ಕಾವ್ಯಯಾನ
ಇಂತಿಷ್ಟೇ ಮನವಿ. ಮಧುಸೂದನ ಮದ್ದೂರು ಕನಸಲು ನೀ ಕಾಡುವೆ ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ… ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ.. ಬೆನ್ನಟ್ಟುತ್ತ ಬೆವರುತಾ ಬೇಸರಿಸಿ ಕೂರಲು ಸೋತನೆಂಬ ಅಪಮಾನದ ಕುದಿ… ಕುದಿ ಹೃದಯವಿದು ಕಾಯಿಸದೇ ಬಂದು ಬಿಡು ನನ್ನದೆಗೆ ನಿನ್ನುಡುಗ ಗಿಡುಗ ಇನ್ನೂ ಕಾಯಲಾರ… ಕಾದು ಸಂಭ್ರಮಿಸಲು ವಯಸ್ಸು ಮೀರಿದೆ ಬೆಳ್ಳಿಗೂದಲು ಇಣುಕಿವೆ.. ಇಣುಕಿದ ಬೆಳ್ಳಿಗೂದಲಿನಲ್ಲೂ ನಿನ್ನ ಬಂಗಾರದ ನೆನಪು ಒಸರಿವೆ.. ಬಂದು ಬಿಡು ಈ ಪ್ರೇಮ […]
ಕಾವ್ಯಯಾನ
ಸಮಾಜ ಕೆ.ಸುಜಾತಾ ಗುಪ್ತ ಬಗ್ಗಿದವನ ಬೆನ್ನಿಗೊಂದು ಗುದ್ದು ಇರಲು ಹಾಗೆ ಮತ್ತೊಂದು ಗುದ್ದು ಇದಾಗಿದೆ ಪ್ರಸ್ತುತ ಸಮಾಜದ ನೀತಿ ಮೂರ್ಖತನದ ಪರಮಾವಧಿ ದಾಟಿರಲು ಶಾಂತಿಯ ತತ್ವವ- ಮಹತ್ವವ ಅರಿವ ಮನಗಳುಹೆಣಗಳಾಗಿವೆ. ಈಗೆಲ್ಲಿದೆ..ಶಾಂತಿ ಗೆ ತಾಣ!? ಎಲ್ಲಿದೆ ಶಾಂತಿಗೆ ಪ್ರಾಮುಖ್ಯತೆ.. ಬುದ್ಧನನ್ನು ನೆನೆಯೆ ಪೆದ್ದನೆನುವರು.. ‘ ಶಾಂತಿ ‘ ಅಸಹಾತೆಯಕತೆಯ ಚಿಹ್ನೆ ಎನುವರು.. ಕಲ್ಪನೆಯಲ್ಲಿ ‘ಶಾಂತಿ ಮಂತ್ರ’ ಚಂದವೋ ಚಂದ.. ವಾಸ್ತವದಲ್ಲಿ ಎಲ್ಲವೂ ಮಿಥ್ಯವೋ ಮಿಥ್ಯ… ********
ಕಾವ್ಯಯಾನ
ಮೊಗ್ಗುಗಳು ತುಟಿ ಬಿಚ್ಚೆ ಕೆ.ಸುಜಾತ ಗುಪ್ತ ನಾ ಪ್ರಕೃತಿ ಪ್ರೇಮಿಯಾಗಿ ಸೂಕ್ಷ್ಮವಾಗಿ ಗಮನಿಸೆ ಪ್ರಕೃತಿಯ ಸೊಬಗು ನೂರ್ಮಡಿ ಹೆಚ್ಚಿತ್ತು… ಭಾವುಕತೆಯಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ನನ್ನ ನಾ ಮರೆತು ಲಲ್ಲಗೆರೆಯಲು ಹರುಷದಿ ಸ್ಪಂದಿಸಿ ನಸು ನಕ್ಕಿತ್ತು ಪ್ರಕೃತಿ.. ಬಿರಿದು ಪರಿಮಳವ ಸೂಸಲು ರವಿ ಕಿರಣದ ಸ್ಪರ್ಶದ ನಿರೀಕ್ಷೆಯಲ್ಲಿರಲು ಮೊಗ್ಗುಗಳು, ಮಂಜಿನ ಮುಂಜಾನೆಯಲಿ ಭೂದರನ ಮರೆಯಲಿ ರಾಜೀವ ಸಖ ಇಣುಕೆ, ಸಜ್ಜಾಗಿ ನಿಂತು ವಯ್ಯಾರದೆ ಅವನೆಡೆಗೆ ಓರೆನೋಟ ಬೀರಿದ ಮೊಗ್ಗುಗಳು ನಸು ನಾಚಿ ತುಟಿ ಬಿಚ್ಚಿ ಲಯಬದ್ದವಾಗಿ …ಹಾಯ್ […]
ಕಾವ್ಯಯಾನ
ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು […]
ಕಾವ್ಯಯಾನ
ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… […]
ಕಾವ್ಯಯಾನ
ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ ಮೂಗಪ್ಪ ಗಾಳೇರ ಅನಾಥ ಶವವಾಗಿ ಮಲಗಿರುವ ನನ್ನ ಒಂದೊಂದು ಕನಸುಗಳು ಇನ್ನೂ ಉಸಿರಾಡುತ್ತಿವೆ ಎಂದರೆ ನೀ ಬಿಟ್ಟು ಹೋದ ನೆನಪುಗಳು ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ| ಉಸಿರಾಟಕ್ಕೂ ಉಸಿರಿಗು ಕನಸುಗಳಿಗು ನೆನಪುಗಳಿಗು ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು ನಾನೆಟ್ಟ ಹೂವಿನ ಗಿಡಗಳು ನೂರಾರು ಜಾತಿಯದ್ದಾಗಿದ್ದರೂ ಅವುಗಳಿಂದ ಸೂಸುವ ಕಂಪು ಒಂದೆಂದು ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ ತಿರುಗಿಸಿ ಹಿಂದಿಟ್ಟರೆ […]
ಕಾವ್ಯಯಾನ
ಸೀರೆ ಮತ್ತು ಬಟ್ಟೆ ಡಾ.ಗೋವಿಂದ ಹೆಗಡೆ ಸೀರೆ ಮತ್ತು ಬಟ್ಟೆ ಆದರೂ ಈ ಸೀರೆ ಎಂಥ ಯಕ್ಷಿಣಿ! ಮೈತುಂಬ ಹೊದ್ದ ಸೆರಗಾಗಿ ಗಜಗೌರಿ ಎನಿಸಲೂ ಸೈ ಮಾಟದ ಬೆನ್ನು ಸೊಂಟ ಆಕರ್ಷಕ ಹೊಕ್ಕುಳ ಸುಳಿ ತೋರಿಸಿ ಹಸಿವು ಕೆರಳಿಸಲೂ ಸೈ ‘ನಾವೇನು ಸೀರೆ ಉಟ್ಟಿಲ್ಲ’ ಎಂದೆಲ್ಲ ಪೌರುಷ ತೋರಿಸುವಂತಿಲ್ಲ ಈಗ ನೀರೆಗೂ ಸೀರೆ ಕಡ್ಡಾಯವಲ್ಲ! ಆಯ್ಕೆಗಳಿವೆ ಅವಳಿಗೆ ಆದರೂ ‘ಸೆರಗು ಸೊಂಟಕ್ಕೆ ಸುತ್ತಿ’ ‘ವೀರಗಚ್ಚೆ ಹಾಕಿ’ ಎಂದೆಲ್ಲ ನಾರೀಶಕ್ತಿಯನ್ನು ಬಣ್ಣಿಸುವುದುಂಟು ಗಂಡ ಅರ್ಧ ಸೀರೆಯನ್ನು ಹರಿದು ಸುತ್ತಿಕೊಂಡು […]
ಕಾವ್ಯಯಾನ
ಶಿವನ ನೆನೆಯಲೆಂದು ರೇಖಾ ವಿ. ಕಂಪ್ಲಿ ಸಾವಿರದ ಮೆಟ್ಟಿಲ ಮೇಲೊಂದು ಕನಸು ಕಾಣುವವನ ಭಾವನೆಯ ಮೇಲೊಂದು ನನಸು ಇಟ್ಟನು ದೇವಾ ಹೆಣ್ಣ ಮೇಲೊಂದು ಸೊಗಸು ಮಠ ಒಂದು ಕಟ್ಟಲಿಲ್ಲ ಗಂಡು ಮೇಲೊಂದು ಮನಸು ಆಸೆಗಳ ಅರಿಬಿಟ್ಟ ಅಂಚಿಕೆಯ ಮಾಡದೇ ಅನುದಿನವು ಅವನ(ದೇವರ) ನೆನೆಯಲೆಂದು ಪಾದುಕೆಗಳಿಗೊಂದು ಹೊದುಕೆ ಕೊಟ್ಟವನು ಮನಸೆಂಬ ಹೊದುಕೆಗೆ ಆಳು ನೆನಪುಗಳ ನಿಟ್ಟು ತನ್ನ ಮುಟ್ಟುವ ಗಟ್ಟಿ ಗುಟ್ಟಾಗು ಎಂದು ಮೆಟ್ಟು ಭಾವನೆಯ ನಿನ್ನ ಪಟ್ಟು ಮೀರೆಂದು ತಟ್ಟು ಶಿವನೆದೆಯ ಕರುಣಾಂತರಂಗವನು ಅವನೊಲುಮೆಯ ಸಾಗರದ ಶರಧಿಯನು […]
ಕಾವ್ಯಯಾನ
ಅಡುಗೆ ಮನೆಯೆಂದರೆ ಸ್ಮಿತಾ ರಾಘವೇಂದ್ರ ಅಡುಗೆ ಮನೆಯೆಂದರೆ ಯುದ್ಧಕ್ಕೆ ಮೊದಲು ಎಲ್ಲವೂ ಶಾಂತವೇ ಯುದ್ದ ಮುಗಿದ ಮೆಲೂ… ಅನಿವಾರ್ಯ ಮತ್ತು ಅವಶ್ಯಕತೆ- ಸಂಭವಿಸುವ ಮುಂಚಿನ ಸಮಜಾಯಿಶಿ. ಅಣಿಗೊಳ್ಳಲು ಹೆಚ್ಚಿನ ತಯಾರಿ ಏನಿಲ್ಲ ಅತ್ತಿಂದಿತ್ತ ತಿರುಗಾಡುತ್ತಲೇ ಮಾತು ಒಗೆದಂತೆ- -ಅಣಿಮಾಡುವ ರಣರಂಗ. ನುಗ್ಗೆಕಾಯಿ ಸಪೂರ ದಂತವರು, ಹೊಟ್ಟೆ ಭಾರದ ದೊಣ್ಣ ಮೆಣಸಿನಂತವರು ಕೆಂಪು ಗಲ್ಲದ ಟೊಮೆಟೊ ಅಂತವರು, ಸೊಪ್ಪಿನಂತೆ ಉದ್ದ ಕೂದಲಿನವರು, ನಾ ನಾ ವಿಧದ ಸೈನಿಕರ ಗುಂಪು, ರಾಜನ ಆಗಮನವನ್ನೇ ಎದುರು ನೋಡುತ್ತ.. ಯಾರು ಮೊದಲು ಮಡಿಯಬಹುದು!? […]
ಕಾವ್ಯಯಾನ
ಗೆಳತಿ ನಕ್ಕುಬಿಡು ಮೂಗಪ್ಪ ಗಾಳೇರ ನಾನು ನೋಡಿದ ಹುಡುಗಿಯರೆಲ್ಲಾ….. ಪ್ರೇಯಸಿಯರಾಗಿದ್ದರೆ ನಾನು ಗೀಚಿದ ಸಾಲುಗಳೆಲ್ಲಾ ಕವಿತೆಗಳಾಗಬೇಕಿತ್ತಲ್ಲ! ದಡ್ಡಿ….. ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ ಗೊತ್ತಿದ್ದಂತೆ ಕಾಣುತ್ತಿಲ್ಲ! ಕತ್ತಲನ್ನು ನುಂಗಿ ಬೆಳಕಾಯಿತೋ…! ಬೆಳಕನ್ನು ನುಂಗಿ ಕತ್ತಲಾಯಿತೋ…! ನೀನು ನನ್ನ ಜೊತೆ ಇಟ್ಟ ಒಂದೊಂದು ಹೆಜ್ಜೆಯೂ ಹಳೆ ಸಿನಿಮಾದ ಹಾಡುಗಳಂತೆ ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ ಒಮ್ಮೊಮ್ಮೆ ಎದೆಭಾರ ಆದಾಗ ಕವಿತೆಯ ಸಾಲು ಬೇರೆಯಾಗಬಹುದು ಕವಿತೆ ಮಾತ್ರ ಎಂದೆಂದೂ ನೀನೆ ಒಂದೊಮ್ಮೆ ನನ್ನ ಕವಿತೆಯ ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ ಅದು […]