ಮಹಿಳಾದಿನದ ವಿಶೇಷ
ಹೆಣ್ಣು ಮಾಯೆಯಲ್ಲ ರೇಖಾ ವಿ.ಕಂಪ್ಲಿ ಹೆಣ್ಣು ಮಾಯೆಯಲ್ಲ ಹೆಣ್ಣು ನಿನ್ನ ಛಾಯೆಯೂ ಅಲ್ಲ ಹೆಣ್ಣು ಕಣ್ಣಿಗಬ್ಬವು ಅಲ್ಲ ಹೆಣ್ಣು ಕಾಮ ತೃಷೆಯೂ ಅಲ್ಲ ಹೆಣ್ಣು ಬರೀ ತಾಯಿಯಲ್ಲ ಹೆಣ್ಣು ಹೊನ್ನ ಆಶಿಸುವವಳಲ್ಲ ಹೆಣ್ಣು ಹಣದ ಬೆನ್ನು ಅಲ್ಲ ಹೆಣ್ಣು ಮಂದಾರ ಪುಷ್ಪವಲ್ಲ ಹೆಣ್ಣು ಚೆಂದದ ಗೊಂಬೆಯಲ್ಲ ಹೆಣ್ಣು ಮುನಿಯುವ ಮಾರಿಯಲ್ಲ ಹೆಣ್ಣು ನಿನ್ನ ಅಡಿಯಾಳು ಅಲ್ಲ ಹೆಣ್ಣು ನಿನ್ನ ಬದಲಿಸುವ ಕಣ್ಣು ಹೆಣ್ಣು ಶಕ್ತಿ ತುಂಬುವ ಆಂತಾಯ೯ ಶಕ್ತಿಯೊಂದು ಗಂಡಾದರೇ ಜಗದ್ಯುಕ್ತಿಯಾದವಳೇ ಹೆಣ್ಣು ***********
ಮಹಿಳಾದಿನದ ವಿಶೇಷ
ಮುಖವಾಡ ದಾಕ್ಷಾಯಣಿ ನಾಗರಾಜ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, *******
ಮಹಿಳಾದಿನದ ವಿಶೇಷ
ವಿಪ್ಲವದ ಪತಂಗ ಶೃತಿ ಮೇಲುಸೀಮೆ ವಯಸ್ಸಿನ್ನೂ ಹದಿನಾಲ್ಕು ಎತ್ತ ನೋಡಿದರೂ ಹರಡಿರದ ಮೈ.. ಸಿನಿಮಾ ಮೋಡಿಯೋ ಹದಿವಯಸ್ಸಿನ ಮಂಕೋ ಆಗಿತ್ತಂತೆ ಪ್ರೇಮ.. ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ ಶುರುವಾಯಿತು ಶಾಲೆ ಹೋಗಲ್ಲ ಅನ್ನೋ ಖಯಾಲಿ.. ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು ಸಾಕಿತ್ತು ಇಷ್ಟು ಹೆತ್ತವರಿಗೆ ಊದಿಸಿದರು ವಾಲಗವ ಅಕ್ಷರದ ಬೆಲೆ ತಿಳಿಯದ ಹಿರೀಕರು ಯಾರಿಗೂ ಗೊತ್ತಾಗದಂತೆ ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು ಸಂಸಾರದ ಸುಳಿಗೆ.. ಈಗೇನಿದ್ರೂ ದುಡಿತ ಬಿಡುವಿಲ್ಲದ ಗಳಿಗೆ.. ಹಸಿದ […]
ಮಹಿಳಾದಿನದ ವಿಶೇಷ
ಗೆಳತಿ ಕೇಳೆ ದೀಪಿಕಾಬಾಬು ಗೆಳತಿ ಕೇಳೆ, ಎಲ್ಲರಂತಲ್ಲ ನನ್ನವನು, ನನ್ನವನು ನನಗಾಗಿ ಇರುವವನು..! ತನ್ನ ಹಣೆಯ ಬರಹ ಬರೆದುಕೊಳ್ಳಲಾಗದೆ ಬೇರೆಯೆಲ್ಲರ ವಿಧಿ ಲಿಖಿತ ಬರೆಯುತ್ತ, ಸೃಷ್ಟಿಸಿದ ಮಗಳಾದ ಸರಸ್ವತಿಯನ್ನು ವರಿಸಿದ ಮೂರು ಶಿರವುಳ್ಳ ಬ್ರಹ್ಮನಂತಲ್ಲ, ಕಣೆ ಗೆಳತಿ ನನ್ನವನು..! ಸ್ಮಶಾನದ ಅಧಿಪತಿಯಾಗಿ ಭಸ್ಮ ಬಳಿದುಕೊಂಡು ಕೈಲಾಸನಾಥನೂ ಎನಿಸಿಕೊಂಡು ಪಾರ್ವತಿಯನ್ನು ವಿವಾಹವಾಗಿ ಗಂಗೆಯನ್ನು ಶಿರದಲ್ಲಿ ಮುಡಿದಿಹ ಶಂಕರನಂತಲ್ಲ , ಕಣೆ ಗೆಳತಿ ನನ್ನವನು..! ಶಾಂತ ಸಾಗರದಲ್ಲಿ ಸರ್ಪದ ಮೇಲೆ ಆಯಾಗಿ, ಲೋಕದ ಬಗ್ಗೆ ಚಿಂತಿಸದೆ ಮಲಗಿರುವ, ಶ್ರೀ ಮಹಾಲಕ್ಷ್ಮಿಯು […]
ಮಹಿಳಾದಿನದ ವಿಶೇಷ
ಹೆಣ್ಣಿನ ಸ್ವಗತ ಪ್ರೊ.ಕವಿತಾ ಸಾರಂಗಮಠ ಹೆಣ್ಣಿನ ಸ್ವಗತ ಹೆತ್ತವರಿಗೆ ಸಾಲವಾದೀತೆಂದು ಓದು ತ್ಯಜಿಸಿ ಸದಾ ನಗು ಬೀರುವಳು..! ವರದಕ್ಷಿಣೆ ಭಾರವಾದೀತೆಂದು ಮನ ಹಿಡಿಸದ ಮದುವೆಗೊಪ್ಪಿ ಸದಾ ನಗು ಬೀರುವಳು..! ಗೌರವ ಹಾಳಾದೀತೆಂದು ಕುಡುಕ ಪತಿಯೊಂದಿಗೆ ರಾಜಿಯಾಗಿ ಸದಾ ನಗು ಬೀರುವಳು..! ಇಲ್ಲ ಸಲ್ಲದ ಅಪವಾದಗಳೆಂದು ಒಡನಾಡಿಗಳೊಂದಿಗೆ ಹೊಂದಿಕೊಂಡು ಸದಾ ನಗು ಬೀರುವಳು..! ಸಮಾಜದಿ ಗಾಳವಾಗಬಾರದೆಂದು ಶೀಲಾಪಹರಣಗೊಂಡು ಆತ್ಮಹತ್ಯೆಗೆ ಶರಣಾದರೂ ನಗು ಬೀರುವಳು..! ಊರ್ಮಿಳೆ,ಅಹಲ್ಯೆ, ಸೀತೆಯರಿಗೆ ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು ಸದಾ ನಗು ಬೀರುವಳು..! ಅಸಹಜ ನಗುವ […]
ಕಾವ್ಯಯಾನ
ಮಾಂತ್ರಿಕಳೆಂದು.. ವಿಜಯಶ್ರೀ ಹಾಲಾಡಿ ಮೊದಮೊದಲ ಮಳೆಹನಿಗೆಅವಳು ಕರಗಲಿಲ್ಲಹನಿಯೇ ಕರಗಿತುಮಳೆಧಾರೆಯೇನು …ಕಡಲನ್ನೇ ನುಂಗಿನೊಣೆಯುವ ತಾಕತ್ತಿನವಳು ! ಬೇಡವೆಂದು ದೂಡಿದ್ದಾಳೆಅರಸಿ ಬಂದದ್ದೆಲ್ಲವನ್ನುಕೊನೆಗೆ ಜಗವೆಂಬ ಜಗವನ್ನೂ ..ಕಾವ್ಯವನ್ನು ಮಾತ್ರಹುಡುಕಿ ಹೋಗಿದ್ದಾಳೆಹುಡುಕುತ್ತಲೇ ತಿರುಗಿದ್ದಾಳೆ ಅಲೆಮಾರಿಗೇನು ..ನಿರಾಳ ಬೀದಿಗಳೇಆಲಯಗಳೇತೊರೆಯೇ ಹಳ್ಳಗಳೇ …ಕಡಿದು ಪರ್ವತದಿಣ್ಣೆ ಕೊರಕಲುಗಳನಡುವೆ ಯಾತ್ರೆ ಹೊರಟುಬೇಡವೆಂದು ಕೈಬಿಟ್ಟುಸಂತೆಮಾಳದಲ್ಲಿಸಂಜೆ ಮಾಡಿಕೊಂಡುಇರುಳು ಚಂದ್ರನ ಕೆಳಗೆಕವಿತೆ ಬರೆಯುತ್ತಿದ್ದಳಂತೆಬೆಳಗಿನವರೆಗೂಲಾಂದ್ರ ಹಚ್ಚಿಟ್ಟುಗುಡಾರದಲ್ಲಿ ಗುಡಿ-ಗುಡಿಯ ಸೇದುತ್ತಕೂದಲು ಬಿರಿಹೊಯ್ದುಕನಸು ಚೆಲ್ಲಿತೆಂದುಆಯ್ದು ಕೂತಿದ್ದಳಂತೆ ಊರ ಜನ ಮಾಂತ್ರಿಕ-ಳೆಂದು ಅಡ್ಡಬೀಳಲುಅಂಗಲಾಚಲು ಶುರು-ವಿಟ್ಟುಕೊಂಡಾಗಓ ಅದೇ ಬೆಟ್ಟದಕೆಳಗೆ ನದಿಯ ಗುಂಟನಡೆದುಹೋದಳಂತೆಮತ್ತಿನ್ಯಾರೂಕಾಣಲಿಲ್ಲವಂತೆ ! ****** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ
ಕಾವ್ಯಯಾನ
ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ ಮೂಗಪ್ಪ ಗಾಳೇರ ನೀನು ಬಿಟ್ಟು ಹೋದ ಮೇಲೆ ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ…….. ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ; ಯಾಕೆ ಗೊತ್ತಾ ……? ನೀನು ಬಿಟ್ಟು ಹೋದ ನೆನಪುಗಳು ನನ್ನ ಹೃದಯದ ಅಂಗಳದಲ್ಲಿ ಅರಳಿದ ಹೂಗಳಾಗಿಯೇ ಉಳಿದಿವೆ ಹಾಗಾಗಿ ನಾನು ಅತ್ತರೆ…… ಆ ಕಣ್ಣೀರಿನ ಬಿಸಿ ತಾಕಿದಡೆ ಹೂವುಗಳು ಬಾಡಬಹುದೆಂಬ ಭಯ ವಷ್ಟೇ ನನ್ನ ನಸುನಗೆ ಕಾರಣ…….! ನೀನು ಹೋದ ಮೇಲೆ ಒಂಟಿ ಜೀವನ ಗತಿಯೆಂದು ಖಾಲಿಯಾದ ಬಾಟಲಿ ಹಿಡಿದು ಯಾರು ಇಲ್ಲದ ಬೀದಿಯಲ್ಲಿ […]
ಕಾವ್ಯಯಾನ
ಜೀವರಾಮ ಅಶ್ವಥ್ ವಾರಕ್ಕೆ ಮೂರುದಿನ ಮಡಿಯಾಗಿ , ಮಂಡಿನೋವು ತೀರಲೆಂದು ಕೋರಿಕೊಂಡಳು ಮಂಡಿಯೂರಿ ಪರಿಪರಿ ಬೇಡಿಕೊಂಡಳು ಕಡೆಗೆ ಅಮ್ಮ ತೀರಿಕೊಂಡಳು! ಬೇಡುವ ಆರ್ತನಾದ ಕೇಳಿ ನಿಂತ ಹುಡುಗ, ಬಿಕ್ಕಳಿಸೆ ಅಮ್ಮನ ತಪಸ್ಸಿಗೆ ಭಂಗವೆಂದು ಬಿಸಿಯುಸಿರು ಬಾಯೊಳಗೇ ಬಿಗಿಹಿಡಿದಿದ್ದು ದೂರದೂರಲಿ ಬಿಕ್ಕಳಿಸಿದ, ಅವಳಿಲ್ಲವೆಂದು. ಫಲಿಸಿಬಿಟ್ಟಿತೇ ಅಮ್ಮನ ಸುದೀರ್ಘ ಪ್ರಾರ್ಥನೆ? ಅಮ್ಮನೂ ಇಲ್ಲದ ಮೇಲೆ ಮಂಡಿನೋವೂ ಇಲ್ಲ. ಹಾಗೆಂದುಕೊಂಡು ಹುಡುಗ ಸುಮ್ಮನಾಗಲಿಲ್ಲ ನೋವು ತೀರಿಸುವ ಯೋಚನೆಯ ಬಿಡಲಿಲ್ಲ ಹುಡುಗನ ಇನ್ನಿಲ್ಲದೆ ಬಾಧಿಸಿ ಅಮ್ಮನ ನೋವು, ಅವಳ ಪ್ರಾರ್ಥನೆಯ ನೆನಪೆಲ್ಲವ ಬಿಗಿಹಿಡಿದ […]
ಕಾವ್ಯಯಾನ
ಮೂಖವೇದನೆ ಪ್ಯಾರಿಸುತ ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ ಗಾಳಿಯೊಳಗೆ ಪ್ರೀತಿಗಂಧವಿಲ್ಲ ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ ಕಣ್ಣೋಟದಲ್ಲಿ ಹರಿತಮೋಹವಿಲ್ಲ ಹೂವಿನ ಸುತ್ತ ಮಕರಂಧ ಹೀರುವ ದುಂಬಿಯಂತೆ ಅಲೆಯುತ್ತಿವನನ್ನು ಮತ್ತದೇ ಮಾತು ಮೂಗನಾಗಿಸಿದೆ ಅದೆಲ್ಲವೂ ಇಲ್ಲದ ಮೇಲೆ ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ ಮುಸ್ಸಂಜೆಯಲಿ ಮಿಂಚುಹುಳುವಿನಂತೆ ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ ಈ ಪುಟ್ಟ […]
ಕಾವ್ಯ ಯಾನ
ಆದೇ ಅಪ್ಪನಂತೆ ಏಕೆ? ಜಿ.ಲೋಕೇಶ್ ನನ್ನಪ್ಪಂಥನಾಗಲು ನನಗಿಷ್ಟೂ ಇಷ್ಟವಿರಲಿಲ್ಲ ಮೌನವಾಗಿರಲು ಬಯಸುತ್ತಿದ್ದ ನನಗೆ ಹೇಳಿದ್ದೆ ಹೇಳುತ್ತಿದ್ದ ಅವನ ಮಾತುಗಳು ಸದಾ ಅವೇ ಅಕ್ಷತೆಯ ಮಂತ್ರಗಳು ಶಾಲೆಯಲ್ಲಿ ಮಗುವೊಂದು ಮರೆಯದೇ ಹೇಳುತ್ತಿದ್ದ ರಾಷ್ಟ್ರಗೀತೆಯಂತೆ ಗುಡಿಯ ಕಲ್ಲು ವಿಗ್ರಹ ಕಿವಿಯಿದ್ದರೂ ಕೇಳಿಸಿಕೊಳ್ಳದಂತೆ ನಾನು ನಿಲ್ಲುತ್ತಿದ್ದೆ ತಡೆದು ವಾಕರಿಕೆ, ಬೇಸರಿಕೆ. ಯಾವತ್ತೂ ಪ್ರತಿಕ್ರಯಿಸದೇ ನನ್ನೊಳಗೆ ಸತ್ತೇ ಹೋಗುತ್ತಿದ್ದ ಪ್ರತಿ ಹೇಳಿಕೆ ಇದ್ದಕ್ಕಿದ್ದಂತೆ ಒಂದು ದಿನ ನನ್ನಪ್ಪ ಮಾತುಗಳನ್ನು ಅನಾಥವಾಗಿಸಿ ಹೊರಟುಬಿಟ್ಟ! ಎಂಥಾ ಆಶ್ಚರ್ಯ! ನಾನೀಗ ಸಲುಹುತ್ತಿದ್ದೇನೆ ಅವನದೇ ಮಾತುಗಳನ್ನು ಯಥಾ ಪ್ರಕಾರ! […]