ಗಜಲ್
ಕೆ.ಸುನಂದಾ.
ಅಂತರಂಗದೊಳು ಪ್ರೀತಿ ಇಲ್ಲದಿದ್ದರೆ ಮೆತ್ತಬೇಡ ಬಣ್ಣ
ಆತ್ಮೀಯ ಭಾವನೆಗಳೇ ಸುಳಿಯದಿರೆ ಹಾಕಬೇಡ ಬಣ್ಣ
ಕುಹಕತನ ಬುದ್ಧಿ ಇದ್ದು ಬಾಹ್ಯದೊಳಗೆ ಮಂದಸ್ಮಿತವೇಕೆ
ಕೇಡನ್ನೇ ಬಯಸುವ ಆಸೆಯಿಂದ ಹಚ್ಚಬೇಡ ಬಣ್ಣ
ಅನೀತಿ ಅನ್ಯಾಯಗಳ ಮಾಡಿ ಮುಚ್ಚಿ ಹಾಕುವ ಹುನ್ನಾರವೆಕೆ
ಸುಂದರ ಭಾವನೆಗಳನೆಲ್ಲ ಅಂದಗೆಡಿಸಲು ಬಳಿಬೇಡ ಬಣ್ಣ
ಅಧಿಕಾರ ಅಂತಸ್ತು ಪ್ರಶಂಸೆಗೆ ಬೆನ್ನು ಹತ್ತಿ ಕಂಡದ್ದಾಯಿತು
ದಾಹ ತೀರದೆ ಅಮಾಯಕರಿಗೆ ಹುಯ್ಯಬೇಡ ಬಣ್ಣ
ಪ್ರಕೃತಿಯ ಸಹಜ ಸುಂದರ ಸೌಂದರ್ಯವ ಆರಾದಿಸುವೆನು
ಅಂದಗೆಡಿಸೊ ಆಲೋಚನೆಯಲಿ ಸುರಿಬೇಡ ಬಣ್ಣ
ನಿರ್ಮಲ ಮನದೊಳು ನಿನ್ನವಳಾಗಿ ಬಂದಿರುವೆನು ನಲ್ಲಾ
ಅಂದ ಚಂದದ ಮನದಂಗಳದ ಚಿತ್ರಕ್ಕೆ ಕಪ್ಪು ಹಚ್ಚಿ ನಗಬೇಡ ಬಣ್ಣ
ನಂದೆಯ ರಂಗುರಂಗಾದ ಕನಸುಗಳ ಮುಚ್ಚಿ ಹಾಕಲಾರೆ ನೀನು
ಸ್ವಚ್ಛಂದದ ಬಾನಲಿ ಹಾರೊ ಹಕ್ಕಿಗೆ ತಿಕ್ಕಬೇಡ ಬಣ್ಣ
***************************************************************