ಜೀವನ್ಮುಕ್ತಿ ಕವಿತೆ-ಡಾ ಶಶಿಕಾಂತ ಪಟ್ಟಣ

ಕಾವ್ಯ ಸಂಗಾತಿ

ಜೀವನ್ಮುಕ್ತಿ

ಡಾ ಶಶಿಕಾಂತ ಪಟ್ಟಣ

ದಿನವ ನೂಕಿ ವರ್ಷ ಜಾರಿ
ಕಳೆದು ಹೋಗುವ ಜೀವನ
ನೋವು ನಲಿವು ಹಿರಿಮೆ ಹಬ್ಬ
ಎರಡು ದಿನದ ಗಾಯನ
ಬಣ್ಣ ಹಚ್ಚಿ ಬದುಕಬೇಕು
ನಿತ್ಯ ನೂರು ವೇದನ
ನಕ್ಕು ನಗಿಸಿ ಬಾಳ ಬೇಕು
ಮಣ್ಣು ಸೇರುವ ಮುನ್ನ
ಯಾವುದನ್ನು ತರಲಿಲ್ಲ
ಏನನ್ನೂ ಒಯ್ಯಲಿಲ್ಲ
ಸ್ನೇಹ ಪ್ರೀತಿ ಶಾಂತಿ
ನಮ್ಮ ಬದುಕಿಗೆ ಸಾಧನ
ಇಲ್ಲ ಮುಕ್ತಿ ಮೋಕ್ಷ ಸ್ವರ್ಗ
ಇಲ್ಲ ಪಾಪ ನರಕವು
ಸತ್ಯ ನುಡಿದು ಹೆಜ್ಜೆ ಹಾಕು
ಅದುವೇ ಜೀವನ್ಮುಕ್ತಿಯು


9 thoughts on “ಜೀವನ್ಮುಕ್ತಿ ಕವಿತೆ-ಡಾ ಶಶಿಕಾಂತ ಪಟ್ಟಣ

  1. ಸರ್ ನಿಮ್ಮ ಕವನ ಓದಿದಾಗ ಬೇಂದ್ರೆ ಅಜ್ಜ ನೆನಪಿಗೆ ಬಂದರು. ಹುಸಿನಗುತ ಬಂದೇವ ನಸುನಗುತ ಬಾಳೋಣ,ಯಾಕಾರೆ ಕೆರಳೋಣ ಬಡನೂರು ವರುಷಾನ ಹರುಷದಿ ಕಳೆಯೋಣ.

  2. ಅರಿತಡೆ ಶರಣ ಮರೆತರೆ ಮಾನವ ಅನ್ನುವ ಹಾಗೆ, ಜೀವನವನ್ನು ಏಷ್ಟು ಅರ್ಥ ಪೂರ್ಣವಾಗಿ ಬದುಕಬೇಕು ಅನ್ನುವ ಕವಿತೆಯ ಸಾಲು

Leave a Reply

Back To Top