ಇಮಾಮ್ ಮದ್ಗಾರ-ಕಲ್ಪನೆ

ಕಾವ್ಯಸಂಗಾತಿ

ಕಲ್ಪನೆ

ಇಮಾಮ್ ಮದ್ಗಾರ

ನಿನ್ನಧರದ ಮಧು
ಸವಿಯುವ ಮುನ್ನ ಅಮಲೆರಿಸುತ್ತದೆ
ಸಾರಾಯಿ ಅಂಗಡಿಯ ವಾಸನೆಯಂತೆ

ಮಧು ಬಟ್ಟಲು ತುಂಬಿದೆ ಹೀರಬೇಕು ಸೋರುವಮುನ್ನ
ಅಮಲೇರಿಲ್ಲ ಎನ್ನುವಂತೆ

ಕುಡಿಯುವ ಸಾರಾಯಿಯ ಹನಿ ಹನಿಯೂ ಗಂಟಲು ತಾಕಿದಾಗ ಧಗ್ಗನೇ ಉರಿಯುತ್ತದೆ ನಿನ್ನ ನೆನಪಿನಂತೆ

ಪಲ್ಲವಿಸುತಿದೆ ಮನ ಶೃಂಗಾರಕೆ ಇಂಬು ಕೊಡುತಿದೆ ಚಳಿಅದಕೆ
ಮತ್ತೇರಿಸಿ ಮಳ್ಳಿಯಂತೆ ಮರೆಯಾದಂತೆ

ಗೆಜ್ಜೆಗಳಿಂದ ದೂರಾದ ಒಂಟಿ ಗೆಜ್ಜೆಯ ಶಬ್ದ ಶಾಂತವಾಗಿದ್ದ ನದಿಗೆ ಕಲ್ಲೆಸೆದಂತೆ
ಪ್ರೇಮೀ ಯನ್ನಗಲಿದ ಮೈನಾ ಹಕ್ಕಿಯ ಮೌನದಂತೆ

ಅಂಗೈಯಗಲದ ಬದುಕು ಅರಿವಾಗುವ ಮುನ್ನ ಮರೆಯಾಗಿ ಬಿಡುತ್ತದೆ ನಿನ್ನ ಕಣ್ಣಂಚಿನ ಕುಡಿ ನೋಟದಂತೆ

ಮಳೆ ಬಿದ್ದ ಮೊದಲ ದಿನ ಮಣ್ಣ ಕಣದಿಂದ ಹೊರಬರುವ ಸುವಾಸನೆ
ಉದಿಸುತ್ತಿರುವ ಗುಕ್ಕನ ವಿರಹವನ್ನು ಮಥಿಸಲಾರದಂತೆ


Leave a Reply

Back To Top