ಕಾವ್ಯಯಾನ

ಮೊಗ್ಗುಗಳು ತುಟಿ ಬಿಚ್ಚೆ

Red and Purple Tulips

ಕೆ.ಸುಜಾತ ಗುಪ್ತ

ನಾ ಪ್ರಕೃತಿ ಪ್ರೇಮಿಯಾಗಿ
ಸೂಕ್ಷ್ಮವಾಗಿ ಗಮನಿಸೆ
ಪ್ರಕೃತಿಯ ಸೊಬಗು
ನೂರ್ಮಡಿ ಹೆಚ್ಚಿತ್ತು…
ಭಾವುಕತೆಯಲಿ
ಪ್ರಕೃತಿಯ ಮಡಿಲಲ್ಲಿ
ಕುಳಿತು ನನ್ನ ನಾ ಮರೆತು
ಲಲ್ಲಗೆರೆಯಲು ಹರುಷದಿ
ಸ್ಪಂದಿಸಿ ನಸು ನಕ್ಕಿತ್ತು ಪ್ರಕೃತಿ..
ಬಿರಿದು ಪರಿಮಳವ ಸೂಸಲು
ರವಿ ಕಿರಣದ ಸ್ಪರ್ಶದ ನಿರೀಕ್ಷೆಯಲ್ಲಿರಲು ಮೊಗ್ಗುಗಳು,
ಮಂಜಿನ ಮುಂಜಾನೆಯಲಿ
ಭೂದರನ ಮರೆಯಲಿ
ರಾಜೀವ ಸಖ ಇಣುಕೆ,
ಸಜ್ಜಾಗಿ ನಿಂತು ವಯ್ಯಾರದೆ
ಅವನೆಡೆಗೆ ಓರೆನೋಟ
ಬೀರಿದ ಮೊಗ್ಗುಗಳು
ನಸು ನಾಚಿ ತುಟಿ ಬಿಚ್ಚಿ ಲಯಬದ್ದವಾಗಿ
…ಹಾಯ್ …ಎಂದಾಗ,
ಹರುಷದೆ ರವಿ ಅಪ್ಪಿ ಮುತ್ತಿಡಲು
ರವಿ ಕರಗಳ ಆಲಿಂಗನದಿ
ಬಿರಿಯುತ್ತಿದ್ದ ಮೊಗ್ಗುಗಳು
ಪ್ರೇಮ ಕಾವ್ಯಕೆ ಮುನ್ನುಡಿಯ
ಬರೆಯುವಂತೆ ಭಾಸವಾಯ್ತು.

Leave a Reply

Back To Top