ಇನ್ನೂ ಎಷ್ಟು ದೂರ?
ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************
ಗಝಲ್
ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ […]
ಗಜಲ್
ನಿನ್ನ ಕಿರಿಗೆಜ್ಜೆ ಪಾದಗಳ ಸಪ್ಪಳವನ್ನ ಕಿವಿಗಳಷ್ಟೇ ಕೇಳು ವಂತಿರು ಗೆಳತಿ
ಒಲವು ಪಲಕುಗಳ ಮಾತುಗಳ ಬೇರೆಯಾರ ಎದೆಗೂ ಕೇಳಿಸದಿರು ಗೆಳತಿ
ಕಾವ್ಯ ಕಾರುಣ್ಯ
ಒದ್ದೆ ನೆಲದ ಘಮಲಾಗುವ,
ನದಿಯಗಲದ ತಂಪಾಗುವ;
ಕಡಲೊಡಲ ಉಪ್ಪಾಗುವ ನೀರಂತೆ ..
ಕವಿತೆ ಹುಟ್ಟುವಾಗ
ಕವಿತೆ ಕವಿತೆ ಹುಟ್ಟುವಾಗ ಅಬ್ಳಿ,ಹೆಗಡೆ ಸೂರ್ಯ,ಸಾಯುತ್ತಿದ್ದ.ಕಾಯುವಹಾಗಿಲ್ಲ,ತಿರುಗಿ ಹುಟ್ಟುವವರೆಗೆ.ಕತ್ತಲು ಕಳೆಯುವವರೆಗೆ.ಪ್ರಸವವೇದನೆ ತಾಯಿಗೆ–ಭಯ,ಆತಂಕ,ಸಂತಸಒಟ್ಟೊಟ್ಟಿಗೆ,ಹೊಟ್ಟೆಯೊಳಗೆಕೈ,ಕಾಲಾಡಿಸುವ ಪುಟ್ಟ-ಕವಿತೆ,ದೈತ್ಯ ಪ್ರಸವವಾದರೆ ಅಳಿವು,ಉಳಿವಿನ ಪ್ರಶ್ನೆ.ತಂದೆಯಾರೊ ಗೊತ್ತಿಲ್ಲ.ವ್ಯಭಿಚಾರಿಣಿ ಪಟ್ಟ ಗಟ್ಟಿಆಗುವ ಆತಂಕ,ಒಳಗೊಳಗೆ,ಅಸಾಧ್ಯ-ನೋವಿನಲ್ಲೂ ತಾಯ್ತನ-ದ ಖುಷಿ,ಅಪ್ಯಾಯಮಾನ.ಸುಖ ಪ್ರಸವ ಕತ್ತಲಲ್ಲಿ,ಕಣ್ತೆರೆಯಬೇಕು-ಮುದ್ದು ಕವಿತೆ,ಹುಟ್ಟುವಹೊಸ ಬೆಳಕಲ್ಲಿ.ತನ್ನ,ಪುಟ್ಟ,ಪಿಳಿ,ಪಿಳಿಕಣ್ಣುಗಳಿಂದ ನೋಡಬೇಕು,ನಿಚ್ಚಳ ಬೆಳಕಲ್ಲಿ,ಹೊಚ್ಚ ಹೊಸ ಜಗತ್ತನ್ನು.ಮುಗಿಲೆತ್ತರಕ್ಕೆ ಎದ್ದುನಿಲ್ಲಬೇಕು ನೀಳಕಾಯಳಾಗಿ.ತಾಯ್ತನದ ಸಾರ್ಥಕತೆಇರುವದೇ ಇಲ್ಲಿ.ಭಯ,ಆತಂಕ,ನೋವು,ಸಂತಸ ಎಲ್ಲದರಸಾರ್ಥಕತೆಯೂ ಇಲ್ಲೆ.ಕತ್ತಲಲ್ಲಿ ಹುಟ್ಟಿದಕವಿತೆಯಲ್ಲಿ. **************************
ಮಾಯಾಮೃಗ
ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ […]
‘ ರೂಮಿ ನಿನ್ನ ಸೆರಗಿನಲ್ಲಿ…. ‘
ಕಾರಣ
ನಮಗೆ ದುರುದ್ದೇಶವೇ ಇರಲಿಲ್ಲ
…… ಮೂರ್ಖ ಮನುಷ್ಯರಿಗೆ ಪ್ರೀತಿ ಅರ್ಥವಾಗುವುದಿಲ್ಲ;
ಗಜಲ್
ಪ್ರಕೃತಿಯ ಸಹಜ ಸುಂದರ ಸೌಂದರ್ಯವ ಆರಾದಿಸುವೆನು
ಅಂದಗೆಡಿಸೊ ಆಲೋಚನೆಯಲಿ ಸುರಿಬೇಡ ಬಣ್ಣ
ಮಾಯೆ
ಯಾರೊಳಗೆ
ಯಾರು
ಮಾಯೆ
ನಾನರಿಯೆ….
ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..
ತಾಯೇ,
ಎದೆಗೆ ತಟ್ಟಿದ ನೋವ
ತುದಿ ಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು