ಸುಲಭಾ ಜೋಶಿ ಹಾವನೂರ ಕವಿತೆ-ನಿತ್ಯ

ಕಾವ್ಯ ಸಂಗಾತಿ

ನಿತ್ಯ

ಸುಲಭಾ ಜೋಶಿ ಹಾವನೂರ.

ನಿತ್ಯ ಅಂತರಂಗದೊಳ
ರಾಗ ಸಂಯೋಜಿಸುತ
ಸುಮಧುರ ಹಾಡೊಂದು
ಹೆಣೆಯುತ್ತ
ಅನಾಹತ ನಾದದೊಳ
ಪೋಣಿಸುತ್ತ
ರಾಗದೊಳಗಿನ ಲಯ
ಶಬ್ದದೊಳಗಿನ ಸತ್ಯ
ಭಾವದೊಳಗಿನ
ಕಮನೀಯತೆ
ನೆನೆಸುತ್ತ
ಕಾವ್ಯಮೀಮಾಂಸೆಯ
ಭಾವ ವಿಭಾವ ಅನುಭಾವದ ಪರಿಪಾಕ
ಅದು ನಿತ್ಯ ಬದುಕಿನ
ಆಭಾರ ಮನ್ನಣೆಯ
ಪ್ರಕ್ರಿಯೆ
ಕ್ರಿಯಾತ್ಮಕತೆಯ
ಕೈಲಾಸ
ಅದೇ ಅಲ್ಲಿ ಕನಸು
ಕಳೆದು ಹೋಗದಂತೆ
ನೆನಪು ನೆಪವಾಗದಂತೆ
ಧರಿತ್ರೀಯಳಗಿನ ಪ್ರೀತಿಯ ಝರಿಯೊಂದೇ ನಿತ್ಯ
ಉತ್ಪಾತದಿಂದ ಉತ್ಥಾನದ ಕಡೆಗೆ.


Leave a Reply

Back To Top