Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************

ಕಾವ್ಯಯಾನ

ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************

ವಾರದ ಕವಿತೆ

ಹುಡುಗ ನೀ ಸಾಯಬೇಕಿತ್ತು ಲಕ್ಷ್ಮೀ ಪಾಟೀಲ್ (ಶ್ರೀ ಕೆ ವಿ ಅಯ್ಯರ್ ಬರೆದಿರುವ “ರೂಪದರ್ಶಿ “ಕಾದಂಬರಿಯಲ್ಲಿ ಬರುವ ” ಆರ್ನೆಸ್ಟ್” ನನ್ನು ಕುರಿತ ಕವಿತೆಯಿದು) ಹೊಟ್ಟೆಯಲ್ಲೇ ಅಪ್ಪ ಅಮ್ಮರಿಗಾಗಿಗೋರಿಗರಸ ಎಬ್ಬುವಾಗ ಹಾಳಮಣ್ಣ ಹಾಸಿನಲ್ಲಿಭ್ರಮೆಯ ಬದುಕು ಬಿಕ್ಕುವ ಮುನ್ನಹುಡುಗ ನೀ ಸಾಯಬೇಕಿತ್ತು ಅಜ್ಜಿಯ ಪೊರೆವ ಬಾಂಧವ್ಯದಲ್ಲಿಬದುಕನ್ನು ಒದ್ದೆಯಾಗಿಸಿಕೊಳ್ಳುವಾಗಅವಳ ನೋವಿಗೆ ಬಾಲ ಕನಸುಗಳತೇಪೆ ಜೋಡಿಸುವಾಗ ದೂರ ದುರಂತ ಕಾಣದ ಮುನ್ನಹುಡುಗ ನೀ ಸಾಯಬೇಕಿತ್ತು ಕೈಯಾಡಿಸಿದ ಕೈಗೆ ಬಾಲ ಭಾವದ ಹಾಲು ಗೆಣ್ಣೆಅಪರೂಪದ ಬಾಲ ಯೇಸುವಿನ ವಿರಾಜತೆಮೈಕಲ್ ಏಂಜಲೋನ ದಿವ್ಯ ಅಪ್ಪುಗೆಯ […]

ಕಾವ್ಯಯಾನ

ಕವಿತೆ ನನ್ನ ಶ್ರಾವಣ ಅನಿತಾ ಪಿ. ಪೂಜಾರಿ ತಾಕೊಡೆ. ಕರುಳ ನಂಟಿನ ಪ್ರೀತಿ ಪ್ರತಿರೂಪಗಳಕಂಡುಂಡು ಬೆಳೆದ ಮನೆಯಹೊಸ್ತಿಲು ದಾಟಿದೆನಲ್ಲ ಅಂದುಬಾಳಿ ಬದುಕುವ ಮನೆಗೆ ಬಲಗಾಲಿಟ್ಟು ನೆನಪಿನ್ನೂ ಹಸಿರೇ ಶ್ರಾವಣ ಸಿರಿಯಂತೆಅಂದು ಮೊದಲ ಬಾರಿ ತವರಿಗೆ ಬಂದಾಗಮುಳ್ಳನ್ನು ಬದಿಗೊತ್ತಿ ಖುಷಿಯ ಹೂವುಗಳನ್ನೇ ಬಿಡಿಸಿಟ್ಟಿದ್ದು… ಶ್ರಾವಣ ಕಳೆದುಒಲ್ಲದ ಮನಸನು ಮೆಲ್ಲನೆ ಒಲಿಸಿ ಮುಂದೆ ನಡೆದಾಗಕಳೆದ ದಿನಗಳು ಸುತ್ತ ಸುಳಿದು.ಶ್ರಾವಣವೇ ನಿಲ್ಲು ನಿಲ್ಲೆಂದು ಮರುಗಿದ್ದು ಈಗಲೂ ಶ್ರಾವಣವೆಂದರೆ ಅದೇನೋ ಸೆಳವುಅಲ್ಲಿರುವ ಸಲುಗೆ ಇಲ್ಲಿರುವ ಬೆಸುಗೆಅಲ್ಲಿರುವ ಪ್ರೀತಿ ಇಲ್ಲಿರುವ ನೀತಿಎಲ್ಲವೂ ಬೇರೆ ಬೇರೆ […]

ಏಕಾಂತದ ನಿರೀಕ್ಷೆಯಲ್ಲಿ

ಕವಿತೆ ಏಕಾಂತದ ನಿರೀಕ್ಷೆಯಲ್ಲಿ ತೇಜಾವತಿ.ಹೆಚ್.ಡಿ. ಬಹಳ ಖುಷಿಯಾಗಿದ್ದೆ ನಾನುಹರೆಯದ ವಯಸ್ಸಿನಲ್ಲಿ ಮೂಡಿದಅಸ್ಪಷ್ಟ ಕನಸುಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಂಡುನನ್ನದೇ ಕಲ್ಪನಾ ಲೋಕದಲ್ಲಿ ತಾರೆಯಾಗಿ ಪ್ರಜ್ವಲಿಸಿದ್ದೆ ದಿಂಬಿಕೆ ತಲೆಗೊಡುವುದೇ ತಡನಿದ್ರಾದೇವಿಗೆ ಶರಣಾಗುತ್ತಿದ್ದೆಗುಡಿಸಿಲಿನ ಅಂಗಳದಿ ಕುಳಿತುಅರಮನೆಯ ರಾಣಿಯಾಗಿದ್ದೆಅತೀ ಸೂಕ್ಷ್ಮ ಸಂವೇಗಗಳಿಗೂ ಪ್ರತಿಕ್ರಿಯಿಸುತ್ತಾಚಳಿಗೆ ಬೆಂಕಿ ಕಾಯಿಸುವಾಗಮಾರು ದೂರವಿರುವಾಗಲೇನೆಗೆದು ಹೌಹಾರಿ ಬೀಳುತ್ತಿದ್ದೆ ಎಡವಿದ ಕಲ್ಲಿಗೂ ಕಂಬನಿಗರೆದುಮಳೆಯಲ್ಲಿ ತೋಯುತ್ತಿದ್ದೆಪುಟ್ಟ ಪುಟ್ಟ ಕಂಗಳಲಿ ದೊಡ್ಡ ದೊಡ್ಡ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದೆ ಪ್ರತಿ ವೀಕೆಂಡ್ ಬಂತೆಂದರೆ ಸಾಕುಕಾಲಿಗೆ ಚಕ್ರ ಕಟ್ಟಿದವಳಂತೆ ಗರಗರ ಗಿರಕಿ ಹೊಡೆಯುತ್ತಿದ್ದೆ ಬರುಬರುತ್ತಾ….ಕಾಯ ಗಟ್ಟಿಗೊಂಡುಮನಸ್ಸು ಪಕ್ವವಾಗಿಚರ್ಮ ಸುಕ್ಕುಗಟ್ಟಿಅಂತರಂಗ […]

ಕಾವ್ಯಯಾನ

ಮತ್ತೆ ಮಳೆಯಾಗಲಿ ಸುನೀಲ್ ಹೆಚ್ ಸಿ ಎದೆಯಲ್ಲಿ ಹಾಗೆ ಕುಳಿತಿರುವ ನೋವುಗಳೆಲ್ಲಾಅಳಿಸಿ ಹೋಗುವ ಹಾಗೆಮನಸಲ್ಲಿ ಬೆಂದು ಬೆಂಡಾಗಿರುವ ದುಃಖ ಗಳೆಲ್ಲಾತೊಳೆದು ಹೋಗುವ ಹಾಗೆಕಳೆದು ಹೋಗಿರುವ ಕಣ್ಣೀರ ಕ್ಷಣಗಳು ಮತ್ತೆನೆನಪಾಗದ ಹಾಗೆಒಣಗಿ ಬಣ ಗುಟ್ಟಿದ್ದ ಕಣ್ಣುಗಳು ಆನಂದದಲ್ಲಿ ತುಂಬಿ ತುಳುಕುವ ಹಾಗೆಹೃದಯದ ಕಿಟಕಿ ಬಳಿ ಮತ್ತದೇ ಶಬ್ದಇಂಪಾಗಿ ಕೇಳುವ ಹಾಗೆಹೆಜ್ಜೆ ಇಡಲು ಹೆದರುತ್ತಿದ್ದ ಕಾಲುಗಳಿಗೆ ಶಕ್ತಿಸಿಂಪಡಿಸುವ ಹಾಗೆಬರಹಗಳೇ ಅಳಿಸಿ ಹೋಗಿದ್ದ ಹಣೆಯಲ್ಲಿ ಕೇಸರಿ ತಿಲಕ ಸದಾ ನಗುವ ಹಾಗೆಎಲ್ಲಾ ಕಳೆದು ಹೃದಯದಲ್ಲಿ ಪ್ರೀತಿ ಎಂಬ ಹಸಿರುಮತ್ತೆ ಚಿಗುರುವ ಹಾಗೆನಮ್ಮ […]

ಕಾವ್ಯಯಾನ

ಬಿಡುಗಡೆ ರುಕ್ಮಿಣಿ ನಾಗಣ್ಣವರ ನಂಬಿಗಸ್ಥ ಕುನ್ನಿಯಂತೆ ಪಾಲಿದತಲೆತಲೆಮಾರಿನ ಮೌನವನ್ನುಮತ್ತೊಮ್ಮೆ ಮುರಿದುದವಡೆಯಲ್ಲಿ ಒತ್ತಿ ಹಿಡಿದಸಿಟ್ಟು ಬಳಸಿ ಹೊಟ್ಟೆಬಾಕರಹುಟ್ಟಡಗಿಸಬೇಕಿದೆ ತುತ್ತು ಅನ್ನಕ್ಕೆ, ತುಂಡು ಭೂಮಿಗೆಕೈ ಕಟ್ಟಿ, ಬಾಯಿ ಮುಚ್ಚಿ,ಟೊಂಕದಲ್ಲಿರಿಸಿದಸ್ವಾಭಿಮಾನ ಗಾಳಿಗೆ ತೂರಿಜೀತದಾಳಾಗಿ ದುಡಿಯುವಕಾಲ ದೂರಿಲ್ಲಅರಿಯಬೇಕಿದೆ ಅಗೋ…ಉರುಳಿಹೋದ ದಿನಗಳುಮರುಕಳಿಸುವ ಕರಾಳಕ್ರೌರ್ಯದ ಕೂಗುಇತ್ತಲೇ ಹೆಜ್ಜೆ ಇರಿಸಿದೆ ನರಳಾಟದ ಕೆಂಡದಲಿಅಂಡು ಸುಡುವ ಮೊದಲುಎಚ್ಚೆತ್ತುಕೊಳ್ಳಬೇಕಿದೆಕ್ರಾಂತಿಯ ಕಹಳೆ ಮೊಳಗಿಸಿನಮ್ಮವರಿಂದಲೇ ನಾವುಬಿಡುಗಡೆ ಹೊಂದಬೇಕಿದೆ.. *****************

ಕಾವ್ಯಯಾನ

ದೇಶಪ್ರೇಮ ಗೋಪಾಲತ್ರಾಸಿ ದೇಶಎಂದರೆಸೀಮೆಯೊಳಗಿನಬರೇಭೂಭಾಗವಲ್ಲ ದೇಶಪ್ರೇಮಕೋಟೆಯೇರಿಊದುವತುತ್ತೂರಿಯೇನಲ್ಲ ದೇಶಪ್ರೇಮ,ವ್ವವಹಾರ, ರಾಜಕೀಯಧರ್ಮ-ರೀತಿ-ರಿವಾಜುಪೊರೆಕಳಚುವಸಹಜಮಾನವಪಥ ನಮ್ಮಷ್ಟೇ, ನಮ್ಮಂತಹಸಹಜೀವದಕುರಿತಷ್ಟುಕಾಳಜಿ ಸಕಲಜೀವಜಂತುಗಳತೆಕ್ಕೆಯೊಳಗೆಆಹ್ವಾನಿಸಿಕೊಳ್ಳುವಕಾರುಣ್ಯ ದೇಶಪ್ರೇಮಎಂದರೆದೇಶದಕೊನೇಯನಿರ್ಗತಿಕನಯೋಗಕ್ಷೇಮ. ******************

ಕಾವ್ಯಯಾನ

ಭಾರತ ದರ್ಶನ ಅರುಣಾ ರಾವ್ ದೇಗುಲ ದರ್ಶನ ಮಾಡುವ| ನಾವ್ ದೇಗುಲ ದರ್ಶನ ಮಾಡುವ|ವಿಶ್ವ ಭೂಪಟದೆ ಭಾರತವೆಂಬ| ದೇಗುಲ ದರ್ಶನ ಮಾಡುವ|| ಭವ್ಯ ಹಿಮಾಲಯ ಶಿಖರವೆ ನಿನ್ನ| ಮಂದಿರ ಗೋಪುರವು|ಅರಬ್ಬಿ ಹಿಂದೂ ಬಂಗಾಳ ಕೊಲ್ಲಿ| ಗುಡಿಯ ಪರಿಧಿಗಳು|ಹಿಂದೂ ಮುಸ್ಲಿಂ ಜೈನ ಕೈಸ್ತ| ಆಧಾರ ಸ್ಥಂಭಗಳುಜಯ ಜಯ ಭಾರತ ಎಂಬುದೇ| ಇಲ್ಲಿಯ ಮಂತ್ರದ ಘೋಷಗಳು|| ಭಿತ್ತಿ ಬಿತ್ತಿಗಳು ಸಾರುವವಿಲ್ಲಿ| ಸಾಹಸ ಕಥೆಗಳನು|ಕಲ್ಲು ಕಲ್ಲುಗಳು ಹೇಳುವವಿಲ್ಲಿ| ನಡೆದಿಹ ಹಾದಿಯನು|ಗರ್ಭ ಗುಡಿಯು ನಮ್ಮಯ ಮನಗಳು| ಬಿಡು ಸಂದೇಹವನು|ಜಯ ಜಯ ಭಾರತ ಎನ್ನುತ| […]

ಹೀಗೊಂದು ವಿರಹ ಗೀತೆ

ಕವಿತೆ ಹೀಗೊಂದು ವಿರಹ ಗೀತೆ ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲಎಲ್ಲಿಂದ ಬರಬೇಕು, ನಾನು ಬಡವಿ…..ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳುಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತುಒಲವಿತ್ತು ನಾ -ನೀನು ಬೇಧವಿರದೇನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದುಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವನಿನ ಮೌನ ಸಹಿಸುವುದು ಕಷ್ಟ ಎನಗೆಇಷ್ಟ ಇರದಿದ್ದರೂ ನನ ಮಾತು ಜೋರಾಗಿಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿಇಟ್ಟರೆ ಹಳಸಿಬಿಡುವಂತೆ ನಾನೂಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನುಈಚೆ […]

Back To Top