಗೆ ಬಂದರು.ರಾಯರು,”ಸುಶೀ,ಯಾಕೆ ಅಳ್ತಿದೀಯಾ? ಏನಾಯ್ತು ಹೇಳು”ಅಂದಾಗ, ಸುಶೀಲಮ್ಮ ಕಣ್ಣುವರಸಿಕೊಂಡು,”ಇವತ್ತು ಬೆಳಗಿನ ಜಾವ ,ನನ್ನ ಕನಸಿನಲಿ ನಮ್ಮ ಮನೆ ಮುಂದೆ ಬೆಂಕಿ ಹಾಕಿದೆ.!ಬೆರಣಿಯಿಂದ ಹೊಗೆ ಬರುತ್ತಿದೆ. ಇದು ಅಶುಭ ಕನಸು. ಅಷ್ಪೇಅಲ್ಲಾ.…!ಬೆಳಗ್ಗೆ ಎದ್ದಾಗಲಿಂದ ಏನೋ ಒಂಥರಾ ತಳಮಳ ಸಂಕಟ. ಏನೋ ಆಗಬಾರದ್ದು ಆಗುತ್ತೆ; ಅಂತ ಅನ್ನಿಸಿದೆ. ಬೆಳಗಿನ ಜಾವ ಬಿದ್ದ ಕನಸು ದಿನದಲ್ಲೆ ಫಲಕೊಡುತ್ತೆ.ಅದಕ್ಕೆ ಹೇಳ್ತಾ ಇದೀನಿ,ಇವತ್ತು ಯಾರೂ ಮನೆಬಿಟ್ಟು ಆಚೆ ಹೋಗ್ಬೇಡಿ.”ಮಧುಕರ ಅಮ್ಮನ ಕನಸು ಕೇಳಿ “ಇಷ್ಟೆನಾ? ನೀನು ನಮ್ಮನ್ನು ಇಲ್ಲಿಗೆ ಕರೆದಿದ್ದು ! ಇಲ್ಲಿ ನೀನು ಅಳ್ತಾಇದ್ದದ್ದು ನೋಡಿ ನನಗೆ ಗಾಭರಿ ಆಗಿತ್ತು.ನೋಡಮ್ಮ, ಹಾಗೆ ಕೆಟ್ಟದಾಗುತ್ತೆ ಅನ್ನೋದಾದ್ರೆ ನಾವು ಮನೆನಲ್ಲಿದ್ರು ಆಗುತ್ತೆ. ಸುಮ್ನೆ ಇರು ಏನೂಆಗಲ್ಲ.”ಶ್ರೀಕರ ಇದ್ದವನು, “ಅಮ್ಮಾ. ಕನಸಿಗೋಸ್ಕರ ಎಲ್ರನ್ನು ಆಚೆ ಹೋಗ್ಬೇಡಿ ಅಂತ ಹೇಳೋದು ತಪ್ಪಮ್ಮ. ನಿನ್ನ ಕನಸು ನಿಜವಾಗಿದೆ ಒಪ್ಕೋತೀನಿ. ಆದ್ರೆ ಅದು ಕಾಕತಾಳೀಯ ಅಷ್ಟೆ. ನಿನ್ನ ಚಿಕ್ಕಮ್ಮನಿಗೆ ಕ್ಯಾನ್ಸರ್ ಆಗಿತ್ತು ಅವರು ಉಳಿಯಲ್ಲ ಅಂತ ಎಲ್ರಿಗು ಗೊತ್ತಿತ್ತು.ನಿನ್ನ ಕನಸನಲಿ ಹೊಗೆ ನೋಡ್ದೆ.ಬೆಳಗ್ಗೆ ಎದ್ದು,ಏನೋಸುದ್ದಿ ಬರುತ್ತೆ ಅಂದೆ.ಚಿಕ್ಕಮ್ಮ ಸತ್ತಸುದ್ದಿ ಬಂತು.ಆಮೇಲೆ ನಿನ್ನ ತಂಗಿ ಮಗಳು ಲತಾಗೆ ಕೆಲಸ ಸಿಕ್ಕಹಾಗೆ ಕನಸುಬಿತ್ತು ಅಂದೆ .ಮೂರು ನಾಲ್ಕು ದಿನಗಳಾದ್ಮೇಲೆ ಅವಳಿಗೆ ಕೆಲಸ ಸಿಕ್ತು. ಇದು ಅಷ್ಟೆ, ಅವಳಿಗೆ ಕೆಲಸ ಸಿಕ್ಕಿದರೆ ಸಾಕೂಂತ ನೀನೂ ಚಿಕ್ಕಮ್ಮ ಯಾವ ಯಾವ ರೀತಿಯಲ್ಲಿ ದೇವರನ್ನ ಕೇಳಿಕೊಂಡಿಲ್ಲಾ ಹೇಳಿ.ಇದಕ್ಕೆ ನಮ್ಮ ಸುಪ್ತ ಮನಸ್ಸಿನ ಹಾಗೂ ಜಾಗೃತ ಮನಸ್ಸಿನ ತಾಕಲಾಟಗಳು, ಆಸೆ ನಿರಾಸೆಗಳು,ಅನುಭವಗಳು ಕನಸುಗಳಲ್ಲಿ ನೇರವಾಗಿ ಇಲ್ಲಾ ಸಂಕೇತವಾಗಿ ಪ್ರತಿಬಿಂಬಿಸುತ್ತೆ.ಈ ಕನಸು ನಮ್ಮ ಮಾನಸಿಕ ಸಮತೋಲನ ಕಾಪಾಡಲು ನೆರ ವಾಗುತ್ತೆ. ಆದ್ರೆ ಕನಸುಗಳನ್ನ ಸುಖ ದುಃಖ ಎಂದು ಗುರುತಿಸೋದು ಅದಕ್ಕೆ ಪ್ರಾಮುಖ್ಯತೆ ಕೊಡೋದು ತಪ್ಪು ಅಮ್ಮ.”ನೋಡು ಶ್ರೀ, ನೀನು ಡಾಕ್ಟರ್ ಆಗಿ ನೀನು ಹೇಳಿದ್ದು ಸರಿ ಇರಬಹುದು .ಆದ್ರೆ ನಿವೆಲ್ಲ ನನ್ನ ಕನಸಿಗೆ ಪ್ರಾಮುಖ್ಯತೆ ಕೊಡದಿದ್ರೂ ಪರವಾಗಿಲ್ಲ.ಆದ್ರೆ ನನ್ನ ಮನಸ್ಸಿಗೆ ಪ್ರಾಮುಖ್ಯತೆ ಕೊಡಿ.ನೋಡುಶ್ರೀ, ನೀನಿವತ್ತು ಕ್ಲನಿಕ್ ಗೆ ಹೋಗೋಹಾಗಿಲ್ಲ.” “ಸುಶೀ,ನನ್ನ ಮಾತು ಕೇಳು “ಏನೋ ಹೇಳಲು ಹೊರಟ ರಾಯರ ಮಾತನ್ನುಕೇಳದೆ,ಸುಶೀಲಮ್ಮ “ನೋಡಿ ನೀವು ಯಾರಾದ್ರು ಮನೆಯಿಂದ ಆಚೆ ಹೋದ್ರೆ ನನ್ಮೇಲಾಣೆ.”ಎಂದುಹೇಳಿ ಕಣ್ಣಲ್ಲಿ ನೀರು ತುಂಬಿಕೊಂಡರು ಸುಶೀಲಮ್ಮ. ಅಮ್ಮನ ಕಣ್ಣೀರ ನೋಡಿ ಎಲ್ರು ಒಪ್ಪಿಕೊಂಡರು. ಅಕ್ಷರ ಮಾತ್ರ ಗಂಡನಿಗೆ ಗುಟ್ಟಾಗಿ, “ನನ್ನ ಪಾಡಿಗೆ ನಾನು ಆಫೀಸಿಗೆ ಹೋಕ್ತೀನಿ. ನೀವು ಅತ್ತೆಗೆ ಏನೂ ಹೇಳೋಕೆಹೋಗ್ಬೇಡಿ, ನಂದು ‘ಡೆಮೋ’ಮುಗಿಸಿಕೊಂಡು ಬೇಗ ಬರ್ತೀನಿ”ಅಂದಾಗ, ಮಧುಕರ ಮನಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಂತು ಎಲ್ರು ಮನೇನಲ್ಲಿ ಇರುವುದಾಗಿ ಹೇಳಿದಮೇಲೆ ಸುಶೀಲಮ್ಮ ತಿಂಡಿಮಾಡಲು ಒಳಗೆ ಹೋಗುತ್ತಿದ್ದವರಿಗೆ, ರಾಯರು,”ಸುಶೀ ನಿನ್ನ ಮಾತಿಗೆ. ನಾವೆಲ್ಲ ಒಪ್ಪಿದೀವಿ ಅದಕ್ಕೆ ಈಗ ಮತ್ತೆಕಾಫಿಬೇಕು.”ಅಂದಾಗ, ಮಕ್ಕಳು ಸೊಸೆಯರೂ ಧ್ವನಿಗೂಡಿಸಿದರು.ಸುಶೀಲಮ್ಮ, “ಆಯ್ತು ಈಗ ತಂದೆ” ಅನ್ನುತ್ತ ಒಳಕ್ಕೆ ಹೋದರು.
ಸುಶೀಲ,ಶ್ರೀಪಾದರಾಯರಿಗೆ, ಇಬ್ಬರು ಗಂಡು ಮಕ್ಕಳು. ಇಬ್ಬರಿಗೂ ಮದುವೆ ಆಗಿದೆ. ಮೊದಲನೆ ಮಗ ಶ್ರೀಕರ ಡಾಕ್ಟರ್.ಮದುವೆ ಆಗಿ ಮೂರು ವರ್ಷವಾಗಿದೆ. ಎಂಟು ತಿಂಗಳ ಹೆಣ್ಣು ಮಗುವಿದೆ. ಎರಡನೇ ಮಗ ಮಧುಕರ ಈಗಷ್ಟೇ ಮದುವೆ ಆಗಿದೆ ಗಂಡ ಹೆಂಡತಿಇಬ್ರು ಸಾಫ್ಟವೇರ್ ಇಂಜನಿಯರ್ ಗಳು ಶ್ರೀಪಾದರಾಯರು ಪ್ಯಾಕ್ಟರಿ ಒಂದರಲ್ಲಿ ಕೆಲ್ಸದಲ್ಲಿದ್ದರು. ಈಗ ರಿಟೈರ್ಡ ಆಗಿ ಮೂರುವರ್ಷ ವಾಗಿದೆ. ಸುಖೀಕುಟುಂಬ ಅಂತ ಹೇಳಬಹುದು.
ಎಲ್ಲರಿಗು ಮತ್ತೂಂದು ಬಾರಿ ಕಾಫಿಕೊಟ್ಟು ರಾಯರಿಗೆ ಅವರಿಗೆ ಇಷ್ಟವಾದ ಸಕ್ಕರೆ ಇಲ್ಲದ ಕಾಫಿ ಕೊಟ್ಟು, ಸುಶೀಲಮ್ಮ ಇವತ್ತು ತಿಂಡಿ ತಡವಾಯಿತೆಂದು, ತರಾತುರಿಯಲ್ಲಿ ಬೇಗ ಉಪ್ಪಟ್ಟು ಮಾಡಿದರು.ಮಧುಕರ,ಅಮ್ಮನಿಗೆ ಹೆಂಡತಿ ಆಫೀಸಿಗೆ ಹೋಗಿದ್ದು, ತಿಳಿಯಬಾರದೆಂದು”,ಅಮ್ಮಾ,ಅಕ್ಷರ ಕಂಪ್ಯೂಟರ್ ನಲ್ಲಿಕೆಲ್ಸಮಾಡ್ತಿದಾಳೆ ನಮ್ಮಿಬ್ಬರಿಗೆ ಹಾಕಿಕೊಡು ನಾನು ಮೇಲೆ ತಗೊಂಡುಹೋಗ್ತೀನಿ”ಅಂತಹೇಳಿ ತಗೊಂಡುಹೋದ. ರಾಯರಿಗೆ ಇಷ್ಟವಿಲ್ಲದ ಉಪ್ಪಿಟ್ಟು ರುಚಿಸಲಿಲ್ಲ. ಸುಶೀಲಮ್ಮ ಹೇಗೋ ತಿಂಡಿಕಥೆ ಮುಗಿಸಿ ಅಡುಗೆಗೆ ಶುರು ಹಚ್ಚಿಕೊಂಡರು. ಅಡುಗೆ ಮಾಡಿ,ಎಲ್ಲರನ್ನುಊಟಕ್ಕೆ ಕರೆದು ಬಂದರು.ಅಷ್ಟೊತ್ತಿಗೆ ಅಕ್ಷರ ಆಫೀಸಿನಿಂದ ಬಂದಿದ್ದು ಮಧುಕರನಿಗೆ ಸಮಾದಾನವಾಗಿತ್ತು.ಎಲ್ಲರು ಊಟಕ್ಕೆ ಬಂದರು.ರಾಯರು ಸಹ ತಮ್ಮ ರೂಂನಿಂದ ಎದ್ದುಬರುತ್ತಿರ ಬೇಕಾದರೆ ಹಾಗೇ ಕುಸಿದುಬಿದ್ದರು. ಮುಖ ಮೈಯಲ್ಲಾ ಬೆವರುತ್ತಿತ್ತು.ಕೈಕಾಲುಗಳು ನಡುಗುತ್ತಿತ್ತು.ಇದನ್ನು ನೋಡಿದ ಮದುಕರ ತಕ್ಷಣ ಶ್ರೀಕರನನ್ನು ಕರೆದ. ಇಬ್ಬರು ಸೇರಿ ರಾಯರನ್ನು ರೂಂನಲ್ಲಿ ಮಲಗಿಸಿದರು.ಇದನ್ನು ನೋಡಿದ ಸುಶೀಲಮ್ಮನ ಎದೆ ಬಡಿತ ಜೋರಾಯಿತು.ರಾಯರಿಗೆ ಏನೋ ಆಗೇ ಬಿಡುತ್ತದೆಂದು ತುಂಬಾ ಹೆದರಿದರು,
ಇಬ್ಬರು ಸೊಸೆಯರು ಮಾವನವರಿಗೆ ಏನೂ ಆಗಲ್ಲವೆಂದು ಸಮಾಧಾನ ಮಾಡುತ್ತಿದ್ದರು.ಶ್ರೀಕರ ರಾಯರಿಗೆ ಬಿ.ಪಿ,ಶುಗರ್ ಟೆಸ್ಟ್ ಮಾಡಿದಾಗ ಶುಗರ್ ಕಡಮೆ ಇರುವುದು ಗೊತ್ತಾಗಿ ತಕ್ಷಣ ಸಕ್ಕರೆ ನೀರು ಕೊಟ್ಟಾಗ, ರಾಯರು ಚೇತರಿಸಿಕೊಂಡರು.ಆರೋಗ್ಯವಾಗಿದ್ದ ರಾಯರಿಗೇಕೆ ಹೀಗಾಯ್ತು?ಅಂತ ಸುಶೀಲಮ್ಮ ಶ್ರೀಯನ್ನು ಆತಂಕದಿಂದ ವಿಚಾರಿಸಿದಾಗ,”ನೀನು ಆತಂಕಪಡೋಂತಹುದು ಅಪ್ಪನಿಗೆ ಏನೂ ಆಗಿಲ್ಲ.ಅವರಿಗೆ ಶುಗರ್ ಇಲ್ಲದಿದ್ರು ಶುಗರ್ ಲೆಸ್ ಕಾಫಿ ಕುಡಿದಿದ್ದಾರೆ. ಅವರಿಗೆ ಇಷ್ಟ ಅಂತ ನೀನು ಕೊಡ್ತಿಯಾ!ಇವತ್ತು ಸರಿಯಾಗಿ ತಿಂಡಿಬೇರೆ ತಿಂದಿಲ್ಲ.ಎಲ್ಲಾಸೇರಿ ದೇಹದಲ್ಲಿ ಶುಗರ್ ಕಡಮೆಆಗಿದೆ ಈಗ ಬೇಗ ಊಟಕ್ಕೆ ಬಡಿಸುನಡಿ. ಎಲ್ಲಾಸರಿಹೋಗುತ್ತೆ.” ಅಂದಾಗ ಎಲ್ರುಬಂದು ಊಟ ಮುಗಿಸಿದ್ರು.ಸುಶೀಲಮ್ಮ ಮಾತ್ರ ರಾಯರಮೇಲೆ ಒಂದುಕಣ್ಣು ಇಟ್ಟಿದ್ದರು. ಎಲ್ಲರದು ಊಟ ಆದಮೇಲೆ ತಾವು ನಾಮಕಾವಸ್ಥಗೆ ಊಟ ಮಾಡಿ, ಸೀದ ರಾಯರಿದ್ದಕಡೆ ಬಂದು ಕುಳಿತರು .”ಈಗ ಹೇಗಿದೆ ?”ನಂಗೇನು ಆಗಿಲ್ಲ ಸುಶೀ ಆರಾಮವಾಗಿದೀನಿ.””ಯಾಕೋ ನೀವು ಸುಸ್ಥಾಗಿದ್ದು ನೋಡಿ ನನಗೆ ತುಂಬ ಭಯ ಆಯ್ತು.”ಅಂತ ಸುಶೀಲಮ್ಮಕೆಮ್ಮ ತೊಡಗಿದರು.”ನೀನ್ಯಾಕೆ ಕೆಮ್ಮುತಿದಿಯಾ?”ಅಂದು, “ಸುಶೀ”ಅನ್ನುತ್ತ ಹತ್ತಿರ ಬಂದ್ರು ರಾಯರು ,ಸುಶೀಲಮ್ಮ ರಾಯರ ಕೈ ಹಿಡಿದುಕೊಂಡು ಹಾಗೇ ವಾಲಿದರು. ರಾಯರು ಗಾಬರಿಯಾಗಿ ಮಕ್ಕಳನ್ನ ಕೂಗಿದರು ಮಗ ಬಂದು ಟಿಷ್ಟ್ ಮಾಡುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.ಅವರಿಗೆ ಹಾರ್ಟ ಫೇಲ್ಯುರ್ ಆಗಿ ಹೋಗಿಬಿಟ್ಟರು. ಅವರ ಕನಸು ನಿಜವಾಗಿತ್ತು. ನಮ್ಮನ್ನೆಲ್ಲ ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತ್ತಿದ್ದ ಅಮ್ಮ,ನಾವು ಅವರ ಬಗ್ಗೆ ಕಾಳಜಿ ವಹಿಸಬೇಕಾಗಿತೆಂದು ಎಲ್ಲರ ಮನಸಿಗು ನಾಟಿತ್ತು.
*********************