ನಂದಿನಿ ಹೆದ್ದುರ್ಗರವರ ಕವಿತೆ
ಅವನ ಅದ್ದಿ ಬರೆದ ಪದ್ಯಗಳು
ಈಗಲೂ ಹೊಸದಾಗಿಯೇ ಇವೆ…
ನಾಜೂಕು ಅಕ್ಷರಗಳ ನೇವರಿಸಿ
ಒಳಗೊಳ್ಳುತ್ತೇನೆ ಹೊಸದೆಂಬಂತೆ
ಪ್ರತಿ ಬಾರಿಯೂ…
ತೆರೆದ ಬಾಗಿಲಿನ ಪಂಜರದಿಂದ
ಹಾರಿ ಹೋದ ಹಕ್ಕಿಯೊಂದು
ಇಳಿಸಂಜೆಗೆ ಮರಳಿ
ದಿನದ ಕಥೆ ಹೇಳುತ್ತದೆ.
ಕೆಲವು ಹಳತುಗಳು
ಹೊಸತಾಗಬಹುದೆಂಬ ಪುಳಕ
ಉಳಿದೇಹೋಗಿದೆ ಇಲ್ಲಿ…!
ಹೊಳಪು ಮತ್ತು ಬೆಳಕು
ಬಚ್ಚಿಡುವುದೂ ಎಂಥ
ಹರಸಾಹಸ ಪ್ರಭುವೇ…!!!
****************