ಕಾವ್ಯಯಾನ

ಮೂಖವೇದನೆ

Person Blowing Purple and Brown Powder

ಪ್ಯಾರಿಸುತ

ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ
ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ
ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ
ಗಾಳಿಯೊಳಗೆ ಪ್ರೀತಿಗಂಧವಿಲ್ಲ
ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ
ಕಣ್ಣೋಟದಲ್ಲಿ ಹರಿತಮೋಹವಿಲ್ಲ
ಹೂವಿನ ಸುತ್ತ ಮಕರಂಧ ಹೀರುವ
ದುಂಬಿಯಂತೆ ಅಲೆಯುತ್ತಿವನನ್ನು
ಮತ್ತದೇ ಮಾತು ಮೂಗನಾಗಿಸಿದೆ
ಅದೆಲ್ಲವೂ ಇಲ್ಲದ ಮೇಲೆ
ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ

ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ
ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ
ಮುಸ್ಸಂಜೆಯಲಿ ಮಿಂಚುಹುಳುವಿನಂತೆ
ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ
ಈ ಪುಟ್ಟ ಹೃದಯದೊಳಗಿದ್ದ ನಿನ್ನ ಮಧುರದನಿಯ ಹರ್ಷೋಘಾರವೂ ನನ್ನಂತೆ ನಿಶ್ಚಲವಾಗಿದೆ
ಇಂದು ಅದೆಲ್ಲವೂ ಸಹಜ ದೂರದಿಂದ
ಅಣಿಕಿಸುವಂತೆ ಮಾರ್ಪಟ್ಟಿವೆ
ಅಥವಾ…
ಮಾರ್ಪಡುವಂತೆ ನೀ ಪ್ರೇರಿಪಿಸಿದೆ…!

**********************

Leave a Reply

Back To Top