ಮಾಂತ್ರಿಕ ಬದುಕು
ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಬರೆಯಬೇಕಾದ ಹಾಡು…
ಇತಿಹಾಸದ ಯಾವ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ ಹಿಡಿದು
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?
ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ
ಮುಸ್ಸಂಜೆ
ಕೊರಡಿನ ಆಸನ ಕೂಡಾ
ನಿನ್ನ ತೋಳ ದಿಂಬಿಗೆ
ನಾ ತಲೆ ಆನಿಸಲು
ರೇಶಿಮೆ ಸುಪ್ಪತ್ತಿಯ
ಸ್ಪರ್ಶ ಆಗಿದೆ
ಮಾತು ಮತ್ತು ಹೂ
ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು […]
ನಾನೊಂದು… ದ್ವಂದ್ವ.!?
ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..!
ಕಾರಣ ನಾ ದ್ವಂದ್ವ.!!
ಹಾಗಾಗಿ ಎಚ್ಚರದಿಂದ ಇರು ನೀ
ನನಗೆ ಅಪರಿಮಿತ ಮುಖವಾಡಗಳಿವೆ!!!
ನೆತ್ತರ ಚಿತ್ತಾರ
ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು
ಪ್ರಭುವೂ ಪಾರಿವಾಳವೂ
ಪ್ರಭುವಿಗೆ ಸಿಟ್ಟು ಬಂತು
ದೊರೆ ಬಂದರೂ ದೂರ ಹೋಗವು
ತೊಳೆದರೂ ತೊರೆಯವು ವಾಸನೆ
ಶತಮಾನಗಳ ಕಮಟು ; ಸಾಯಿಸಿಬಿಡಿ
ಹೇಳು ಸಿವನೆ
ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು […]
ಗಜಲ್
ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ […]