Category: ಕಾವ್ಯಯಾನ

ಕಾವ್ಯಯಾನ

ಡಾ. ಪುಷ್ಪಾ ಶಲವಡಿಮಠ-ಧವಳ ಶಿಖರ

ಅವ್ವಾ!
ನಿನ್ನ ಪ್ರೀತಿಯ
ಸವಿಯುoಡು
ಬಿಸಿಲ ಬದುಕಿಗೆ
ಗರಿ ಮೂಡಿದೆ.

ನನ್ನ ನೀಳ ಕೂದಲ
ಸಿಕ್ಕು ಬಿಡಿಸಿ ಬಾಚಿ
ಮಮತೆಯ ಮಲ್ಲಿಗೆ ಮುಡಿಸಿದಾಗ
ಗುಳಿ ಕೆನ್ನೆಯಲ್ಲಿ ಇಣುಕಿದೆ
ಲಜ್ಜೆಯ ಭಾಷೆ

ಅವ್ವಾ!
ನೀನಿತ್ತ ಬಾಳ ಬುತ್ತಿ
ನಾಳೆಗಾಗಿಯೂ ಕಾಯ್ದಿಟ್ಟಿರುವೆ
ನಿನ್ನ ಮಡಿಲ ತೊಟ್ಟಿಲಲ್ಲಿ ಮಲಗಿದಾಗ
ನೀನು ಬೆರಳಿಂದ ತಲೆ ತಟ್ಟುತ್ತ
ಮೌನವಾಗಿ ಹಾಡಿದ ಜೋಗುಳ
ಎದೆಯಲ್ಲಿ ಬಚ್ಚಿಟ್ಟಿರುವೆ

ಅವ್ವಾ!
ನಾ ನಡೆದಷ್ಟು ದಾರಿಯ
ನೀ ತೋರಿದೆ
ಬದುಕು ಮುಕ್ಕಾಗದಂತೆ
ಬದುಕುವ ಕಲೆಯ ಹೇಳಿಕೊಟ್ಟೆ
ಬೇಸತ್ತು ಬಂದಾಗ ಮಡಿಲು ಕೊಟ್ಟೆ

ಅವ್ವಾ!
ನೀ ಅಂದರss
ಹತ್ತಿಯ ಹೂವಂಗss
ಇರು ನನ್ನ ನೆತ್ತಿಯ ಮ್ಯಾಗ
ಧವಳಶಿಖರ ಗಿರಿಯಂಗss

ಅವ್ವಾ!
ನೀ
ನನ್ನ
ಅವ್ವಾ.

ಶರಣಪ್ಪ ತಳ್ಳಿ ಕುಪ್ಪಿಗುಡ್ಡ- ನಾಕು ತಾವಿನ ತಿರುವು

ಕಾವ್ಯ ಸಂಗಾತಿ

ನಾಕು ತಾವಿನ ತಿರುವು

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ಮಳೆ ಬಿಸಿಲು .. 

ಕಾವ್ಯ ಸಂಗಾತಿ

ಮಳೆ ಬಿಸಿಲು ..

ಡಾ.ವಿಜಯಲಕ್ಷ್ಮೀ ಪುಟ್ಟಿ

ಸಂತೆಬೆನ್ನೂರು ಫೈಜ್ನಟ್ರಾಜ್- ದ್ವಿಪದಿಗಳು

ಕಾವ್ಯ ಸಂಗಾತಿ

ದ್ವಿಪದಿಗಳು

ಸಂತೆಬೆನ್ನೂರು ಫೈಜ್ನಟ್ರಾಜ್

ರೋಹಿಣಿ ಯಾದವಾಡ ಕವಿತೆ-ನಿನ್ನಲ್ಲಿ ನಾನು

ನಾನು ಕವಯತ್ರಿ ನೀನು ವಸ್ತು
ನಾನು ಲೇಖನಿ ನೀನು ಪುಸ್ತಕ
ನಾನು ವೀಣೆ ನೀನು ತಂತಿ
ಸಾನುರಾಗದಿ ಹಾಡುವಾ…

ನಾನು ರಾಗ ನೀನು ತಾಳ
ನಾನು ರಸ ನೀನು ಲಯ
ನಾನು ಹಾಡು ನೀನು ಸ್ವರ
ಅನುರಾಗದಿ ಸೇರುವಾ…

ನಾನು ಹೂ ನೀನು ಕಂಪು
ನಾನು ತಾರೆ ನೀನು ಬಾನು
ನಾನು ಶಶಿ ನೀನು ರವಿ
ಹೊಂಗಿರಣವ ಬೀರುವಾ…

ನಾನು ಹಗಲು ನೀನು ಇರುಳು
ನಾನು ಮೌನಿ ನೀನು ಧ್ಯಾನಿ
ನಾನು ಜೀವ ನೀನು ಉಸಿರು
ಸಮರಸದಿ ಬಾಳುವ…

ನಾನು ಗೆಜ್ಜೆ ನೀನು ಹೆಜ್ಜೆ
ನಾನು ಮಳೆ ನೀನು ಇಳೆ
ನಾನು ಶೃತಿ ನೀನು ಸೆಲೆ
ಅನುಬಂಧದಿ ಬೆರೆಯುವಾ.

Back To Top