ಕವಿತೆ
ಸಾವು ಮಾತಾದಾಗ
ವಿಶಾಲಾ ಆರಾಧ್ಯ
ಭಯವೆನ್ನದಿರು ಕೊನೆಯೆನ್ನದಿರು
ಮೈಲಿಗೆ ಎನ್ನದಿರು ನನ್ನನು
ಹಗುರಾಗುವಿ ಮೃದುವಾಗುವಿ
ಕೂಡಿದ ಕ್ಷಣದೊಳು ನನ್ನನು
ಭವದೊಳು ಮಾಡಿದ ಪಾಪವ
ತೊಳೆಯುವ ಹೊನಲು ನಾನು
ತರತರ ಮುಖವಾಡ ಹೊತ್ತವರಿಗೆ
ಹೊಸ/ಕಳೆಯನು ಕೊಡುವೆ ನಾನು
ಬಂಧು ಬಳಗವೇ ಹಿರಿದೆನ್ನದಿರು
ಎನಗಿಂ ಹಿರಿಯರ ನಾ ಕಾಣೆ
ಸತಿ ಪತಿ ಸಂಸಾರ ಜೊತೆ ಮಮಕಾರ
ನಾ ಬಂದರೆ ಅಲ್ಲಿಯೆ ಮಾಯೇ
ಅಮ್ಮ ಅಪ್ಪ ಅಣ್ಣಾ ಅಕ್ಕಾ
ಎನ್ನುವುದೆಲ್ಲಾ ಮೋಹಕೆ
ಬಂದೊಡನೆಯೆ ನಾ ಕ್ಷಣ
ಕರೆವರು ಹೆಣವೆಂದಾ ದೇಹಕೆ
————-
ವಿಶಾಲಾ ಆರಾಧ್ಯ ಅವರ ಕವಿತೆ ಮಾರ್ಮಿಕವಾಗಿದೆ. ಅಭಿಸಾರಿಕೆಯ ಅಂತರಂಗದ ದಿಟ್ಟ ಮಾತಿಗಳು ಕಾವ್ಯದ ಲಯದಲ್ಲಿ ಸುಂದರವಾಗಿ ಮೂಡಿದೆ. ಅಬಿನಂದನೆಗಳು.