ಮಾಲಾ ಚೆಲುವನಹಳ್ಳಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಲಾ ಚೆಲುವನಹಳ್ಳಿ

ಸುಂದರ ವದನದ ಹಿಂದಿನ ಕರಾಳತೆಯ
ತೋರಲಿಲ್ಲವೇಕೆ ಹೇಳು
ಮಂದಾರ ಮನದ ಇಂಗಿತವ
ಅರಿಯಲಿಲ್ಲವೇಕೆ ಹೇಳು

ಹೂವು ಚೆಲುವಾಗಿ ಅರಳಲು
ನೇಸರನೊಲುಮೆ ಬೇಕಲ್ಲವೆ
ನೋವು ಮರೆಯಲು ಪ್ರೇಮದ ಬಂಧ
ಬೆಸೆಯಲಿಲ್ಲವೇಕೆ ಹೇಳು

ಸಂಗೀತದ ಮಾಧುರ್ಯ ಕಿವಿಮನಗಳಿಗೆ
ಇಂಪಿನಿoಪು ನೀಡುವುವು
ವೇಗದ ಬದುಕಿನ ಗತಿ ಬಾಂಧವ್ಯಗಳ
ತೊರೆಯಲಿಲ್ಲವೇಕೆ ಹೇಳು

ಮುಪ್ಪು ದೇಹಕ್ಕಷ್ಟೇ ಸೀಮಿತವೆಂಬುದು
ಆಂತರ್ಯದ ಅಭಿಲಾಷೆಯಷ್ಟೆ
ನೆಪ್ಪಾಗಿ ಕಾಡಿದ ಮಿಲನದ ಕ್ಷಣಗಳು
ಮರೆಲಿಲ್ಲವೇಕೆ ಹೇಳು

ಮುಗಿಲ ನಡುವೆ ಚಂದ್ರಮನು ಇಣುಕಿ
ನೋಡುತಿರಲು ನಿನ್ನದೇ ಧ್ಯಾನ
ನಾಗನಾಣ್ಯಕೂ ಮಿಗಿಲಾದ ಪ್ರೀತಿ ಮಾಲಳದ್ದೆoದು
ಬೆರೆಯಲಿಲ್ಲವೇಕೆ ಹೇಳು


Leave a Reply

Back To Top