ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಈ ಬದುಕ ಬದುಕುವುದ ಕಲಿಯಲು ಈ ಬದುಕು ಸಾಕೇ?
ಈ ಬದುಕ ಸವಿಯ ಸವಿಯಲು ಈ ಬದುಕು ಸಾಕೇ?

ನಿನ್ನ ಜೀವನವೇ ಒಂದು ಹಾಡು,
ಅದರ ಸಾಲು ಬರೆದವರಾರು?
ಅರಿಯದ ಪದಗಳಿಗೂ ಅರ್ಥವಿದೆ,
ಲಯದಲಿ ಹಾಡಿದರೆ ಹಿತವಿದೆ.

ಹಾಡಿನ ಭಾಷೆಯೇ ಬೇರಾದರೂ,
ಭಾವಕ್ಕೆ ಬೇಕಿಲ್ಲ ಭಾಷಾಂತರ;
ಇದ್ದರೂ ಬದುಕಿನಲ್ಲಿ ಎಷ್ಟೇ ಅಂತರ,
ನಿನ್ನ ಬದುಕನ್ನು ಪ್ರೀತಿಸು ನೀ ನಿರಂತರ.

ಯಾರದೋ ರಾಗಕ್ಕೆ, ಯಾರದೇ ತಾಳಕ್ಕೆ,
ನಿನ್ನ ಸ್ವರವನ್ನು ಶ್ರುತಿಯಲಿ ಸೇರಿಸು;
ಜೀವವು ಜನನಿಯದು,
ಜೀವನ ನಿನ್ನದು.


About The Author

8 thoughts on “ ಸುಹಾಸ್ ಶ್ರೀವತ್ಸ ಅವರ ಭಾವಗೀತೆ”

  1. ಹೃದಯಕ್ಕೆ ತುಂಬಾ ಹತ್ತಿರವಾಗುವ ಸಾಲುಗಳು. ತುಂಬಾ ಚೆನ್ನಾಗಿದೆ.

  2. ಸುಪ್ರಿಯ

    ಬದುಕಿನ ಸಾರವನ್ನು ತುಂಬಾ ಸರಾಗವಾಗಿ ತಿಳಿಸಿದ್ದಿರಿ

  3. ಜೀವನ ಹೇಗೆ ಹರಿಯುತ್ತದೆ ಎಂಬುದನ್ನು ನೀವು ಸುಂದರವಾಗಿ ವಿವರಿಸಿದ್ದೀರಿ ಅಣ್ಣಾ. ಭವಿಷ್ಯದಲ್ಲಿ ಇಂತಹ ಲಕ್ಷಾಂತರ ಶ್ರೀಮಂತ ಚಿಂತನಶೀಲ ಕವಿತೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೇನೆ.ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ನೀಡಲಿ.

Leave a Reply

You cannot copy content of this page

Scroll to Top