ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ಮಳೆ ಬಿಸಿಲು .. 

ಕಾವ್ಯ ಸಂಗಾತಿ

ಮಳೆ ಬಿಸಿಲು .. 

ಡಾ.ವಿಜಯಲಕ್ಷ್ಮೀ ಪುಟ್ಟಿ

ಮಳೆಗೂ ಬಿಸಿಲಿಗೂ ಪ್ರೀತಿ 
ಹೊಂದದಿದ್ದರೂ 
ಅವುಗಳ ರೀತಿ-ನೀತಿ 

ಜೋರಾಗಿ  ಸುರಿದ ರಣ ಮಳೆ
 ಕ್ಷಣಮಾತ್ರದಲ್ಲಿ  ಒಣಗಿಸುವ 
ಬಯಲ ಬಿಸಿಲು ಸೆಣೆಸುವ  ಶಾಖ 

ಭೋರೆಂದು ಸುರಿವ ಮಳೆಗೆ 
ಬಿಸಿಲ ಜೊತೆಯಾಟ 
ಕಾಮನಬಿಲ್ಲಿನ ಮಾದಕ ನೋಟ 
ಭಾವ ರಸದೂಟ ಮನ-ಮನಗಳ 
ಸುಳಿ ಕೂಟ 

ಬಿಸಿಲಿಗಿಂತ ಮಳೆ ದೊಡ್ಡದು? 
 ಸುರಿದರೆ ಮಳೆಯು 
 ನೆನೆವುದು ಬಿಸಿಲು 
ಬೇಕು ಜೀವ ಸಂಕುಲಕ್ಕೆ 
ಎರಡರ ಒಡಲು
  ಸಮೃದ್ಧ ಮಳೆ ಚೂರುಚೂರು 
ಬಿಸಿಲ ವರತೆ 
ಹೊಸ ಜೀವನ  ಕೊನರಿ  
ಮರೆವುದು ಕೊರತೆ


One thought on “ಡಾ.ವಿಜಯಲಕ್ಷ್ಮೀ ಪುಟ್ಟಿ ಕವಿತೆ-ಮಳೆ ಬಿಸಿಲು .. 

Leave a Reply

Back To Top