ಕವಿತೆ ಹುಟ್ಟುವಾಗ

ಕವಿತೆ

ಕವಿತೆ ಹುಟ್ಟುವಾಗ

ಅಬ್ಳಿ,ಹೆಗಡೆ

Blue Spiral Neon Light

ಸೂರ್ಯ,ಸಾಯುತ್ತಿದ್ದ.
ಕಾಯುವಹಾಗಿಲ್ಲ,
ತಿರುಗಿ ಹುಟ್ಟುವವರೆಗೆ.
ಕತ್ತಲು ಕಳೆಯುವವರೆಗೆ.
ಪ್ರಸವವೇದನೆ ತಾಯಿಗೆ–
ಭಯ,ಆತಂಕ,ಸಂತಸ
ಒಟ್ಟೊಟ್ಟಿಗೆ,ಹೊಟ್ಟೆಯೊಳಗೆ
ಕೈ,ಕಾಲಾಡಿಸುವ ಪುಟ್ಟ-
ಕವಿತೆ,ದೈತ್ಯ ಪ್ರಸವವಾದರೆ
‌ ಅಳಿವು,ಉಳಿವಿನ ಪ್ರಶ್ನೆ.
ತಂದೆಯಾರೊ ಗೊತ್ತಿಲ್ಲ.
ವ್ಯಭಿಚಾರಿಣಿ ಪಟ್ಟ ಗಟ್ಟಿ
ಆಗುವ ಆತಂಕ,
ಒಳಗೊಳಗೆ,ಅಸಾಧ್ಯ-
ನೋವಿನಲ್ಲೂ ತಾಯ್ತನ-
ದ ಖುಷಿ,ಅಪ್ಯಾಯಮಾನ.
ಸುಖ ಪ್ರಸವ ಕತ್ತಲಲ್ಲಿ,
ಕಣ್ತೆರೆಯಬೇಕು-
ಮುದ್ದು ಕವಿತೆ,ಹುಟ್ಟುವ
ಹೊಸ ಬೆಳಕಲ್ಲಿ.
ತನ್ನ,ಪುಟ್ಟ,ಪಿಳಿ,ಪಿಳಿ
ಕಣ್ಣುಗಳಿಂದ ನೋಡಬೇಕು,
ನಿಚ್ಚಳ ಬೆಳಕಲ್ಲಿ,
ಹೊಚ್ಚ ಹೊಸ ಜಗತ್ತನ್ನು.
ಮುಗಿಲೆತ್ತರಕ್ಕೆ ಎದ್ದು
ನಿಲ್ಲಬೇಕು ನೀಳಕಾಯಳಾಗಿ.
ತಾಯ್ತನದ ಸಾರ್ಥಕತೆ
ಇರುವದೇ ಇಲ್ಲಿ.
ಭಯ,ಆತಂಕ,ನೋವು,
ಸಂತಸ ಎಲ್ಲದರ
ಸಾರ್ಥಕತೆಯೂ ಇಲ್ಲೆ.
ಕತ್ತಲಲ್ಲಿ ಹುಟ್ಟಿದ
ಕವಿತೆಯಲ್ಲಿ.

**************************

Leave a Reply

Back To Top