ವಿಭಿನ್ನ
ರೇಶ್ಮಾ ಗುಳೇದಗುಡ್ಡಾಕರ್
ಕೋಟೆ ಕಟ್ಟುವೆ ಭಾವನೆಗಳ ನಡುವೆ
ಎಂದವ ಹೆಣವಾಗಿ ಬಿದ್ದನು
ಒಡೆದ ಕನಸುಗಳ ಅವಶೇಗಳ
ಮಧ್ಯೆ ….
ಮಾನವತೆಯ ಹರಿಕಾರ
ನೋಂದಮನಗಳ ಗುರಿಕಾರ ಎಂದು
ನಕಲಿ ಫೋಸು ಕೊಟ್ಟವನು
ಎಡಬಿಡದೆ ಭಾಷಣಗಳ
ಸುರಿಮಳೆಗೈದವನು ಬಹಳ ದಿನ
ಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ ….
ಮಾತಿನಲ್ಲೆ ಬಂದೂಕು ಇಟ್ಟವನು
ಮುಗ್ದ ಮಂದಿಯ ಚಿತ್ತ ಕದಲಿದನು
ಅನಾಯಾಸವಾಗಿ ಗೆಲುವು ಪಡೆಯಲು
ನಿರಂತರವಾಗಿ ಹೆಣಗುತಿರುವನು
ಗುಂಪುಗಳ ನಡುವೆ ….
ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರು
ಬದುಕಿನ ಸಾರವ ಹೊತಿಟ್ಟು
ಮುಖವಾಡಗಳಿಗೆ ಬಣ್ಣ ಹಚ್ಚುವರು
ಸರಳತೆಯೇ ಉಸಿರು ಎಂದು
ಆದರ್ಶಗಳೇ ಬದುಕು ಎಂದು
ಅಹಿಂಸೆಯೇ ದೇವರೆಂದವರು
ಇಂದು ಎಂದೆಂದು “ಮಹಾತ್ಮ “
ನೇ ಅಗಿರುವರು ……
*******
Nice