ಕಾವ್ಯ ಸಂಗಾತಿ
ಸುಹಾಸ್ ಶ್ರೀವತ್ಸ
ಭಾವಗೀತೆ


ಈ ಬದುಕ ಬದುಕುವುದ ಕಲಿಯಲು ಈ ಬದುಕು ಸಾಕೇ?
ಈ ಬದುಕ ಸವಿಯ ಸವಿಯಲು ಈ ಬದುಕು ಸಾಕೇ?
ನಿನ್ನ ಜೀವನವೇ ಒಂದು ಹಾಡು,
ಅದರ ಸಾಲು ಬರೆದವರಾರು?
ಅರಿಯದ ಪದಗಳಿಗೂ ಅರ್ಥವಿದೆ,
ಲಯದಲಿ ಹಾಡಿದರೆ ಹಿತವಿದೆ.
ಹಾಡಿನ ಭಾಷೆಯೇ ಬೇರಾದರೂ,
ಭಾವಕ್ಕೆ ಬೇಕಿಲ್ಲ ಭಾಷಾಂತರ;
ಇದ್ದರೂ ಬದುಕಿನಲ್ಲಿ ಎಷ್ಟೇ ಅಂತರ,
ನಿನ್ನ ಬದುಕನ್ನು ಪ್ರೀತಿಸು ನೀ ನಿರಂತರ.
ಯಾರದೋ ರಾಗಕ್ಕೆ, ಯಾರದೇ ತಾಳಕ್ಕೆ,
ನಿನ್ನ ಸ್ವರವನ್ನು ಶ್ರುತಿಯಲಿ ಸೇರಿಸು;
ಜೀವವು ಜನನಿಯದು,
ಜೀವನ ನಿನ್ನದು.
ಸುಹಾಸ್ ಶ್ರೀವತ್ಸ




ಚನ್ನಾಗಿದೆ
ಹೃದಯಕ್ಕೆ ತುಂಬಾ ಹತ್ತಿರವಾಗುವ ಸಾಲುಗಳು. ತುಂಬಾ ಚೆನ್ನಾಗಿದೆ.
ತುಂಬ ಚೆನ್ನಾಗಿದೆ
Nice one
ಬದುಕಿನ ಸಾರವನ್ನು ತುಂಬಾ ಸರಾಗವಾಗಿ ತಿಳಿಸಿದ್ದಿರಿ
Super ag edhe Suhas avre..
ಜೀವನ ಹೇಗೆ ಹರಿಯುತ್ತದೆ ಎಂಬುದನ್ನು ನೀವು ಸುಂದರವಾಗಿ ವಿವರಿಸಿದ್ದೀರಿ ಅಣ್ಣಾ. ಭವಿಷ್ಯದಲ್ಲಿ ಇಂತಹ ಲಕ್ಷಾಂತರ ಶ್ರೀಮಂತ ಚಿಂತನಶೀಲ ಕವಿತೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೇನೆ.ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ನೀಡಲಿ.
Super