ಶಿವನ ನೆನೆಯಲೆಂದು
ರೇಖಾ ವಿ. ಕಂಪ್ಲಿ
ಸಾವಿರದ ಮೆಟ್ಟಿಲ ಮೇಲೊಂದು ಕನಸು ಕಾಣುವವನ
ಭಾವನೆಯ ಮೇಲೊಂದು ನನಸು
ಇಟ್ಟನು ದೇವಾ ಹೆಣ್ಣ ಮೇಲೊಂದು ಸೊಗಸು
ಮಠ ಒಂದು ಕಟ್ಟಲಿಲ್ಲ ಗಂಡು ಮೇಲೊಂದು ಮನಸು
ಆಸೆಗಳ ಅರಿಬಿಟ್ಟ ಅಂಚಿಕೆಯ ಮಾಡದೇ
ಅನುದಿನವು ಅವನ(ದೇವರ) ನೆನೆಯಲೆಂದು
ಪಾದುಕೆಗಳಿಗೊಂದು ಹೊದುಕೆ ಕೊಟ್ಟವನು
ಮನಸೆಂಬ ಹೊದುಕೆಗೆ ಆಳು ನೆನಪುಗಳ ನಿಟ್ಟು
ತನ್ನ ಮುಟ್ಟುವ ಗಟ್ಟಿ ಗುಟ್ಟಾಗು ಎಂದು
ಮೆಟ್ಟು ಭಾವನೆಯ ನಿನ್ನ ಪಟ್ಟು ಮೀರೆಂದು
ತಟ್ಟು ಶಿವನೆದೆಯ ಕರುಣಾಂತರಂಗವನು
ಅವನೊಲುಮೆಯ ಸಾಗರದ ಶರಧಿಯನು
*****