ಡಾ. ಪುಷ್ಪಾ ಶಲವಡಿಮಠ-ಧವಳ ಶಿಖರ

ಕಾವ್ಯ ಸಂಗಾತಿ

ಧವಳ ಶಿಖರ

ಡಾ. ಪುಷ್ಪಾ ಶಲವಡಿಮಠ

ಅವ್ವಾ!
ನಿನ್ನ ಪ್ರೀತಿಯ
ಸವಿಯುoಡು
ಬಿಸಿಲ ಬದುಕಿಗೆ
ಗರಿ ಮೂಡಿದೆ.

ನನ್ನ ನೀಳ ಕೂದಲ
ಸಿಕ್ಕು ಬಿಡಿಸಿ ಬಾಚಿ
ಮಮತೆಯ ಮಲ್ಲಿಗೆ ಮುಡಿಸಿದಾಗ
ಗುಳಿ ಕೆನ್ನೆಯಲ್ಲಿ ಇಣುಕಿದೆ
ಲಜ್ಜೆಯ ಭಾಷೆ

ಅವ್ವಾ!
ನೀನಿತ್ತ ಬಾಳ ಬುತ್ತಿ
ನಾಳೆಗಾಗಿಯೂ ಕಾಯ್ದಿಟ್ಟಿರುವೆ
ನಿನ್ನ ಮಡಿಲ ತೊಟ್ಟಿಲಲ್ಲಿ ಮಲಗಿದಾಗ
ನೀನು ಬೆರಳಿಂದ ತಲೆ ತಟ್ಟುತ್ತ
ಮೌನವಾಗಿ ಹಾಡಿದ ಜೋಗುಳ
ಎದೆಯಲ್ಲಿ ಬಚ್ಚಿಟ್ಟಿರುವೆ

ಅವ್ವಾ!
ನಾ ನಡೆದಷ್ಟು ದಾರಿಯ
ನೀ ತೋರಿದೆ
ಬದುಕು ಮುಕ್ಕಾಗದಂತೆ
ಬದುಕುವ ಕಲೆಯ ಹೇಳಿಕೊಟ್ಟೆ
ಬೇಸತ್ತು ಬಂದಾಗ ಮಡಿಲು ಕೊಟ್ಟೆ

ಅವ್ವಾ!
ನೀ ಅಂದರss
ಹತ್ತಿಯ ಹೂವಂಗss
ಇರು ನನ್ನ ನೆತ್ತಿಯ ಮ್ಯಾಗ
ಧವಳಶಿಖರ ಗಿರಿಯಂಗss

ಅವ್ವಾ!
ನೀ
ನನ್ನ
ಅವ್ವಾ.


One thought on “ಡಾ. ಪುಷ್ಪಾ ಶಲವಡಿಮಠ-ಧವಳ ಶಿಖರ

  1. ಅವ್ವನ ಪ್ರೀತಿಯ ಆಳ ಅಗಲ ಪದಗಳಲ್ಲಿ ಹದವಾಗಿ ಜೋಡಿಸಿದ್ದೀರಿ.

Leave a Reply

Back To Top