ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂತಿಷ್ಟೇ ಮನವಿ.

Stone Artwork

ಮಧುಸೂದನ ಮದ್ದೂರು

ಕನಸಲು ನೀ ಕಾಡುವೆ
ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ…
ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು
ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ..
ಬೆನ್ನಟ್ಟುತ್ತ ಬೆವರುತಾ
ಬೇಸರಿಸಿ ಕೂರಲು
ಸೋತನೆಂಬ
ಅಪಮಾನದ ಕುದಿ…
ಕುದಿ ಹೃದಯವಿದು
ಕಾಯಿಸದೇ ಬಂದು ಬಿಡು
ನನ್ನದೆಗೆ ನಿನ್ನುಡುಗ ಗಿಡುಗ
ಇನ್ನೂ ಕಾಯಲಾರ…
ಕಾದು ಸಂಭ್ರಮಿಸಲು
ವಯಸ್ಸು ಮೀರಿದೆ
ಬೆಳ್ಳಿಗೂದಲು ಇಣುಕಿವೆ..
ಇಣುಕಿದ ಬೆಳ್ಳಿಗೂದಲಿನಲ್ಲೂ
ನಿನ್ನ ಬಂಗಾರದ ನೆನಪು ಒಸರಿವೆ..
ಬಂದು ಬಿಡು ಈ ಪ್ರೇಮ ಫಕೀರನ ಎದೆಯೊಮ್ಮೊಮ್ಮೆ ಹೊಕ್ಕಿಬಿಡು
ಹಳೆಯ ನೆನಪುಗಳ ತೂರಿಬಿಡು..
ಇಂತಿಷ್ಟೆ ಮನವಿ…..

******

About The Author

Leave a Reply

You cannot copy content of this page