ಕವಿತೆ
ಮುಸ್ಸಂಜೆ
ಭಾರತಿ ರವೀಂದ್ರ
ಮುಸ್ಸಂಜೆಯ ಆ ದಿನಗಳು
ಅದೇಕೋ ಕಾಡ್ತಾವೆಹೀಗೆ…
ನಿನ್ನೊಡನೆ ಕೂಡಿ
ತಂಪಾದ ನೆರಳಲಿ ಕುಳಿತು,
ಜುಳು ಜುಳು ಹರಿಯೋ
ನದಿಯ ಸಂಗೀತ ನಮ್ಮ
ಒಲವಿಗಿದೆ
ಕೊರಡಿನ ಆಸನ ಕೂಡಾ
ನಿನ್ನ ತೋಳ ದಿಂಬಿಗೆ
ನಾ ತಲೆ ಆನಿಸಲು
ರೇಶಿಮೆ ಸುಪ್ಪತ್ತಿಯ
ಸ್ಪರ್ಶ ಆಗಿದೆ
ನಿನಗಾಗಿ ಕಾಯೋ
ಈ ಹಸಿ ಕಣ್ಣುಗಳ
ಜೊತೆ ಪ್ರಕೃತಿ ಕೂಡಾ
ಮೌನ ವಾಗಿ ಹೋಗಿದೆ
ನಕ್ಕು ನಗಿಸಿ ಮನದಾಸೆ
ಅರಳಿಸೋ ನನ್ನೊಲವೆ
ಹಿಂದಿರುಗಿ ಬರಲಿ ಆ
ಹೊನ್ನಿನ ದಿನಗಳೆಲ್ಲ
ಕಾಯುವೆ ನಿನಗಾಗಿ
ಕೊನೆಯುಸಿರೋವರೆಗೂ..
*****************************