Category: ಕಾವ್ಯಯಾನ

ಕಾವ್ಯಯಾನ

ಟೈಂ ಮುಗಿಸಿದ ಸಮಯ…..

ಕವಿತೆ ಡಾ.ಪ್ರೇಮಲತ ಬಿ ಕೆಲವರಿಗೆ ಸಮಯವಿರುವುದಿಲ್ಲಸಮಯ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲನನ್ನ ಬಳಿ ಬಹಳ ಸಮಯವಿದೆಆಳ ಗೆರೆಗಳ ನನ್ನ ಕೈ ಖಾಲಿಯಿದೆ ಹಾಗೆಂದೇ ಸಮಯವನ್ನು ಕೊಲ್ಲಲು ನನ್ನ ಬಳಿಅಸಾಧ್ಯ ಸಾಧ್ಯತೆಗಳಿವೆ ಆದರೆಹಾಗೊಮ್ಮೆ, ಹೀಗೊಮ್ಮೆ ತೂಗುವ ಲೋಲಕದನನ್ನ ಗಡಿಯಾರಕ್ಕೆ ಮುಳ್ಳುಗಳಿಲ್ಲ ಅನಂತ ಚಲನೆಗಳ ಸಂವೇದನೆಯಿಲ್ಲಕೊಂದದ್ದೇನು ತಿಳಿಯುವುದಿಲ್ಲಟಿಕ್-ಟಿಕ ನೆಂದು ಉಲಿದು ಹೇಳಲುನನ್ನೆದೆ ಗಡಿಯಾರಕ್ಕೆ ಧ್ವನಿಯಿಲ್ಲ ರಸ್ತೆಯಲಿ ನಿಂತ ಒಂಟಿ ಜೀವಸಂತೆಯಲ್ಲಿದ್ದರೂ ಕೇಳುವ ನಿರಂತರ ಮೌನಸಮಯದ್ದೇನು ನನಗೆ ಮುಲಾಜುಸಮಯ ಪ್ರಜ್ಞೆಆಳುವುದಿಲ್ಲ ಅವಸರ ಬದುಕ ಕಾಡುವುದಿಲ್ಲಸಮಯ ಕೊಂದ ಪಾಪಪ್ರಜ್ಞೆಯಿಲ್ಲಅರ್ಥಗಳ ಟೈಂ ಮುಗಿಸಿದ ಸಮಯ ನನ್ನೆದುರು […]

ನೈವೇದ್ಯ

ಕವಿತೆ ನೈವೇದ್ಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಮೂರು ಕಲ್ಲುಗಳ ಒಲೆನನ್ನ ಮನಸ್ಸು!ಹಳದಿ ಮೈಯ ಕೆಂಪು ನಾಲಗೆಯನ್ನುಊರ್ಧ್ವಕ್ಕೆ ಕೊರಳುದ್ದಕ್ಕೂ ಚಾಚಿ ಚಾಚಿಕಾಯಮಡಕೆಯನ್ನು ನೆಕ್ಕುತ್ತಿರುತ್ತದೆಬೆಂಕಿಬಾಳು! ಒಂದು ದೀರ್ಘ ಕಾಯುವಿಕೆಯಲ್ಲಿಪ್ಲುತಕಾಲಗಳ ಬೇಯುವಿಕೆ…ಅಕ್ಕಿ ಗುಳುಗುಳು ಕುದಿಯುತ್ತ ಅಂಗುಳಅಗುಳು ಅಗುಳೂ ಅನ್ನವಾಗುತ್ತದೆಆಹಾ! ಉದುರುದುರು ಮಲ್ಲಿಗೆ ಹೂವು!ಬಟ್ಟಲು ತುಂಬ ಹರಿದಾಡುವ ಮುತ್ತು!ಅನ್ನ ಜೀವವಾಗುತ್ತದೆ… ಪರಮ ಅನ್ನ! ಬ್ರಹ್ಮ ವಿಷ್ಣು ಮಹೇಶ್ವರ ಪುಟುಪುಟುಅಂಬೆಗಾಲಿಡುತ್ತಿದ್ದಾರೆ…ಚಿಗುರು ಬೆರಳ ಚುಂಚದಲ್ಲಿ ಹೆಕ್ಕಿ ಹೆಕ್ಕಿಬಾಯಿ ಬ್ರಹ್ಮಾಂಡದಲ್ಲಿ ತುಂಬಿಕೊಳ್ಳಲು!ಒಬ್ಬನ ಕೈಯ ಕೆಂದಾವರೆಗೆಮತ್ತೊಬ್ಬನ ಹೊಕ್ಕುಳ ಕುಂಡದ ದಂಟಲ್ಲಿ ನಗುಹುಟ್ಟಿಗೆ ಬದುಕಿನ ನಂಟು!ಹೊಕ್ಕುಳಬಳ್ಳಿ… ಅಮೃತಬಳ್ಳಿ! ಮಗದೊಬ್ಬನ ನೊಸಲಲಿ ಒಲೆಯಬೂದಿಯೆ […]

ದಿಟ್ಟ ಹೆಜ್ಜೆ

ಕವಿತೆ ದಿಟ್ಟ ಹೆಜ್ಜೆ ಶಿವಲೀಲಾ ಹುಣಸಗಿ ಇನ್ನೇನು ಬೀದಿಗೆ ಬಿದ್ದಂತೆಒಣಹುಲ್ಲಿಗೂ ಆಸರೆಯಿಲ್ಲದೇಕೊನೆಗಳಿಗೆಯ ನಿಟ್ಟುಸಿರಿಗೆನಿತ್ರಾಣದ ನಡುವಿಂದ ನಡುಕಕಣ್ಸನ್ನೆಯಲಿ ನುಡಿದುದೆಲ್ಲ ದಿಟಹೊತ್ತಿಗೆ ಬಾರದ ತುತ್ತ ನೆನೆದುಕತ್ತು ಹೊರಳಿದರೂ ನಿಲ್ಲದ ಆಪತ್ತುತೂಗುಗತ್ತಿಯ ನೆತ್ತಿಯಲಿ ಹೊತ್ತುಸ್ವಪ್ನ ಕಾಣುವ ಭರದಲ್ಲಿಯೇಸೂರಿಲ್ಲದೆ ತಾರೆಗಳಾದರೆಷ್ಟೋಒಣಹುಲ್ಲಿಗೆ ಮಣಲೆಕ್ಕ ಬರೆದುಹೊಟ್ಟೆ ಬಗಿದರೂ ಚಿಮ್ಮದಾ ನೆತ್ತರುಹಸಿವಿನ ಮುಂದೆ ಎಲ್ಲ ಸೋತವರುಶೂನ್ಯದಾಹುತಿಗೆ ಕೊರಳೊಡ್ಡಿಹರುಬೀದಿಗೆ ಬಂದ ಬದುಕಿಗೆಲ್ಲಿದೆ ತ್ರಾಣಇರಳೊಂದು ಮಸಿ ಚಲ್ಲಿದಂತೆಗಾಢಂಧಕಾರದಲಿ ಸುಖವೆಲ್ಲ ವ್ಯರ್ಥಎಲುಬಿನ ಎಣಿಕೆಯೋ ಗೋರ ಅನರ್ಥಬಯಲಿಗೆ ಬೆತ್ತಲಾಗುವ ಭಯವಿಲ್ಲನಮಗೋ ಬಯಲಾಗದೇ ಬದುಕಿಲ್ಲಬೀದಿ ಚಂದ್ರಮನೇ ಮೌನವಾಗಿಹನುಚಿಗುರೊಡೆಯದೆ ಕಮರಿದ ಬಾಳಿಗೆ.ಎದೆಸೆಟಿಸಿ ನಡೆದೆನೆಂದರೂ ನಿರಾಶೆಎದೆಬಗಿದು ಕರುಳ […]

ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ

ಕವಿತೆ ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ ಪೂರ್ಣಿಮಾ ಸುರೇಶ್ ನದಿ ಕಡಲ ದಂಡೆಯಲಿ ಮನೆಉಬ್ಬರ, ಇಳಿತ ,ರಮ್ಯ ಹರಿದಾಟಒಂದಿಷ್ಟು ಮೊರೆತ ಮತ್ತಷ್ಟುಆಲಾಪ ರಾಗ ವಿರಾಗಆಗಾಗ ರಾಡಿ ಮತ್ತಷ್ಟು ಸೆಳೆತದ ಮೋಡಿಕಚಕುಳಿ ಇಡುವ ಪುಟ್ಟ ಭಾವಗಳಹರಿವಿನ ಹರಿದಾಟ ಪುಲಕ ಹಸಿರುಮತ್ತೀಗ ಉಪ್ಪು ಜಲ ಕಟ್ಟದಿರಿ ಮನೆನದಿ ಕಡಲ ದಂಡೆಯಲಿ ನೆರೆಯೀಗ ಉಕ್ಕೀತು ‌ಹೊಳೆಯೀಗ ಬಿಕ್ಕೀತುಸಮುದ್ರದ ಒಡಲಲ್ಲೂ ಆರದ ಅಲೆಅಲೆನಿಮಗೆ ತಿಳಿಯದು ಪ್ರವಾಹದ ಉರಿಕಾದ ಕಾಯುವ ವಿಧವಿಧ ಪರಿಹರಿದು ಉಕ್ಕುವ ನೀರಿಗೆ ಲಕ್ಷಣರೇಖೆ ಇಲ್ಲ ಅಂಗಳ, ಪಡಸಾಲೆ ದೇವರಮನೆಪಾಕದ […]

ಕಾಯುವಿಕೆ

ಕವಿತೆ ಕಾಯುವಿಕೆ ತೇಜಾವತಿ ಹೆಚ್.ಡಿ. ಎಷ್ಟು ಘಮಘಮಿಸಿತ್ತಿದ್ದೆ ನೀನು..ಸುತ್ತೆಲ್ಲಾ ಮೂಲೆಗೂ ಕಂಪ ಪಸರಿಸುತ್ತಿದ್ದೆಯಲ್ಲ.. !ದಾರಿಹೋಕರನ್ನೂ ಕೈಬೀಸಿ ಕರೆದುತನ್ನೆಡೆಗೆ ಸೆಳೆವ ಮಾಯಾವಿ ನೀನು! ನಿನ್ನ ನೋಡಿದಾಗೆಲ್ಲ ಮುದ್ದಿಸಲೇ ಒಮ್ಮೆ ಎನ್ನಿಸುತ್ತುತ್ತು..ನೀನೋ…ಮುಟ್ಟಿದರೆ ಮಾಸುವಷ್ಟು ಶುಭ್ರ ಮೃದುಮಲ್ಲಿಗೆ..ಹಿತವೆನಿಸುತ್ತಿತ್ತು ಸಾಂಗತ್ಯಸಿಕ್ಕರೆ ದಿನವೂ ಮುಡಿಯಬೇಕೆನಿಸುತ್ತಿತ್ತು.. ಈಗಲೂ ಅಲ್ಲೇ ನಿನ್ನ ವಾಸ್ತವ್ಯಅದೇ ಗಿಡ ಅದೇ ಬಳ್ಳಿಎಲ್ಲೆಡೆ ಹರಡಿ ಮೈತುಂಬಾ ಹೂಗಳ ಪರಿಮಳ ! ಆದರೆ ಈಗೀಗ ಯಾಕೋನೀನೇ ತಲೆನೋವಾಗಿರುವೆಯಲ್ಲ !ಮುಡಿಯುವುದಿರಲಿ ವಾಸನೆಯೂ ಸೇರದುಇಲ್ಲಿ ಬದಲಾಗಿದ್ದು ಘಮಲೋ ಭಾವವೋ ನಾನರಿಯೆಅಂತೂ ಅಂದು ಆಕರ್ಷಿತವಾಗಿದ್ದೆ ಇಂದು ತಿರಸ್ಕೃತವಾಯ್ತು.. ನಾನು […]

ಮೂಕ ಸಾಕ್ಷಿ

ಕವಿತೆ ಮೂಕ ಸಾಕ್ಷಿ ಸರೋಜಾ ಶ್ರೀಕಾಂತ್ ಇತ್ತೀಚೆಗೆ ಸುಣ್ಣವಿರದ ಗೋಡೆಯೂ ಸನಿಹ ಬರಗೊಡದುಬಣ್ಣಿಸುವ ಕಿವಿಯಾಗುವುದು ಬಿಟ್ಟು ವರ್ಷಗಳೇ ಆದವೇನು!? ನೆಪಕ್ಕಾದರೂ ಸಾಂತ್ವನದ ನುಡಿಗಳಾರೂ ಆಡಲಿಲ್ಲದಿನಂಪ್ರತಿ ಸಾಯೋರಿಗೆ ಅಳುವರಾರು ಅಂದರೆಲ್ಲ ಈಗೀಗ ಜೋತು ಬಿದ್ದ ಸೂರಿನ ಜಂತಿಗೂ ಜಿಗುಪ್ಸೆಸಂಕಷ್ಟದ ಮಾಳಿಗೆ ಬಿಟ್ಟು ಕಾಲನಡಿ ಅಡಗಿ ಮಾಯವಾಗುವುದೇ ಇಷ್ಟವಂತೆ ಇಲಿ ಬಿಡಿ,ಇರುವೆ ಜಿರಳೆಗಳ ಹಾವಳಿಯಾವುದೂ ಇಲ್ಲಿಲ್ಲಬರಿದಾದ ಡಬರಿಗೆ ಯಾವ ಸಪ್ಪಳದ ಖಬರಿಲ್ಲ….! ನಿದ್ರೆ ಇರದ ರಾತ್ರಿಗಳಲ್ಲೆಲ್ಲಾ ಹರಕು ಹಾಸಿಗೆಯಿಂದ ಹೊರ ಬರುತ್ತಲೇ ಇರುವ ಕಾಲುಗಳುಸುಳ್ಳಾಗಿಸುತ್ತವೆ ಗಾದೆ ಮಾತನ್ನು ನಿತ್ಯ ಒಂದಿಷ್ಟು […]

ಗುಟ್ಟು

ಕವಿತೆ ಗುಟ್ಟು ಎಸ್ ನಾಗಶ್ರೀ ಸಣ್ಣ ಊರಿನ ಪ್ರೇಮಿಗಳಪಾಡು ಹೇಳಬಾರದುರಂಗೋಲಿ ಗೆರೆಯಲ್ಲಿನಸಣ್ಣ ಮಾರ್ಪಾಡುಮೂಲೆಯಂಗಡಿಯ ಕಾಯಿನ್ನುಬೂತಿನನಿಮಿಷಗಳ ಲೆಕ್ಕಕಾಲೇಜು ಬಿಟ್ಟ ಕರಾರುವಕ್ಕುನಿಮಿಷ ಸೆಕೆಂಡುಯಾವ ಬಸ್ಸಿನ ದಾರಿಯಲಿಅಡ್ಡ ನಿಂತಳು ಪೋರಿಯಾರ ಮನೆಯ ಚಿತ್ರಾನ್ನತಿಂದುಂಡ ಕೈ ಘಮನಾಯಿಗೇಕೆ ಅಲ್ಲೇ ನಡೆದಾಟಕೆನ್ನೆಗುಳಿ ಹೆಚ್ಚು ಹೊತ್ತುಯಾರ ಮುಂದಿತ್ತುಬೆಳಿಗ್ಗೆ ಮುಡಿಯದ ಹೂಸಂಜೆ ಹೆರಳಿಗೆ ಬಂದದ್ದು ಹೇಗೆಂಬಸೂಕ್ಷ್ಮಗಳು ಇಲ್ಲಿನಗೋಡೆ, ಗಿಡ, ಮರ, ಬೇಲಿಗಳಿಗೆ ಸಲೀಸುಕಣ್ಣಲ್ಲೇ ತೂಕದ ಬಟ್ಟು ಹೊತ್ತುತಿರುಗುವ ತಕ್ಕಡಿಗಳುರಸ್ತೆಬದಿಗೆ ನಿರಪಾಯ ನಿಂತುಮನೆ ಹಿರಿಯರಿಗೆಸಂದೇಶ ಕಳಿಸಿಮಜಾ ನೋಡುತ್ತವೆ ಸಣ್ಣ ಊರಿನ ಹೆಂಗೆಳೆಯರಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆಪ್ರೀತಿಸಿದಾಗ ಬುದ್ಧಿ ಕಳೆಯದೆಜೋಪಾನ […]

ಸಾವು ಮಾತಾದಾಗ

ಕವಿತೆ ಸಾವು ಮಾತಾದಾಗ ವಿಶಾಲಾ ಆರಾಧ್ಯ ಭಯವೆನ್ನದಿರು ಕೊನೆಯೆನ್ನದಿರುಮೈಲಿಗೆ ಎನ್ನದಿರು ನನ್ನನುಹಗುರಾಗುವಿ ಮೃದುವಾಗುವಿಕೂಡಿದ ಕ್ಷಣದೊಳು ನನ್ನನು ಭವದೊಳು ಮಾಡಿದ ಪಾಪವತೊಳೆಯುವ ಹೊನಲು ನಾನುತರತರ ಮುಖವಾಡ ಹೊತ್ತವರಿಗೆಹೊಸ/ಕಳೆಯನು ಕೊಡುವೆ ನಾನು ಬಂಧು ಬಳಗವೇ ಹಿರಿದೆನ್ನದಿರುಎನಗಿಂ ಹಿರಿಯರ ನಾ ಕಾಣೆಸತಿ ಪತಿ ಸಂಸಾರ ಜೊತೆ ಮಮಕಾರನಾ ಬಂದರೆ ಅಲ್ಲಿಯೆ ಮಾಯೇ ಅಮ್ಮ ಅಪ್ಪ ಅಣ್ಣಾ ಅಕ್ಕಾಎನ್ನುವುದೆಲ್ಲಾ ಮೋಹಕೆಬಂದೊಡನೆಯೆ ನಾ ಕ್ಷಣಕರೆವರು ಹೆಣವೆಂದಾ ದೇಹಕೆ ————-

ಗಝಲ್

ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ

ಪ್ರೀತಿ ಹೊನಲು

ಕವಿತೆ ಶ್ರೀವಲ್ಲಿ ಶೇಷಾದ್ರಿ ಮನದ ಮಾತಿನ್ನು ಮುಗಿದಿಲ್ಲ ನಲ್ಲಮೆಲ್ಲನೆದ್ದು ಯಾಮಾರಿಸ ಬೇಡನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕಕೆಂಪು ಗುಲಾಬಿ ಗಂಧವಿದೆಯೆಂದುನೀ ಹೇಳದಿದ್ದರೂ ನಾ ಬಲ್ಲೆಗಂಡಸು ಹಾಗೆ ಬಲು ಗಡಸುಎಲ್ಲಿಂದ ಬಂದೀತು ನಯ ಸೊಗಸುಬೇಕೆಂದೆ ಮುಖ ಗಂಟಿಕ್ಕಿ ಮುನಿಸುಲಘು ಬಿಗು ಮುತ್ತುದುರಿದ ಮಾತುಕೋಪವಾರಿದಾಗ ಅಪರೂಪಕ್ಕೊಂದು ನಗುದೂರ ನಿಂತ ಬಾನಲ್ಲಿ ಮಿಂಚಂತೆಆಲಿ ಕಲ್ಲುಗಳ ಕಲ್ಲೆಂದರಾದೀತೆಧರೆ ತಬ್ಬಿದೊಡೆ ನೀರಾದಂತೆಪ್ರೀತಿ ಹೊನಲು ಹರಿವ ಬಾ ಇನಿಯ *************************

Back To Top