ಕಾವ್ಯಯಾನ

ಭಾರತ ದರ್ಶನ

Flag of India | History, Design, & Meaning | Britannica

ಅರುಣಾ ರಾವ್

ಕವಿತೆ

ದೇಗುಲ ದರ್ಶನ ಮಾಡುವ| ನಾವ್ ದೇಗುಲ ದರ್ಶನ ಮಾಡುವ|
ವಿಶ್ವ ಭೂಪಟದೆ ಭಾರತವೆಂಬ| ದೇಗುಲ ದರ್ಶನ ಮಾಡುವ||

ಭವ್ಯ ಹಿಮಾಲಯ ಶಿಖರವೆ ನಿನ್ನ| ಮಂದಿರ ಗೋಪುರವು|
ಅರಬ್ಬಿ ಹಿಂದೂ ಬಂಗಾಳ ಕೊಲ್ಲಿ| ಗುಡಿಯ ಪರಿಧಿಗಳು|
ಹಿಂದೂ ಮುಸ್ಲಿಂ ಜೈನ ಕೈಸ್ತ| ಆಧಾರ ಸ್ಥಂಭಗಳು
ಜಯ ಜಯ ಭಾರತ ಎಂಬುದೇ| ಇಲ್ಲಿಯ ಮಂತ್ರದ ಘೋಷಗಳು||

ಭಿತ್ತಿ ಬಿತ್ತಿಗಳು ಸಾರುವವಿಲ್ಲಿ| ಸಾಹಸ ಕಥೆಗಳನು|
ಕಲ್ಲು ಕಲ್ಲುಗಳು ಹೇಳುವವಿಲ್ಲಿ| ನಡೆದಿಹ ಹಾದಿಯನು|
ಗರ್ಭ ಗುಡಿಯು ನಮ್ಮಯ ಮನಗಳು| ಬಿಡು ಸಂದೇಹವನು|
ಜಯ ಜಯ ಭಾರತ ಎನ್ನುತ| ತಾಯಿ ಪಾದಕೆ ಮಣಿಯುವೆನು||

ಹೆಜ್ಜೆ ಹೆಜ್ಜೆಗೂ ಕಣ್ಮನ ಸೆಳೆಯುವ| ಶಿಲ್ಪ ಕಲೆಗಳು ಇವೆಯಿಲ್ಲಿ|
ಹಂತ ಹಂತಕೂ ಸಂಸ್ಕೃತಿ ಸೌರಭ| ಸೂಸುವ ಕೊಳಗಳು ಇವೆಯಿಲ್ಲಿ|
ಭಾರತೀಯರೇ ಭಕ್ತರೆಲ್ಲರೂ| ಒಂದೇ ನಾಮದ ಜಪವಿಲ್ಲಿ|
ಜಯ ಜಯ ಭಾರತ ಎಂಬುದೆ ತುಂಬಿದೆ ಎಮ್ಮಯ ಮನಗಳಲಿ||

************************

3 thoughts on “ಕಾವ್ಯಯಾನ

  1. ಭಾರತದ ದರ್ಶನ – ಸೊಗಸಾದ ವರ್ಣನೆಯ ಕವನ – ಕಾವ್ಯಯಾನದಲ್ಲಿ ನಿಮ್ಮ ವ್ಯಕ್ತಿತ್ವದ ದರ್ಪಣ, ಈ ಮೂರಕ್ಕೂ ನಮ್ಮ ಮನಸಾ ನಮನ…

Leave a Reply

Back To Top